ದಾವಣಗೆರೆ: ನಿನ್ನೆ ತುಂತುರು ಮಳೆ ಹಿಡಿದುಕೊಂಡ ಹಿನ್ನೆಲೆ ಬೆಸ್ಕಾಂ ಕಂಬವೊಂದರಲ್ಲಿ ವಿದ್ಯುತ್ ಪ್ರವಹಿಸಿದೆ. ಇದನ್ನು ಗಮನಿಸದ ಯುವಕ, ಕಂಬ ಮುಟ್ಟಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಭರತ್ ಕಾಲೋನಿಯ ಮನೋಜ್ ಮಜ್ಜಿಗೆ(23) ಮೃತ ದುರ್ದೈವಿ. ಯಲ್ಲಮ್ಮ ನಗರದ ಕುಂದುವಾಡ ರಸ್ತೆಯ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಮೂತ್ರ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ವಿದ್ಯುತ್ ಕಂಬ ಗ್ರೌಂಡ್ ಆಗಿದೆ. ಇದನ್ನು ಗಮನಿಸದ ಯುವಕ ಕಂಬ ಮುಟ್ಟಿದ್ದಾನೆ. ಇದರಿಂದ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಬಡಾವಣೆ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪೊಲೀಸರು, ಯುವಕನ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರಾವಾನೆ ಮಾಡಿದ್ದಾರೆ.