ದೇವನಹಳ್ಳಿ: ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡಿರುವವರು ಎಸ್.ಪಿ.ಬಿ. ಮಾತ್ರ, ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ. ಅವರ ಒಟ್ಟಾರೆ ಪ್ರಮುಖ ಸಾಧನೆಗಳನ್ನು ಹೇಳುವುದಾದರೆ ಅದು ಅಪರಿಮಿತವಾದುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಶಾಂತಕುಮಾರ್ ತಿಳಿಸಿದರು.ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವಗಣೇಶ ವೃತ್ತದಲ್ಲಿ ಸುವರ್ಣ ಕರ್ನಾಟಕ ಆರ್ಕೆಸ್ಟ್ರಾ ಕಲವಿದರ ಸಂಘದಿಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಗಾನ ಚಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ನಮ್ಮ ಭಾರತದಲ್ಲಿ ಹಲವು ದಿಗ್ಗಜ ನಾಯಕ ನಟರುಗಳಿಗೆ ಧ್ವನಿ ಗೂಡಿಸಿ ಅತಿ ಹೆಚ್ಚು ಹಾಡುಗಳನ್ನು ಅಂದರೆ 40000 ಕ್ಕೂ ಅಧಿಕ ಹಾಡುಗಳನ್ನು ವಿವಿಧ ರಾಗಗಳಲ್ಲಿ ಮತ್ತು ವಿವಿಧ ಶೈಲಿಗಳಲ್ಲಿ ಹಾಡಿ ಜನ ಮನ ಗೆದ್ದ ಸ್ವರ ಮಾಂತ್ರಿಕ ಎಂದರೆ ಅದು ನಮ್ಮ ನೆಚ್ಚಿನ ಎಸ್ ಪಿ ಬಿ ಮಾತ್ರ ಎಂದು ಬಣ್ಣಿಸಿದರು.
ಭಾರತದ ಖ್ಯಾತ ಹಿನ್ನೆಲೆ ಗಾಯಕರು. ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡಿದ್ದಾರೆ ಎಂದು ಸಾವಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಎಂ.ಪಿ.ಸಿ.ಎಸ್ ಅಧ್ಯಕ್ಷ ಎಸ್.ಪಿ.ಮುನಿರಾಜು ತಿಳಿಸಿದರು.ಕೊರೊನಾ ಸಂಕಷ್ಟ ಸಮಯದಲ್ಲಿ ಸುಮಾರು 10 ಸಾವಿರ ಜನ ಕಲಾವಿದರಿಗೆ ಉತ್ತಮವಾದ ದಿನಸಿ ಕಿಟ್ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದ್ದೇವೆ. ಎಸ್.ಪಿ.ಬಿ ರವರ
74 ವರ್ಷದ ಸುದೀರ್ಘ ಕಲಾ ಸೇವೆಯಲ್ಲಿ ಹಾಡುಗಾರನಾಗಿ, ನಟನಾಗಿ, ಸಂಗೀತ ನಿರ್ದೇಶಕನಾಗಿ ಹಲವಾರು ಆಯಾಮಗಳಲ್ಲಿ ಕೆಲಸ ಮಾಡಿದ ಅನುಭವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗಿದೆ ಎಂದು ಯಶವಂತಪುರ ದಾರಿ ಆಂಜನೇಯಸ್ವಾಮಿ ದೇವಾಲಯದ ದರ್ಮಧರ್ಶಿ ಡಾ.ಅಂಬರೀಶ್ ಜೀ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಲವಿದರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿದರು. ಎಸ್.ಪಿ.ಬಿ ರವರು ಹಾಡಿದ ಹಾಡುಗಳನ್ನು ಕಲಾವಿದರು ಹಾಡುವುದರ ಮೂಲಕ ಸೇರಿದ್ದ ಜನರ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ವಿಜಯಪುರ ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್, ಉಪಾಧ್ಯಕ್ಷ ಕೇಶವಪ್ಪ, ಎಲ್ಲಾ ವಾರ್ಡ್ ಸದಸ್ಯರುಗಳು ಟೌನ್ ಜೆಡಿಎಸ್ ಅಧ್ಯಕ್ಷ ಎಸ್.ಭಾಸ್ಕರ್, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಅಕ್ಕಯ್ಯಮ್ಮ ಮುನಿಯಪ್ಪ, ಪುರಸಭಾ ಮಾಜಿ ಸದಸ್ಯ ರಾಮಚಂದ್ರಪ್ಪ, ಸಂಘದ ಪದಾಧಿಕಾರಿಗಳಾದ ವಿಶ್ವನಾಥ್, ಸುರೇಶ್, ವೆಂಕಟೇಶ್ ಮತ್ತಿತರರು ಇದ್ದರು.