ದಾವಣಗೆರೆ,28 : ನಗರದ ದೇವತೆ ದುರ್ಗಾಂಬಿಕ ದೇವಿ ಜಾತ್ರಾ ಮಹೋತ್ಸವನ್ನು ಮಾರ್ಚ್ 15, 16 ರಂದು ಆಚರಿಸಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಫೆಬ್ರವರಿ 08 ರಂದು ಹಂದರ ಕಂಬ ಪೂಜೆ ಮಾರ್ಚ್ 13 ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ ಕಂಕಣಧಾರಣೆ ಮಾರ್ಚ್ 14, 15 ರಂದು ದೇವಿಗೆ ವಿಶೇಷ ಅಲಂಕಾರ, ಪೂಜೆ
ಮಾರ್ಚ್ 16 ರಂದು ಬೆಳಗ್ಗೆ ಚರಗ ಸೇವೆ.
ಇಂದು ದೇವಸ್ಥಾನನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭಯಲ್ಲಿ ಎಲ್ಲ ಸಮುದಾಯದ ಮುಖಂಡರು ಭಾಗಿದ್ದರು. ಶಾಸಕ ಹಾಗೂ ಸಮಿತಿ ಗೌರವ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಸಮುದಾಯ ಸದಸ್ಯರ ಅಭಿಪ್ರಾಯ ಪಡೆದು ಹಬ್ಬ ಮಾರ್ಚ್ 15, 16 ರಂದು ಹಬ್ಬ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು. ಕೊರೊನಾ, ಮುಂದಿನ ತಿಂಗಳು ಇಳಿಕೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲಾಗುವುದು ಎಂದು ಸಭೆ ಬಳಿಕ ಶಾಮನೂರು ಶಿವಶಂಕರಪ್ಪ ಮಾಹಿತಿ ನೀಡಿದರು.