ಕೊಪ್ಪಳ,ಜನವರಿ, 28 : ಗಣರಾಜೋತ್ಸವ ದಿನದಂದು ಡಾ.ಅಂಬೇಡ್ಕರ್ ಪೋಟೋ ತೆರವುಗೊಳಿಸಿದರೆ ಪಾತ್ರ ದ್ವಜಾರೊಹಣ ಮಾಡುತ್ತೇನೆ ಎಂದು ಅಂಬೇಡ್ಕರ್ ಪೋಟೋ ಕ್ಕೆ ಅಪಮಾನ ಮಾಡಿದ ರಾಯಚೂರು ಜಿಲ್ಲೆಯ ನ್ಯಾಯಾಧೀರಾದ ಮಲ್ಲಿಕಾರ್ಜುನಗೌಡ ವಜಾಗೊಳಿಸಬೇಕು.
ರೈತ ಸಂಘದ ಜಿಲ್ಲಾ ಅಧ್ಯಕ್ಷ, ರೈತ ಪ್ರಾಂತ್ಯ ಸಂಘಟದ ಅಧ್ಯಕ್ಷ ಆರ್.ಕೆ.ದೇಸಾಯಿ, ಹೈದ್ರಾಬಾದ್ ಕರ್ನಾಟಕ ಯುವ ರಕ್ಷಣಾ ವೇದಿಕೆ ಸಂಸ್ಥಾಪಕ ಬಸವರಾಜ ಗಾಣಿಗಾರ, ಡಾ.ಬಿರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನೆಡೆಸಿ ಗ್ರೇಡ್-೨ ತಹಶೀಲ್ದಾರ ಮೂಲಕ ಬಸವರಾಜ ಬೋಮ್ಮಾಯಿ ಇವರಿಗರ ಇಲ್ಲಿನ ಬಸವೇಶ್ವರ ಸರ್ಕನಲ್ಲಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವರಾಜ ಕಟ್ಟಿಮನಿ, ಶಿವಪುತ್ರಪ್ಪ ಗುಮಗೇರಿ, ವಸಂತ ಮೇಲಿನಮನಿ, ಮಾರುತಿ ಕಂದಗಲ್, ಜಮದಗ್ನಿ ಗುರಿಕಾರ , ಪ್ರವೀಣ ಜಿ ಕಲಾಲ್ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.