ಮರಿಯಮ್ಮನಹಳ್ಳಿ: ಜಿಂದಾಲ್ ಕಂಪನಿಯು ಸ್ಥಳೀಯ ಲಾರಿಗಳಿಗೆ ಕಡೆಗಣಿಸಿ, ಕನ್ವರ್ ಮೂಲಕ ಅದಿರು ಸಾಗಿಸುತ್ತದೆ ಎಂದು ಸಂಡೂರು ಲಾರಿಮಾಲಿಕರ ಸಂಘದ ಅಧ್ಯಕ್ಷ ಬಾಬುನಾಯ್ಕ ದೂರಿದರು. ಅವರು ಭಾನುವಾರ ಪಟ್ಟಣ ಸಮೀಪದ ಗಾಳೆಮ್ಮನಗುಡಿ ಗ್ರಾಮದ ಬಳಿ,ಮರಿಯಮ್ಮನಹಳ್ಳಿ ಹೋಬಳಿ ಲಾರಿಮಾಲಿಕರ ಸಂಘದ ಸಭೆಯಲ್ಲಿ ಮಾತನಾಡಿದರು. ಇದೆ ಮಂಗಳವಾರ ವಿಜಯನಗರ,ಬಳ್ಳಾರಿ ಹಾಗೂ ಕೊಪ್ಪಳ ಈ 3 ಜಿಲ್ಲೆಗಳ ಸುಮಾರು ಏಳು ಸಾವಿರ ಲಾರಿಮಾಲಿಕರ ನೇತೃತ್ವದಲ್ಲಿ, ಬಳ್ಳಾರಿಯಲ್ಲಿ ಜಿಂದಾಲ್ ಕಾರ್ಖಾನೆಯ ವಿರುದ್ಧ ಬೃಹತ್ ಪ್ರತಿಭಟನಾ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಂದಾಲ್ ಕಂಪನಿಯು ಲಾರಿ ಮಾಲಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಅಲ್ಲದೆ ಲಾರಿಗಳ ಸಾಗಾಣಿಕೆ ಬಾಡಿಗೆಯನ್ನು ಸಹ ಏಳು ವರ್ಷಗಳಿಂದ ಹೆಚ್ಚಿಸದೆ,ಲಾರಿ ಮಾಲಿಕರನ್ನು ನಷ್ಟ ಅನುಭವಿಸುವಂತೆ ಮಾಡುತ್ತಿದೆ.ಜಿಂದಾಲ್ ಕಂಪನಿಯು ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳನ್ನು ವಂಚಿಸುತ್ತಿದೆ. ಕನ್ವರ್ ಮೂಲಕ ಸಾಗಿಸುವ ಅದಿರಿನ ಮೌಲ್ಯವನ್ನು ಸರ್ಕಾರಕ್ಕೆ ಕಡಿಮೆ ಗುಣಮಟ್ಟದಲ್ಲಿ ತೋರಿಸುವ ಮೂಲಕ, ಕೋಟ್ಯಂತರ ರೂ.ಗಳನ್ನು ಸರ್ಕಾರಕ್ಕೆ ವಂಚಿಸುತ್ತಿದೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಗಮನಸೆಳೆದು, ಜಿಂದಾಲ್ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದರು. ಈ ಸಂಧರ್ಭದಲ್ಲಿ ತಾಲ್ಲೂಕು ಗೌರವ ಅಧ್ಯಕ್ಷ ಬಸವನಗೌಡ, ಮರಿಯಮ್ಮನಹಳ್ಳಿ ಹೋಬಳಿ ಅಧ್ಯಕ್ಷ ಹೊನ್ನೂರಲಿ, ಗೌರವ ಅಧ್ಯಕ್ಷ ಖಲಂದರ್,ಟಿ.ಪಿ.ನಾಗರಾಜ, ಕಾರ್ಯದರ್ಶಿ ಕಡ್ತರ ರಫಿಕ್, ಬಸವರಾಜ, ಮುಕ್ತಿಯಾರ, ಪರಶುರಾಮ, ಹನುಮಂತ,ನಾಗರಾಜ, ಮಧುಕುಮಾರ್, ಗೋಣ್ಯಪ್ಪ,ಬಸವರಾಜ,ಜಾಫರ್,ಯುಸೂಫ್,ರಾಜಭಕ್ಷಿ,ಬಾಷ,ಕೆ.ಹುಸೇನ್ ಬಾಷ, ಸೇರಿದಂತೆ ಇತರರಿದ್ದರು.