ನಿನ್ನೆ ಮೊನ್ನೆ ಬಂದ ಬಿಜೆಪಿ ಪಕ್ಷಕ್ಕೆ ಸಂವಿಧಾನದ ಬಗ್ಗೆ ಏನು ಗೊತ್ತು

ಕೊಪ್ಪಳ.ಮಾ,27 : ಕೊಪ್ಪಳ ಜಿಲ್ಲೆ ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿ ಕುಷ್ಟಗಿ-ಹನಮಸಾಗರ ಇವರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕುಷ್ಟಗಿ ವಿಧಾನಸಭೆ ಕ್ಷೇತ್ರದ ಮಹಿಳಾ ಸಮಾವೇಶ ನೆಡೆಯಿತು. ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ ಉದ್ಘಾಟಿಸಿದರು. ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಈ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ ನಿನ್ನೆ ಮೊನ್ನೆ ಬಂದ ಬಿಜೆಪಿ ಪಕ್ಷಕ್ಕೆ ಸಂವಿಧಾನ ಬೆಲೆ ಬಗ್ಗೆ ಏನು ಗೊತ್ತಿಲ್ಲ ಈ ದೇಶದಲ್ಲಿ ‌ಮಹಿಳೆಯರಿಗೆ ಶೇ ೩೩ ರಷ್ಟು ಮಿಸಲಾತಿಯನ್ನು ತಂದು‌ ಮಹಿಳೆ ಈ ಸಮಾಜದಲ್ಲಿ ತೆಲೆ ಎತ್ತಿಕೊಂಡು ಮಾಡುವಂತೆ ಮಾಡಿದ್ದು ನಮ್ಮ ಕಾಂಗ್ರೇಸ್ ಪಕ್ಷವಾಗಿದೆ.


ಆದರೆ ಮಹಿಳೆ ಇವತ್ತು ಒಳ್ಳೆಯ ಸ್ಥಾನಮಾನದಲ್ಲಿ ನಿಂತಿದ್ದಾಳೆ ಎಂದರೆ ಕಾಂಗ್ರೆಸ್ ಪಕ್ಷ ಕಾರಣ ಅದಕ್ಕಾಗಿ ಮುಂದೆ ನೆಡೆಯುವಂತ ೨೦೨೩ಕ್ಕೆ ಮತ್ತೆ ಕುಷ್ಟಗಿ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರನ್ನು ಶಾಸಕರನ್ನಾಗಿ ಮಾಡಿ ಈ ಕ್ಷೇತ್ರದ ಜನತೆ ಸೇವೆ ಮಾಡಲು‌ ಸಹಕರಿಸಲು ಮುಂದಾಗಬೇಕು ಎಂದರು. ಈ ಜಗತ್ತಿನಲ್ಲಿ ಮಹಿಳೆ ತಾನು ಮನಸ್ಸು ಮಾಡಿದರೆ ಏನಾದರು ಸಾದಿಸಬಲ್ಲಳು ಎನ್ನುದಕ್ಕೆ ಈ‌ ವೇದಿಕೆ ಸಾಕ್ಷಿಯಾಗಿದೆ. ಆದ್ದರಿಂದ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಅಮರೇಗೌಡ ಪಾಟೀಲ ಬಯ್ಯಾಪೂರ ಮಹಿಳೆಯರು ಎಂದರೆ ಅವರಿಗೆ ಪ್ರೀತಿ ಈ ಕ್ಷೇತ್ರದಲ್ಲಿ ಎಷ್ಟು ಕೆಲಸ ಕಾರ್ಯ ಮಾಡಿದ್ದಾರೆ ಎನ್ನುವದನ್ನ ನಾನು ತಿಳಿದುಕೊಂಡು ಇವತ್ತು ಈ ವೇದಿಕೆ ಮೇಲೆ ಮಾತನಾಡುತ್ತಿದ್ದೆನೆ ಇಂತಹ ಶಾಸಕ ಕ್ಷೇತ್ರಕ್ಕೆ ಸಿಕ್ಕಿರುವದು ಇಲ್ಲಿಯ ಜನರ ಪುಣ್ಯವಾಗಿದೆ ಶ್ರೀಮತಿ ಇಂದಿರಾ ಗಾಂಧಿಯವರು ಈ ದೇಶಕ್ಕಾಗಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಅದೇ ರೀತಿಯಾಗಿ ಅವರ ಮಗ ರಾಜುಗಾಂಧಿಯವರು ಮಾಹಾತ್ಮ ಗಾಂಧಿ ಕನಸನ್ನು ನನಸು ಮಾಡಿದ್ದಾರೆ. ಈಗ ನಮ್ಮ ಪಕ್ಷದ ರಾಹುಲ್ ಗಾಂಧಿಯವರು ಈ ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಅನೇಕ ಯೋಜನೆಗಳನ್ನು ತಂದು ಈ ದೇಶದಲ್ಲಿ ತಾಂಡವಾಡುತ್ತಿರುವ ಬೆಲೆ ಏರಿಕೆಯನ್ನು ಇಳಿಕೆ ಮಾಡುವದಾಗಿ ಘೋಷಣೆ ಮಾಡಿದ್ದಾರೆ. ಹೆಣ್ಣು ಈ ದೇಶದ ಕಣ್ಣು ಅದಕ್ಕಾಗಿ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಮರೆಯದೆ ಮುಂದಿನ ಚುನಾವಣೆಯಲ್ಲಿ ಮತಕೊಟ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ಮಾಲತಿ ನಾಯಕ, ರಶ್ಮಿ ರಾಜಶೇಖರ ಹಿಟ್ನಾಳ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕುಷ್ಟಗಿ ತಾಲೂಕು ಅಧ್ಯಕ್ಷೆ ಶಕುಂತಲಾ ಹಿರೇಮಠ, ನಿರ್ಮಲ ಕರಡಿ, ನಾಗಮಣಿ ಜಿಂಕಲ್, ಶೈಲಾಜಾ ಹಿರೇಮಠ, ಆಯಿಷಾ ಖಾನ್, ಭಾರತಿ ನೀರಗೇರಿ, ಶಕೀಲಾ ಡಾಲಾಯತ್, ಶಕೀಲಾ ಶೆಟ್ಟಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top