ಮೇಷ: ಕಾನೂನಿನ ಸಮರದಿಂದ ಹೊರಬರಬೇಕು ಎಂದು ಅನ್ನಿಸಬಹುದು. ನಿಮಗೆ ಅಭದ್ರತೆಯು ಕಾಡಬಹುದು. ನಿಮಗೆ ಇಂದು ಮನೆಯಲ್ಲಿಯೇ ಇರಬೇಕಾದ ಸ್ಥಿತಿಯು ಬಂದಿರುವುದರಿಂದ ಬಂಧನದಂತೆ ಅನ್ನಿಸಬಹುದು. ಹಣದ ವ್ಯವಹಾರವು ಸುಲಲಿತವಾಗಿ ಆಗಲಿದೆ. ಪ್ರತಿಭಾನ್ವಿತರಿಗೆ ಪ್ರೋತ್ಸಾಹವು ಸಿಗುವುದು. ಸಕಾಲಕ್ಕೆ ಸಿಗದ ಮಾಹಿತಿಯಿಂದ ಸೌಲಭ್ಯದಿಂದ ವಂಚಿತರಾಗುವಿರಿ. ನಿಮ್ಮ ವಿವಾಹದ ಮಾತುಕತೆಗಳು ನಡೆಯಬಹುದು. ಅಧ್ಯಾತ್ಮದ ಕಡೆಗೂ ನಿಮ್ಮ ಒಲವು ಕಾಣಿಸಲಿದೆ. ಇಂದು ನೀವು ಸವಾಲನ್ನು ಸ್ವೀಕರಿಸುವ ಮನಸ್ಸು ಇರಲಿದೆ. ಕೃಷಿ ಕ್ಷೇತ್ರದತ್ತ ನಿಮ್ಮ ಚಿತ್ತವು ಇರಲಿದೆ.
ವೃಷಭ: ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಗುರಿಯನ್ನು ತಲುಪಲು ನಿಮಗೆ ಸದ್ಯಕ್ಕೆ ಅಸಾಧ್ಯ ಎನಿಸಬಹುದು. ನೀವು ವಿರೋಧವನ್ನು ಲೆಕ್ಕಿಸದೇ ಮುನ್ನುಗ್ಗಿ ಅಪಾಯವನ್ನು ತಂದುಕೊಳ್ಳುವಿರಿ. ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳು ಕಷ್ಟವಾದೀತು. ಇನ್ನೊಬ್ಬರ ಮಾತಿಗೂ ಬೆಲೆ ಮತ್ತು ಅವಕಾಶವನ್ನು ಮಾಡಿಕೊಡಿ. ಯಾವುದರ ಮೇಲೂ ಹೆಚ್ಚಿನ ನಿರೀಕ್ಷೆ ಬೇಡ. ನಿಮ್ಮ ಆನುನುಕೂಲ್ಯಕ್ಕೆ ಬೇಕಾದ ಹಾಗೆ ದಿನವನ್ನು ಇಟ್ಟುಕೊಳ್ಳಿ. ತಂದೆಯ ಮಾತಿನಂತೆ ನಡೆದುಕೊಳ್ಳುವಿರಿ. ಸ್ನೇಹಿತರು ನಿಮ್ಮ ಉದ್ಯೋಗವನ್ನು ಬದಲಿಸಲು ಬಹಳ ಒತ್ತಾಯ ಮಾಡುವರು.
ಮಿಥುನ: ಉದ್ಯಮದಲ್ಲಿ ನಿಮ್ಮ ಚಿಂತನಾರಹಿತ ನಿರ್ಧಾರದಿಂದ ನಿಮಗೆ ನಷ್ಡವಾಗಲಿದೆ. ನಿಮ್ಮ ಎಲ್ಲ ಯೋಜನೆಯೂ ಬುಡಮೇಲಾಗಬಹುದು. ಉನ್ನತ ಹುದ್ದೆಯ ನಿರೀಕ್ಷೆಯನ್ನು ಮುಂದುವರಿಸುವುದು ಉತ್ತಮ. ಆರೋಗ್ಯವನ್ನು ಸರಿಮಾಡಿಕೊಳ್ಳಲು ಆದ್ಯತೆ ನೀಡಿ. ಸಂಗಾತಿಗೆ ಪ್ರೀತಿಯನ್ನು ನೀಡಿ ಖುಷಿಪಡಿಸಿ. ಪೂರ್ವ ಯೋಜನೆಯನ್ನು ಮಾಡದೇ ವಿನಾಕಾರಣ ಹಣವನ್ನು ನಷ್ಟಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ. ನಿಮ್ಮ ವಸ್ತುಗಳು ಇನ್ನೊಬ್ಬರಿಂದ ಹಾಳಾಗಿದ್ದು ನಿಮಗೆ ಬಹಳ ಬೇಸರವಾದೀತು. ಕಛೇರಿಯಲ್ಲಿ ನಿಮಗೆ ಪ್ರಶಂಸೆಯು ಸಿಗಲಿದೆ.
