ಬೆಂಗಳೂರು: ಚಿಕ್ಕಪೇಟೆಯ ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ಆಶ್ರಯದಲ್ಲಿ ಚಾತುರ್ಮಾಸದ ಪೂಜೆಗಾಗಿ ಆಚಾರ್ಯದೇವ ಅಭಯಶೇಖರಸುರೀಶ್ವರ್ಜಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಈ ಬಾರಿ ಅಧಿಕ ಮಾಸ ಇರುವ ಕಾರಣ ಐದು ತಿಂಗಳ ಕಾಲ ಶ್ರೇಷ್ಠ ಜ್ಞಾನಿ ಹಾಗೂ ಸರ್ವಶ್ರೆಷ್ಠ ಪುಸ್ತಕಗಳನ್ನು ಬರೆದಿರುವ ಅಭಯಶೇಖರಸುರೀಶ್ವರ್ಜಿ ವಿಶೇಷ ಉಪನಾಸ ನೀಡಲಿದ್ದಾರೆ.
ಅಭಯಶೇಖರಸುರೀಶ್ವರ್ಜಿ ಆಗಮನದಿಂದ ಸಂಘದಲ್ಲಿ ಆನಂದ ಮತ್ತು ಅಮಿತೋತ್ಸಾಹ ಕಂಡು ಬಂತು. ಮುಂಬೈನಿಂದ ಬರಿಗಾಲಲ್ಲಿ ೧೨೦೦ ಕಿಲೋಮೀಟರ್ ದೂರದಿಂದ ಸಾಗಿ ಬಂದಿರುವ ಅವರು ಬಿವಿಕೆ ಅಯ್ಯಂಗಾರ್ ರಸ್ತೆಯ ಮೂಲಕ ಚಿಕ್ಕಪೇಟೆ ಮೂಲಕ ಪುರ ಪ್ರವೇಶ ಮಾಡಿದರು.
ಧರ್ಮಸಭೆಯಲ್ಲಿ ಸಂಘದ ಅಧ್ಯಕ್ಷ ಗೌತಮ್ ಚಂದ್‌ಜಿ ಸೋಲಂಕಿ ಮಾತನಾಡಿ, ಚಾತುರ್ಮಾಸದಲ್ಲಿ ನಾವೆಲ್ಲರೂ ಸೇರಿ ಜ್ಞಾನದ ಗರಿಷ್ಠ ಲಾಭ ಪಡೆಯಬೇಕು. ಗುರುದೇವರು ಜ್ಞಾನದ ನಿಧಿ ಹೊತ್ತು ತಂದಿದ್ದು, ಎಲ್ಲರೂ ಜ್ಞಾನವಂತರಾಗೋಣ ಎಂದರು.
Facebook
Twitter
LinkedIn
Pinterest
WhatsApp
Email
Print
Telegram