ಬಳ್ಳಾರಿ: ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಸಮಾರಂಭ ಸಂಭ್ರಮದಲ್ಲಿ ಬಳ್ಳಾರಿಯ ಸರಳಾದೇವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿ, ವರದಿಗಾರಿಕೆ, ನುಡಿಚಿತ್ರ ಬರಹ ಹಾಗೂ ಛಾಯಾಚಿತ್ರ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ರಾಜ್ಯಮಟ್ಟದ ಮಾಧ್ಯಮ ಹಬ್ಬ ದಲ್ಲಿ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು, (ಸ್ವಾಯತ್ತ) ಬಳ್ಳಾರಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ವರದಿ ಬರವಣಿಗೆ ಎಮ್. ಜನಾರ್ದನ ಪ್ರಥಮ ಸ್ಥಾನ, ನುಡಿಚಿತ್ರ ಬರವಣಿಗೆ ಶೇಖರ್, ದ್ವಿತೀಯ ಸ್ಥಾನ, ಛಾಯಾಚಿತ್ರ ಹೊಲಾಚಿ ರಾಹುಲ್ ದ್ವಿತೀಯ ಸ್ಥಾನ ಪಡೆದು ಬಹುಮಾನ ಮತ್ತು ಪ್ರಮಾಣಪತ್ರ ಸ್ವಿಕರಿಸಿದರು.
ರಾಜ್ಯ ಮಟ್ಟದ ಮಾಧ್ಯಮ ಹಬ್ಬ”ಸಂಭ್ರಮ-2023″ರಲ್ಲಿ ಸ್ಪರ್ಧೆಗಳಲ್ಲಿ ಜಯಗಳಿದ ವಿದ್ಯಾರ್ಥಿಗಳಿಗೆ ಡಾ.ಹೆಚ್.ಎಂ ಮಂಜುನಾಥ ರೆಡ್ಡಿ ಅಭಿನಂದನೆಗಳು ಸಲ್ಲಿಸಿದರು. ಜುಲೈ 13 ಮತ್ತು 14 ರಂದು ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ “ರಾಜ್ಯ ಮಟ್ಟದ ಮಾಧ್ಯಮ ಹಬ್ಬ” – ಸಂಭ್ರಮ – 2023ರಲ್ಲಿ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.
ಒಟ್ಟಾರೆಯಾಗಿ ರನ್ನರ್ ಅಪ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಸರಳಾದೇವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು. ಇವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ವೈ ಜನಾರ್ದನ ರೆಡ್ಡಿ, ಉಪನ್ಯಾಸಕರಾದ ಜಯರಾಮ್.ಟಿ ಮತ್ತು ಗಿರೀಶ್ ಕುಮಾರ್ ಗೌಡ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಮಯದಲ್ಲಿ ಪತ್ರಿಕೋದ್ಯಮ ವಿಭಾಗ ವಿದ್ಯಾರ್ಥಿಗಳಾದ ಎನ್. ರವಿ , ಎನ್. ವೀರೇಶ್, ಎಸ್. ಸಂಜನಾ, ಗಿರೀಶ್.ವಿ , ಬಳ್ಳಾರಿ ಸತೀಶ್, ಮಹೇಶ್ . ಡಿ.ಎನ್ .ವಿಜಯ ಕುಮಾರ್, ಸಿ.ಪಿ, ಸಿದ್ದೇಶ.ಕೆ , ರುದ್ರೇಶ್.ಎಸ್ , ಶೇಖರ್ .ಎಲ್ ಹಾಜರಿದ್ದರು.