ಕಟಕ: ಇಷ್ಟಾರ್ಥವು ಸಿದ್ಧಿಸಿತು ಎಂಬ ಸಂತೋಷವು ನಿಮ್ಮಲ್ಲಿ ಇರಲಿದೆ. ಏನೇ ಬಂದರೂ ಎಲ್ಲವೂ ವಿಧಿ ಎಂಬ ನಿರ್ಧಾರಕ್ಕೆ ಬರಲಿದ್ದೀರಿ. ಚಿತ್ತಚಾಂಚ್ಯಲ್ಯವು ನಿಮ್ಮ ನಿರ್ಧಾರವನ್ನೂ ಬದಲಿಸಲಿದೆ. ಇನ್ನೊಬ್ಬರ ವಸ್ತುವನ್ನು ಪಡೆಯುವ ಹಂಬಲ ಅತಿಯಾಗಲಿದೆ. ಏನನ್ನಾದರೂ ಸಾಧಿಸಬೇಕು ಎಂಬ ಮಹದಾಸೆ ಇರಲಿದೆ. ಹೂಡಿಕೆಯನ್ನು ಯೋಗ್ಯ ಕಾಲಕ್ಕೆ ಹಿಂಪಡೆದು ಲಾಭ ಗಳಿಸುವಿರೊ. ಅನಿರೀಕ್ಷಿತ ಸುದ್ದಿಯನ್ನು ನೀವು ಕೇಳಿ ಹತಾಶರಾಗುವಿರಿ. ನಿಮ್ಮ ಮನಸ್ಸು ಯಥಾಸ್ಥಿತಿಗೆ ಬರಲು ಸ್ವಲ್ಪ ಸಮಯವನ್ನು ತೆಗದುಕೊಳ್ಳುವಿರಿ. ಯಾರದೋ ಕೈಗೊಂಬೆಯಾಗಿ ವರ್ತಿಸುವಿರಿ.
ಸಿಂಹ: ನಿಮ್ಮಕಾರ್ಯವನ್ನು ವೀಕ್ಷಿಸಿ ನಿಮಗೆ ಹೆಚ್ಚಿನ ಬಡ್ತಿಯನ್ನು ಖಾಸಗಿ ಸಂಸ್ಥೆ ಕೊಡಲಿದೆ. ನಿಮ್ಮ ವ್ಯಕ್ತಿತ್ವವು ಇತರರಿಗೆ ಉದಾಹರಣೆಯಾಗಲಿದೆ. ಸಮಯಕ್ಕೆ ಕಾದಿದ್ದು ಸಾರ್ಥಕ ಎನಿಸಬಹುದು. ಮಾತಿನಲ್ಲಿ ಮೃದುತ್ವ ಇರಲಿ. ವೈಯಕ್ತಿಕ ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಿ ಕಾರ್ಯವನ್ನು ಸಾಧಿಸುವಿರಿ. ನಿಮ್ಮ ವರ್ತನೆಯು ವೃತ್ತಿಯ ಸ್ಥಳದಲ್ಲಿ ಅಹಂಕಾರದಂತೆ ತೋರುವುದು. ನಕಾರಾತ್ಮಕ ಮಾತುಗಳಿಗೆ ಸ್ಪಂದಿಸುವುದು ಬೇಡ. ಸ್ನೇಹಿತರನ್ನು ಕಳೆದುಕೊಳ್ಳುತ್ತೇನೆ ಎಂಬ ಭಯವು ಕಾಡಬಹುದು. ಮನಸ್ಸಿನ ನೋವನ್ನು ನೀವೇ ಅನುಭವಿಸಿ ಕಡಿಮೆ ಮಾಡಿಕೊಳ್ಳುವಿರಿ.
