ಕುಷ್ಟಗಿ 27: ವಿಧಾನಸಭೆ ಅಧಿವೇಶನದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ವಿರೋಧ ವ್ಯಕ್ತಪಡಿಸಿದ ಕುಡಚಿ ಕ್ಷೇತ್ರದ ಶಾಸಕ ಪಿ ರಾಜೀವ್ ಹಾಗೂ ಜೇವರ್ಗಿ ಕ್ಷೇತ್ರದ ಪ್ರಿಯಾಂಕ ಖರ್ಗೆ, ಶಾಸಕ ಗೂಳಿಹಟ್ಟಿ ಶೇಖರ ಅವರ ವಿರುದ್ಧ ತಾಲೂಕು ಮತ್ತು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬೇಡಜಂಗಮ ಸಮಾಜದ ಅಧ್ಯಕ್ಷ ಶಿವಕುಮಾರ್ ಗಂಧದಮಠ ಹೇಳಿದರು. ರವಿವಾರ ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ 1972 ಸಾಲಿನಿಂದ ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ಹಲವಾರು ಬಾರಿ ತೀವ್ರಸ್ವರೂಪದ ಹೋರಾಟಗಳು ಜರುಗಿವೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಬೇಡ ಜಂಗಮ ಸಮಾಜಕ್ಕೆ ಬೇಡವಾದವರ ವಿರುದ್ಧ ರಾಜ್ಯಾಧ್ಯಂತ ಪ್ರತಿಭಟಿಸಿ ಬೇಡ ಜಂಗಮನ ತಾಕತ್ತು ಏನು ಎನ್ನುವದನ್ನ ತೋರಿಸುತ್ತೇವೆ ಎಂದರು. ಪ್ರಮಾಣ ಪತ್ರಕ್ಕಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದರೆ ಏಸಿ ಯವರಿಗೆ ಶಿಫಾರಸುಮಾಡುತ್ತಾರೆ ಅವರು ನಮ್ಮ ಜಿಲ್ಲೆಯಲ್ಲಿ ಬೇಡ ಜಂಗಮರು ಇಲ್ಲ ಎಂದು ಆದೇಶ ನೀಡುತ್ತಾರೆ ಎಲ್ಲಾ ಬೆಳೆಯುವ ಬೆಳವಣಿಗೆಯನ್ನು ಪರಿಶೀಲಿಸಿ ಮುಂದಿನ ದಿನಮಾನಗಳಲ್ಲಿ ಏಸಿ ಹಾಗೂ ತಹಶೀಲ್ದಾರರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು.
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕುಟುಂಬದವರು ಕಾನೂನು ಹಾಗೂ ನ್ಯಾಯಬದ್ಧವಾಗಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವನ್ನು ಪಡೆದಿದ್ದಾರೆ
ಎಂದು ಹೇಳಿದರು. 28-8-1989 ನೇ ಸಾಲಿನ ರಾಜ್ಯ ಪತ್ರ ನಡು ನಡುವಳಿ ಗಳ ಪ್ರಕಾರ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿವರ್ಷ ಮಾರ್ಚ್16ರಂದು ಸರ್ಕಾರದಿಂದ ರೇಣುಕಾಚಾರ್ಯ ಜಯಂತಿಯನ್ನು ಆಚರಿಸುವಂತೆ ಆದೇಶ ನೀಡಿದ್ದಾರೆ ಈ ಒಂದು ಮಹತ್ವದ ಆದೇಶವನ್ನು ನೀಡಿದೆ ಮಾನ್ಯ ಮುಖ್ಯಮಂತ್ರಿಗಳಿಗೆ ಕುಷ್ಟಗಿ ತಾಲೂಕು ಬೇಡಜಂಗಮ ಸಮಾಜದ ವತಿಯಿಂದ ಅಭಿನಂದನೆಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ವೀರಗಂಗಾಧರ ಸ್ವಾಮಿ ಹಿರೇಮಠ, ಮಹಾಂತಯ್ಯ ಹಿರೇಮಠ, ಗುರುಬಸವ ಮಾಲಿಪಾಟೀಲ, ಮಂಜುನಾಥ, ಸಂಗಮೇಶ ಲೂತಿಮಠ ಸೇರಿದಂತೆ ಬೇಡಜಂಗಮ ಸಮಾಜದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು