ಶಾಂಗ್ರಿಲಾ ಹೋಟೆಲ್ ನಲ್ಲಿ ಡಿ 16, 17 ಮತ್ತು 18 ರಂದು ಪ್ರದರ್ಶನ ಮತ್ತು ಮಾರಾಟ ಮೇಳ: ಚಿತ್ರನಟಿ ರಾಗಿಣಿ ದ್ವಿವೇದಿ ಉದ್ಘಾಟನೆ
ಬೆಂಗಳೂರು : ದಕ್ಷಿಣ ಭಾರತದ ಅತ್ಯಂತ ಮಹತ್ವದ. ಮನಮೋಹಕ ಆಭರಣ ಮಾರಾಟ ಮತ್ತು ಪ್ರದರ್ಶನ ಮೇಳ 49 ನೇ “ಏಷ್ಯಾ ಜುವೆಲ್ಸ್ ಶೋ – 2023” ನಗರದ ಶಾಂಗ್ರಿಲಾ ಹೋಟೆಲ್ ಆರಂಭವಾಗಿದೆ. ಡಿ. 18 ರ ವರೆಗೆ ನಡೆಯಲಿರುವ ಆಭರಣ ಮೇಳದಲ್ಲಿ ದೇಶದ ಹಲವು ಪ್ರಮುಖ ಆಭರಣ ಸಂಸ್ಥೆಗಳಿಂದ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ. ಮೊದಲ ಬಾರಿಗೆ ಎಕ್ಸ್ ಪೋದಲ್ಲಿ ದೇಶದ ಉನ್ನತ ಆಭರಣ ತಯಾರಕರಿಂದ ಹಿಂದೆಂದೂ ಕಂಡರಿಯದಂತಹ ಆಭರಣ ವಿನ್ಯಾಸಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತಿದೆ. ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ ಇರಲಿದ್ದು, ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಮೇಳ ಉದ್ಘಾಟಿಸಿದರು.
ನಂತರ ಮಾತನಾಡಿದ ರಾಗಿಣಿ ದ್ವಿವೇದಿ ಮಾತನಾಡಿ, ಏಷ್ಯಾ ಜುವೆಲ್ಸ್ ಶೋ ನಲ್ಲಿ ಅತ್ಯಂತ ವಿನೂತನ, ವಿಶೇಷ ಮತ್ತು ಉನ್ನತ ವಿನ್ಯಾಸದ ಆಭರಣಗಳನ್ನು ಮೇಳದಲ್ಲಿ ಪ್ರದರ್ಶಿಸುತ್ತಿದ್ದು, ಪ್ರದರ್ಶನದಲ್ಲಿ ಚಿನ್ನ, ವಜ್ರ, ಪ್ಲಾಟಿನಂ, ಸಾಂಪ್ರದಾಯಿಕ, ಮದುವೆ, ಪ್ರಾಚೀನ, ಅಪರೂಪದ ಕಲ್ಲಿನ ಆಭರಣಗಳು, ಕುಂದನ್, ಜಾಡುವ ಮತ್ತು ಪೊಲ್ಕಿ, ಬೆಳ್ಳಿಯ ಆಭರಣಗಳನ್ನು ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿದೆ. ಮುಂಬರುವ ಮದುವೆ ಮತ್ತು ಹಬ್ಬದ ಋತುವಿಗಾಗಿ ತಮಗೆ ಒಪ್ಪಿಗೆಯಾಗುವ ಆಭರಣಗಳನ್ನು ಖರೀದಿಸಬಹುದು ಇಲ್ಲವೆ ಮುಂಗಡ ಕಾಯ್ದಿರಿಸಬಹುದಾಗಿದೆ. ಒಂದೇ ಸೂರಿನಡಿ ಎಲ್ಲಾ ರೀತಿಯ ಆಭರಣಗಳ ವೈಶಿಷ್ಟ್ಯತೆಯನ್ನು ಇದು ಒಳಗೊಂಡಿದೆ. ದಕ್ಷಿಣ ಭಾರತದಲ್ಲಿ ಸೊಗಸಾದ ಮತ್ತು ವಿಶ್ವ ದರ್ಜೆಯ ಆಭರಣಗಳನ್ನು ಖರೀದಿಸಲು ಇದು ಪರಿಪೂರ್ಣ ತಾಣವಾಗಿದೆ ಎಂದು ಹೇಳಿದರು.
ಬೆಂಗಳೂರು, ಮುಂಬೈ, ದೆಹಲಿ, ಜೋಧ್ ಪುರ್, ಹೈದ್ರಾಬಾದ್ ನ ಆಭರಣ ಮಾರಾಟಗಾರರಿಂದ ಮನಮೋಹಕ ಮತ್ತು ವರ್ಚಸ್ಸಿ ಬ್ರ್ಯಾಂಡ್ ಗಳನ್ನು ಪ್ರದರ್ಶಿಸಲಾಗುತ್ತಿದೆ. ಸೊಗಸಾದ ಪ್ರದರ್ಶನಕ್ಕೆ ಭಾರತದಾದ್ಯಂತದ ಉನ್ನತ ಬ್ರಾಂಡ್ ಗಳ ಅಂತರರಾಷ್ಟ್ರೀಯ ಆಭರಣ ವಿನ್ಯಾಸಗಳ ಬೆರಗುಗೊಳಿಸುವ ಶ್ರೇಣಿಯನ್ನು ಇದು ಒಳಗೊಂಡಿದೆ.
ಮೇಳದಲ್ಲಿ ಬೆಂಗಳೂರಿನ ಗಜರಾಜ್ ಜುವೆಲರ್ಸ್, ನಿಖಾಹರ್ ಜುವೆಲ್ಸ್, ನವರತನ್ ಜುಲವೆಲರ್ಸ್, ಸಿಂಹ ಜುವೆಲರ್ಸ್, ಪಿಎಂಜೆ ಜುವೆಲರ್ಸ್, ಎಂಪಿ ಜುವೆಲರ್ಸ್, ಶ್ರೀ ಜುವೆಲ್ಸ್, ಟ್ರೈ-ಡಿಯ ಜುವೆಲರ್ಸ್, ದೆಹಲಿಯ ಸೆಹಗಲ್ ಜುವೆಲರ್ಸ್, ಶ್ರೈನ್ಸ್ ಜುವೆಲ್ಸ್, ಕರಾಟ್, ಶ್ರೀ ಪರಮಣಿ ಜುವೆಲ್ಸ್, ಮುಂಬೈನ ನೆಹಾ ಕ್ರಿಯೇಷನ್ಸ್, ರೇಣುಕಾ ಫೈನ್ ಜುವೆಲ್ಲರಿ, ಎವರ್ ಬ್ರೈಟ್ ಜುವೆಲ್ಸ್, ಹೈದ್ರಾಬಾದ್ ನ ಜಗ್ದಾಂಬ ಪರ್ಲ್ಸ್, ತ್ಯಾಯನಿ ಬೈ ಕರಣ್ ಜೋಹರ್, ಎಸ್ಸೆನ್ಸ್ ಜುವೆಲ್ಸ್, ಜೈಪುರದ ಪರಮ್ ಗೆಮ್ಸ್, ಎಫ್.ಝಡ್ ಜೆಮ್ಸ್, ಬಾಲಾಜಿ ಪರ್ಲ್ಸ್ ಮತ್ತಿತರೆ ಆಭರಣ ಮಳಿಗೆಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.