ಕನ್ಯಾ: ಉದ್ಯೋಗವನ್ನು ಪಡೆಯುವ ಉತ್ಸಾಹದಿಂದ ಪ್ರಯಾಣ ಮಾಡುವಿರಿ. ಆದರೆ ಹತಾಶರಾಗುವಿರಿ. ಸಾಲವು ನಿಮ್ಮ ಮಾನಸಿಕ ಸ್ಥಿತಿಯನ್ನೇ ಬದಲಿಸೀತು. ಬಂಧುಗಳು ನಿಮ್ಮನ್ನು ಬಹಳವಾಗಿ ದೂಷಿಸುವರು. ಮನೆಯ ಕಾರ್ಯಗಳು ಇಂದು ಬಹಳ ಇರಲಿದೆ. ವಾಹನವನ್ನು ಖರೀದಿಸಲು ಬೇರೆ ಊರಿಗೆ ಹೋಗಬೇಕಾದೀತು. ಹೊಸ ಉದ್ಯಮವನ್ನು ಆರಂಭಿಸುವ ಯೋಜನೆಯನ್ನು ಆಪ್ತರಿಗೆ ಹೇಳಿ, ಸಹಾಯವನ್ನೂ ಬಯಸುವಿರಿ. ಸಾಲ ಮರುಪಾವತಿಯ ಆಗದೇ ಆತಂಕವಾಗಲಿದೆ. ಅಕ್ಕಪಕ್ಕದವರು ನಿಮ್ಮ ಸ್ಥಿತಿಯನ್ನು ಕಂಡು ಆಡಿಕೊಳ್ಳುವ ಸಾಧ್ಯತೆ ಇದೆ.
ತುಲಾ: ವಾಹನ ಖರೀದಿಯನ್ನು ಸಾಲಮಾಡಿ ಮಾಡುವಿರಿ. ಇದು ನಿಮ್ಮ ಹೊಸ ಉದ್ಯಮಕ್ಕೆ ನಾಂದಿಯನ್ನು ಹಾಡಲಿದೆ. ವಿದ್ಯಾರ್ಥಿಗಳು ಓದುವ ವಿಚಾರದಲ್ಲಿ ಹಿಂಜರಿದರೂ ಪ್ರೋತ್ಸಾಹದಿಂದ ಅಭ್ಯಾಸವನ್ನು ಮಾಡುವರು. ಪ್ರೇಮದಲ್ಲಿ ಬಿದ್ದು ಸಿಕ್ಕಿಕೊಂಡು ಕಷ್ಟಪಡುವಿರಿ. ನಿಮ್ಮ ತೀರ್ಮಾನವನ್ನು ಒಪ್ಪುವಷ್ಟು ಇಷ್ಟವಾದೀತು. ಮಕ್ಕಳಿಂದ ನಿಮಗೆ ದೂರು ಬರಲಿದೆ. ಹಣಕಾಸಿನ ವಿಚಾರದಲ್ಲಿ ನೀವು ಸುಳ್ಳು ಹೇಳುವಿರಿ. ನೀವು ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶುಭ ಸಮಾಚಾರದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸ್ವಂತ ಕೆಲಸಕ್ಕೆ ಉದ್ಯೋಗಿಗಳನ್ನು ಬಳಸಿಕೊಳ್ಳುವಿರಿ.
ವೃಶ್ಚಿಕ: ಮಕ್ಕಳು ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಅನಿರೀಕ್ಷಿತವಾದ ಮಿತ್ರನ ಭೇಟಿಯು ಸಂತೋಷವನ್ನು ಕೊಡಲಿದೆ. ಮಕ್ಕಳ ವಿವಾಹದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಬರಲಿದೆ. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡುವುದು. ಉದ್ಯೋಗದ ಅನ್ವೇಷಣೆಯು ತೀವ್ರಗತಿಯಲ್ಲಿ ಸಾಗಲಿದೆ. ಇಂದು ಮನೋರಂಜನೆಯ ಜೊತೆ ಕಾಲ ಕಳೆಯುವಿರಿ. ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ. ಇಂದಿನ ಅನುಭವವು ನಿಮಗೆ ಅನೇಕ ಪಾಠವನ್ನು ಕಲಿಸುವುದು.
ಧನುಸ್ಸು: ನಿರೋದ್ಯೋಗದಿಂದ ಬೇಸರಗೊಂಡ ನಿಮಗೆ ದೂರದ ಊರಿನಲ್ಲಿ ಕೆಲಸವು ಸಿಗಲಿದೆ. ಸಂದರ್ಭವನ್ನು ನೋಡಿಕೊಂಡು ಮಾತನಾಡುವುದು ಉಚಿತ. ಇಂದು ನಿಮ್ಮ ಕೆಲಸವನ್ನು ಬದಲಾಯಿಸಿಕೊಳ್ಳುವಿರಿ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚಾಗಲಿದೆ. ಶ್ರಮವು ಅಧಿಕ ಫಲವು ಅಲ್ಪವಾಗಲಿದೆ. ನಿಯಮಗಳನ್ನು ನೀವೇ ಮುರಿದುಕೊಂಡು ನಗೆಪಾಟಲಿಗೆ ಒಳಗಾಗುವಿರಿ. ರಾಜಕೀಯ ಜೀವನವು ನಿಮಗೆ ಹಿಡಿದುಕೊಳ್ಳಲಾಗದ, ಬಿಡಲಾಗದ ಸ್ಥಿತಿಯನ್ನು ತಂದುಕೊಡುವುದು. ಹಣಕಾಸಿನ ಕೊರತೆಯನ್ನು ನೀವು ಮನೆಯವರಿಗೆ ಗೊತ್ತಾಗದಂತೆ ನಿಭಾಯಿಸುವಿರಿ.
