ತಾಲೂಕಾ ಗೃಹರಕ್ಷಕ ‌ದಳ‌ದಿ0ದ ಆರೋಗ್ಯ ಅರಿವು ಕಾರ್ಯಕ್ರಮ

ಕುಷ್ಟಗಿ, ಡಿ .24: ಇಂದು  ಸಾರ್ವಜನಿಕ ಆಸ್ಪತ್ರೆ ಕುಷ್ಟಗಿ ಹಾಗೂ  ತಾಲೂಕಾ ಗೃಹರಕ್ಷಕ ‌ದಳ‌ ಕುಷ್ಟಗಿ  ‌ಇವರ ಸಹಯೋಗದೊಂದಿಗೆ ಗೃಹರಕ್ಷಕದಳದ ಸದಸ್ಯರಿಗೆ ಆರೋಗ್ಯ ಅರಿವು  ಕಾರ್ಯಕ್ರಮ ನೀಡಲಾಯಿತು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಗಳಾದ ಚನ್ನಬಸಪ್ಪ   HIV AIDS ಬಗ್ಗೆ ಮಾತನಾಡುತಾ. ವ್ಯಕ್ತಿಗೆ  HIV ಬಗ್ಗೆ ‌ತಿಳುವಳಿಕೆ‌ ಇಲ್ಲದಾಗ ಇದು ಒಂದು  ಹೆದರಿಕೆ ಇರುವ ಕಾಯಿಲೆಯಾಗಿರುತ್ತದೆ. ಯಾವಾಗ HIV ಹರಡುವ ಮಾರ್ಗಗಳು. ತಡೆಗಟ್ಟುವ ಮಾರ್ಗಗಳು. ಚಿಕಿತ್ಸೆ. ಹಾಗೂ HIV  ಜತೆಗೆ ಉತ್ತಮ ಜೀವನ ನಡೆಸಬಹುದು ಎಂದು ಕಂಡುಕೊಂಡಾಗ ಇದು ಹೆದರಿಕೆ ಇಲ್ಲದ ಕಾಯಿಲೆಯಾಗುತ್ತದೆ ಎಂದು‌ ತಿಳಿಸಿದ ಅವರು ರೋಗ ಮುಕ್ತ ಸಮಾಜಕ್ಕೆ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು. ಹಾಗೂ ಪ್ರತಿಯೊಬ್ಬರೂ HIV ಬಗ್ಗೆ ತಿಳಿದುಕೊಂಡು, HIV ಪರೀಕ್ಷೆ ಮಾಡಿಸಿಕೊಂಡು. ಹಾಗೂ ‌HIV ಮುಕ್ತರಾಗಬೇಕು. ಹಾಗೂ 2030 ಕ್ಕೆ HIV ಮುಕ್ತ ಭಾರತವಾಗಲು ಎಲ್ಲರೂ‌ ಕೈ ಜೋಡಿಸಬೇಕೆಂದು‌ ಹೇಳಿದರು.

ಹಾಗೂ ‌TB ಬಗ್ಗೆ ವೆಂಕಟೇಶ ಅವರು ಮಾತನಾಡುತ್ತಾ ಇದು  ಒಂದು ಬೇರೂರಿದ ಕಾಯಿಲೇಯಾಗಿದೆ.  ಪ್ರತಿಯೊಬ್ಬರೂ TB ಬಗ್ಗೆ ತಿಳಿದು ಕೊಂಡು TB ಸೋಲಿಸಲು ಕೈಜೋಡಿಸಿಬೇಕೆಂದು ಹೇಳಿದರು. ಹಾಗೂ ಬಾಲಾಜಿ ರವರು ಮಾತನಾಡತ್ತಾ ಮನುಕುಲಕ್ಕೆ ರಕ್ತ ದ‌ ಅವಶ್ಯಕತೆ ಬಹಳ ಇದೆ. ರಕ್ತಕ್ಕೆ ‌ಸರಿಸಮವಾದ ವಸ್ತು ಈ ಜಗತ್ತನಲ್ಲಿ‌ ಇಲ್ಲಾ ಕಾರಣ 18 _ವರ್ಷ ಮೇಲ್ಪಟ್ಟು ಹಾಗೂ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ‌ರಕ್ತಾದಾನ ಮಾಡಬೇಕೆಂದು ಹೇಳಿದರು. ಹಾಗೂ ಅರೋಗ್ಯವಂತ ವ್ಯಕ್ತಿಯಾಗಲು HIV . HBsAg. TB. ಮಧುಮೇಹ ದಿಂದ ಮುಕ್ತನಾಗಿರಬೇಕು.ಅಂದಾಗ ಮಾತ್ರ‌ ರಕ್ತದಾನ ಮಾಡಲು ಸಾದ್ಯ‌ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ಸೀನಿಯರ್ ಪ್ಲಟೂನ ಕಮಾಂಡರ್ ಅವರು ವಹಿಸಿ ಇಂತಹ ಕಾರ್ಯಕ್ರಮ ಗಳಿಂದ ಗೃಹರಕ್ಷಕ ಆರೋಗ್ಯ ಕುರಿತು ಜಾಗ್ರತೆ ಮೂಡಿಸಿದಂತಾಗುವದು ಕಾರಣ ಆರೋಗ್ಯ ಇಲಾಖೆಯ ಸಹಕಾರ  ಬಹಳ ಮುಖ್ಯ ಎಂದು ನುಡಿದರು. ಅಥಿತಿ ಗಳಾದ ಪ್ಲಟೂನ ಕಮಾಂಡರ್ ನಾಗರಾಜ ಬಡಿಗೇರೆ ,ಘಟಕಾಧಿಕಾರಿ ಶಿವಪ್ಪ ಚೂರಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top