ದಾವಣಗೆರೆ: ನಗರದ ಹೊರ ವಲಯದ ಶಾಮನೂರು ಬಳಿ ಬೆಸ್ಕಾಂಗೆ ಸೇರಿದ 3.60 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವೈರ್ ಕಳ್ಳತನವಾಗಿದೆ. ಸುನಂದಮ್ಮ ಎನ್ನುವರಿಗೆ ಸೇರಿದ 2 ಲಕ್ಷ ಮೌಲ್ಯದ 4 ಕಿ.ಮೀ ಉದ್ದದ ಎಲೆಕ್ಟ್ರಿಕಲ್ ವೈರ್ ಹಾಗೂ ಪುಷ್ಬ ಎಂಬುವರಿಗೆ ಸೇರಿದ 1.60 ಲಕ್ಷ ಮೌಲ್ಯದ 3 ಕಿ.ಮೀ ಉದ್ದದ ವೈರ್ ಕಳ್ಳತನವಾಗಿದೆ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.