ಮಕರ: ಉದ್ಯೋಗದಲ್ಲಿ ಉಂಟಾದ ಒತ್ತಡದಿಂದ ಕೆಲಸವನ್ನು ಬದಲಿಸಲು ಇಚ್ಛಿಸುವಿರಿ. ವಿದ್ಯುತ್ ಉಪಕರಣವನ್ನು ವ್ಯಾಪಾರ ಮಾಡುವವರಿಗೆ ಅಧಿಕ ಲಾಭವು ಆಗಬಹುದು. ಮನೆತನದ ವಿಷಯಕ್ಕೆ ನಿಮಗೆ ಗೌರವವು ಸಿಗಬಹುದು. ಸಿಕ್ಕ ಮೊದಲ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಶ್ರದ್ಧೆಯಿಂದ ಕೆಲಸವನ್ನು ಮಾಡುವಿರಿ. ಇಂದು ಪ್ರಶಾಂತವಾಗಿ ಇರಬೇಕು ಎಂದು ಕೊಂಡರೂ ಅಸಾಧ್ಯವಾದೀತು. ಉನ್ನತ ಹುದ್ದೆಯನ್ನು ನೀವು ಅಪೇಕ್ಷಿಸುವಿರಿ. ಹಣಕಾಸಿನ ವಿಚಾರದಲ್ಲಿ ನೀವು ಯಾವ ಮುಲಾಜನ್ನು ಇಟ್ಟುಕೊಳ್ಳುವುದು ಬೇಡ. ಇಂದು ಬಹಳ ಆತುರದಲ್ಲಿ ಇರಲಿರುವಿರಿ.
ಕುಂಭ: ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ಆಲೋಚನೆಯನ್ನು ಮಾಡುವಿರಿ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಅಸಫಲರಾಗುವಿರಿ. ಏಕಪಕ್ಷೀಯ ನಿರ್ಧಾರವು ನಿಮ್ಮ ವಿರೋಧಿಗಳನ್ನು ಸೃಷ್ಟಿಸಿಕೊಳ್ಳಲು ಸಹಾಯವಾಗಲಿದೆ. ನಿಮ್ಮ ಪ್ರತಿಷ್ಠೆಯನ್ನು ಬಿಟ್ಟು ಎಲ್ಲರ ಜೊತೆ ಒಂದಾಗುವುದು ಮುಖ್ಯವಾಗಲಿದೆ. ಸಂಗಾತಿಯಿಂದ ಪ್ರೀತಿಯು ಇಂದು ಹೆಚ್ಚು ಸಿಗಲಿದೆ. ವಿದೇಶಪ್ರಯಾಣದ ನಿರೀಕ್ಷೆಯಲ್ಲಿ ಇರುವಿರಿ. ಕುಟುಂಬದಲ್ಲಿ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವಿರಿ. ಆಲಸ್ಯದಿಂದ ಮನೆಯಲ್ಲಿ ಬೈಯಿಸಿಕೊಳ್ಳುವಿರಿ.
ಮೀನ: ಬಂಧುಗಳ ಕಾರಣದಿಂದ ನಿಮ್ಮ ಹಣವು ಖರ್ಚಾಗಬಹುದು. ನಿಮ್ಮ ಸ್ಥಿರಾಸ್ತಿಯ ದಾಖಲೆಗಳನ್ನು ಸರಿ ಮಾಡಿಕೊಳ್ಳಿ. ಬೆನ್ನು ನೋವು ಕಾಣಿಸಿಕೊಳ್ಳಬಹುದು. ನಿಮಗೆ ಇಂದು ಆಯ್ಕೆಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು. ಶತ್ರುಗಳನ್ನು ಸೋಲಿಸುವ ಸಂಚು ಸಫಲವಾಗಬಹುದು. ಕಾರ್ಯವನ್ನು ಸಂಕೀರ್ಣಗೊಳಿಸದೇ ಸರಿಯಾದ ವಿಭಾಗವನ್ನು ಮಾಡಿಕೊಳ್ಳುವುದು ಉತ್ತಮ. ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಕಷ್ಟಪಡುವಿರಿ. ವೈಯಕ್ತಿಕ ಕೆಲಸವು ಹಾಗೇ ಇರಲಿದ್ದು ನಿಮಗೆ ಆತಂಕವಾದೀತು.