ಚಾಮರಾಜನಗರ: ಫೆ.17- ವಸತಿ , ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಚಾಮರಾಜನಗರ ಜಿಲ್ಲೆಯ “ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ” ವತಿಯಿಂದ 2022ನೇ ಸಾಲಿನಲ್ಲಿ ಜರುಗುವ ಮಹಾ ಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಕಾಯ೯ಕ್ರಮಗಳ ಪೂವ೯ಸಿದ್ದತೆ ” ಗಳ ಕುರಿತು ಮುಜರಾಯಿ ಸಚಿವರು ಮತ್ತು ಜಿಲ್ಲೆಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಇಂದು ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಚಿವರು, ಶಿವರಾತ್ರಿ ಸಂದಭ೯ದಲ್ಲಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ಸ್ವಾಮಿಯ ದಶ೯ನಕ್ಕೆ ಬರುತ್ತಾರೆ. ದಶ೯ನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅಡೆತಡೆ ಮಾಡಬೇಡಿ. ಅತಿಯಾದ ಪ್ರಚಾರ ನೀಡುವ ಅವಶ್ಯಕತೆ ಇಲ್ಲ, ಕೋವಿಡ್ ನಿಯಮಗಳನ್ನು ಅಳವಡಿಸಿಕೊಂಡು ಕಾಯ೯ಕ್ರಮಗಳನ್ನು ರೂಪಿಸಿ ಯಶಸ್ವಿಗೊಳಿಸಲು ಸೂಚಿಸಿದರು.
ನೀರಾವರಿ ಯೋಜನೆಗಳ ಕುರಿತಂತೆ ಪ್ರಸ್ತಾಪಿಸಿದ ಸಚಿವರು, ಗುಂಡಾಲ್ ಏತ ನೀರಾವರಿ ಯೋಜನೆ ಮತ್ತು ರಾಮನಗುಡ್ಡ ಹಾಗೂ ಹುಬ್ಬ- ಹುಣಸೆ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂಣ೯ಗೊಳಿಸಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಮುಖ ರಸ್ತೆಗಳ ದುರಸ್ತಿ ಬಗ್ಗೆ ಮಾತನಾಡಿದ ಸಚಿವರು, ಸತ್ತೇಗಾಲ- ಕೊಳ್ಳೆಗಾಲ-ಯಳಂದೂರು-ಸಂತೆಮರಹಳ್ಳಿ- ಚಾಮರಾಜನಗರ ಮತ್ತು ಕೊಳ್ಳೇಗಾಲ-ಮಧುವನಹಳ್ಳಿ-ಹನೂರು-ಶ್ರೀ ಮಲೆಮಹದೇಶ್ವರ ಬೆಟ್ಟ ಮಾಗ೯ದ ರಸ್ತೆಗಳಲ್ಲಿರುವ ಗುಂಡಿಗಳು ಮತ್ತು ಅಪೂಣ೯ವಾಗಿರುವ ಕಾಮಗಾರಿಗಳಿಂದ ಸಾವ೯ಜನಿಕರ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದ್ದು ವಿಳಂಬವಿಲ್ಲದಂತೆ ಕೂಡಲೇ ಕಾಯ೯ಪ್ರವೃತ್ತರಾಗಿ ಬೆಟ್ಟದ ಶಿವರಾತ್ರಿ ಜಾತ್ರಾ ಕಾಯ೯ಕ್ರಮಗಳ ಪ್ರಾರಂಭಕ್ಕೂ ಮುನ್ನ ಪೂಣ೯ ಗೊಳಿಸಲು ತಿಳಿಸಿದರು.
ಮೊದಲಿಗೆ ಜಾತ್ರೆಯ ಕಾಯ೯ಕ್ರಮಗಳ ಪ್ರಯುಕ್ತ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಕ್ರಮಗಳ ಕುರಿತ ಮಾಹಿತಿಯನ್ನು ಶ್ರೀಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರದ ಕಾಯ೯ದಶಿ೯ ಜಯವಿಭವಸ್ವಾಮಿ ಸಭೆಗೆ ನೀಡಿದರು. ಸಭೆಯಲ್ಲಿ ಮುಜರಾಯಿ ಮತ್ತು ವಕ್ಪ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ಆರ್. ನರೇಂದ್ರ, ಎನ್.ಮಹೇಶ್, ಸಿ.ಪುಟ್ಟರಂಗ ಶೆಟ್ಟಿ , ಸಿ.ಎಸ್. ನಿರಂಜನ್ ಕುಮಾರ್, ಪರಿಷತ್ ಸದಸ್ಯರಾದ ಸಿ.ಎನ್ ಮಂಜೇಗೌಡ, ತಿಮ್ಮಯ್ಯ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜನಿಯರ್ ಶಂಕರೇಗೌಡ,ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.