ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರದಲ್ಲಿ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ

ಡಿ 25 ರಿಂದ ಜನವರಿ 5 ರವರೆಗೆ ಮೂರು ಲಕ್ಷಕ್ಕೂ ಅಧಿಕ ಜಾನುವಾರುಗಳು ಪಾಲ್ಗೊಳ್ಳುವ ನಿರೀಕ್ಷೆ

ಬೆಂಗಳೂರು : ದೊಡ್ಡಬಳ್ಳಾಪುರ ತಾಲ್ಲೂಕು ಶ್ರೀ ಘಾಟಿ ಸುಬ್ರಮಣ್ಯಸ್ವಾಮಿ ಕ್ಷೇತ್ರದಲ್ಲಿ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ ಆಯೋಜಿಸಿದ್ದು, ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟ ಸಂತೆ ಏರ್ಪಡಿಸಲಾಗಿದೆ. ಡಿ. 25 ರಿಂದ ಜನವರಿಗೆ 5 ರವರೆಗೆ 10 ದಿನಗಳ ದನಗಳ ಜಾತ್ರೆ ನಡೆಯಲಿದೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ನವ ಕರ್ನಾಟಕ ಯುವ ಶಕ್ತಿ ವೇದಿಕೆ ಅಧ್ಯಕ್ಷ, ರೈತ ಅಂಬರೀಶ್, ಶತಮಾನಕ್ಕೂ ಮೀರಿದ ಇತಿಹಾಸ ಹೊಂದಿರುವ ದನಗಳ ಜಾತ್ರೆ ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ನಡೆದಿರಲಿಲ್ಲ. ವಿಶೇಷ ತಳಿಯ ಹಳ್ಳಿಕಾರ್ ಹಸುಗಳು ಸೇರಿ  ಜಾತ್ರೆಯಲ್ಲಿ 3 ಲಕ್ಷಕ್ಕೂ ಹೆಚ್ಚು  ಜಾನುವಾರುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಾತ್ರೆಗೆ ಉಚಿತ ಪ್ರವೇಶವಿದ್ದು, ನೀರು, ಮೇವು ಮತ್ತಿತರ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

40 ಎಕರೆ ವಿಸ್ತೀರ್ಣದಲ್ಲಿ ಜಾತ್ರೆಗೆ ವ್ಯವಸ್ಥೆ ಮಾಡಿದ್ದು, ರೈತರಿಗೆ ತಂಗುದಾಣದ ವ್ಯವಸ್ಥೆ, ಸೂಕ್ತ ಭದ್ರತೆ ಒದಗಿಸಲಾಗುವುದು. ಹೈದರಾಬಾದ್‌ ಕರ್ನಾಟಕ, ಮಂಡ್ಯ, ಮೈಸೂರು, ರಾಮನಗರ,ಚಿಕ್ಕಬಳ್ಳಾಪುರ, ತಮಿಳುನಾಡಿನ ಹೊಸೂರು, ಆಂಧ್ರಪ್ರದೇಶದ ರೈತರು ಜಾನುವಾರುಗಳ ಖರೀದಿ ಮತ್ತು ಮಾರಾಟಕ್ಕಾಗಿ ಆಗಮಿಸಲಿದ್ದಾರೆ. ರೈತರು ಮತ್ತು ರಾಸುಗಳಿಗೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯಿಂದ ಸೌಕರ್ಯ ಕಲ್ಪಿಸಲಾಗುತ್ತಿದೆ. ತಾತ್ಕಾಲಿಕವಾಗಿ ಪಶುಆಸ್ವತ್ರೆ ತೆರೆದು ಜಾನುವಾರುಗಳು ಯಾವುದೇ ರೋಗಗಳಿಗೆ ತುತ್ತಾಗದಂತೆ ಲಸಿಕೆಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಲಕ್ಷ್ಮೀಪತಿ ಸಿ., ಪ್ರಧಾನ ಕಾರ್ಯದರ್ಶಿ ಉದಯಾರಾಧ್ಯ ಟಿ.ಎಸ್. ಸಹ ಕಾರ್ಯದರ್ಶಿ ಕನಕರಾಜು ಜಿ. ಖಜಾಂಚಿ ಮುಬಾರಕಲ್ ಷರೀಫ್‌ ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top