ಕೊಪ್ಪಳ,ಜನವರಿ, 28 : ಕೆ ಪಿ ಪೂರ್ಣಚಂದ್ರ ತೇಜಸ್ವಿ “ಇಕೋ ಕ್ಲಬ್” ಆಶ್ರಯದಲ್ಲಿ “ಔಷಧ ಸಸ್ಯಗಳ ಪರಿಚಯ” ವನ್ನು ವಿಜ್ಞಾನ ಶಿಕ್ಷಕರಾದ ಶರಣಪ್ಪ ಪರಸಾಪುರ ಅವರು ವಿದ್ಯಾರ್ಥಿಗಳಿಗೆ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ “ಸಂವಾದ” ಕಾರ್ಯಕ್ರಮ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ, ಶಿಕ್ಷಕರುಗಳಾದ ಅರವಿಂದಕುಮಾರ ದೇಸಾಯಿ, ಸಿದ್ದನಗೌಡ ಪೋಲಿಸ್ ಪಾಟೀಲ್, ಬಸವರಾಜ ಪಿ, ಶಾಕೀರ್ ಬಾಬಾ ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್,ಪೂರ್ಣಿಮಾ ಅರಹುಣಸಿ, ಮಂಜುಳಾ ಗುರುವಿನ ಇದ್ದರು.
ಅದೇ ರೀತಿ “ಜಾಗತಿಕ ತಾಪಮಾನ ಹೆಚ್ಚಳ” ಕುರಿತು ಪ್ರಬಂಧ ರಚನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಥಮ:- ಸುಮಾ ಮಸ್ಕಿ ಮಠ
ದ್ವಿತೀಯ:- ಯಲ್ಲಪ್ಪ ಕುಷ್ಟಗಿ
ತೃತೀಯ:- ಸುಶ್ಮಿತಾ ಭಜಂತ್ರಿ ..