ಬೆಂಗಳೂರು, ಫೆಬ್ರವರಿ,16 : ಪಕ್ಷದೊಳಗಿನ ನಾಯಕತ್ವ ಬಿಕ್ಕಟ್ಟನ್ನು ಮರೆ ಮಾಚಿ ಹುಸಿ ಒಗ್ಗಟ್ಟನ್ನು ಪ್ರದರ್ಶಿಸಲು ಕಾಂಗ್ರೆಸ್ ನಾಯಕರು ಸದನವನ್ನು ದುರುಪಯೋಗ ಪಡಿಸಿಕೊಳ್ಳವ ಹುನ್ನಾರ ನಡೆಸಿದ್ದಾರೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಆಪಾದಿಸಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ದ್ವಜ ಹಾರಿಸಲು ಪ್ರಯತ್ನಿಸಿದ ನಾಗರಿಕರನ್ನು ಗುಂಡಿಟ್ಟು ಕೊಂದ ಇತಿಹಾಸ ಹೊಂದಿರುವ ಕಾಂಗ್ರೆಸ್ ನಾಯಕರು ಅದೇ ರಾಷ್ಟ್ರ ದ್ವಜವನ್ನು, ದ್ವಜ ಸಂಹಿತೆಗೆ ವಿರುದ್ಧವಾಗಿ ಸದನದಲ್ಲಿ ಪ್ರದರ್ಶಿಸಿದ್ದಾರೆ. ರಾಷ್ಟ್ರ ದ್ವಜವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಬಳಸಿಕೊಂಡಿರುವುದು, ಆ ಪಕ್ಷದ ದುರ್ಬಲ ಸ್ಥಿತಿ ಯನ್ನು ಪ್ರತಿಫಲಿಸುತ್ತದೆ” ಎಂದು ಅಭಿಪ್ರಾಯ ವ್ಯಕ್ತಡಿಸಿದರು.
ಸಚಿವ ಕೆ ಎಸ್ ಈಶ್ವರಪ್ಪ ರವರಂಥ ಅಪ್ಪಟ ರಾಷ್ಟ್ರ ಪ್ರೇಮಿ ಹಾಗೂ ನಾಯಕರನ್ನು ಗುರಿಯಾಗಿಟ್ಟುಕೊಂಡು, ಕೆಸರೆರುಚುವ ವ್ಯರ್ಥ ಪ್ರಯತ್ನ ಬಿಟ್ಟು, ಕಾಂಗ್ರೆಸ್ ಶಾಸಕರು, ಸದನದ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು. ಗೌರವಾನ್ವಿತ ರಾಜ್ಯಪಾಲರು, ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ಸಾಂವಿಧಾನಿಕ ಕರ್ತವ್ಯ ನಿರ್ವಹಣೆ, ಜನರ ಕುಂದು ಕೊರತೆಗಳ ನಿವಾರಣೆಗೆ ಬೆಳಕು ಚಲ್ಲುವಂತಹ. ವೇದಿಕೆಯನ್ನು, ರಾಜಕೀಯ ಅಂಗಳ ವನ್ನಾಗಿ ಮಾಡುತ್ತಿರುವುದು, ವಿಷಾದನೀಯ, ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಹಿಜಾಬ್ ವಿಷಯ ವನ್ನು ಕೆಲವು ಮತೀಯ ಸಂಘಟನೆಗಳು, ಸಮಾಜ ಒಡೆಯುವ ಅಸ್ತ್ರವನ್ನಾಗಿ, ಮಾಡಿಕೊಳ್ಳುವುದನ್ನು ಸಹಿಸುವುದಿಲ್ಲ. ಇದರ ಹಿಂದಿರುವ ಷಡ್ಯಂತ್ರವನ್ನು, ಪೊಲೀಸರು, ಬಯಲುಗೊಳಿಸುತ್ತಾರೆ ಹಾಗೂ ತಕ್ಕ ಕಾನೂನು ಕ್ರಮ ಆಗುತ್ತದೆ, ಎಂದು ತಿಳಿಸಿದರು.