ಚೌಡೇಶ್ವರಿ ದೇವಾಲಯಕ್ಕೆ ಜಿಲ್ಲಾಧಿಕಾರಿ ಭೇಟಿ

ದೇವನಹಳ್ಳಿ: ನವರಾತ್ರಿ ವಿಶೇಷವಾಗಿ ದೇವನಹಳ್ಳಿ ಪಟ್ಟಣದ ಸರ್ವಶಕ್ತ್ಯಾತ್ಮಕ ಶ್ರೀ ಚೌಡೇಶ್ವರಿ ದೇವಿ ದರ್ಶನ ಪಡೆದು ರಾಜ್ಯದ ಜನತೆಗೆ ಒಳಿತಾಗಲಿ ಪ್ರಪಂಚವನ್ನು ಆವರಿಸಿರುವ ಮಹಾಮಾರಿ ಕೊರೋನಾ ತೊಲಗಿ ಜನತೆ ಸುಭಿಕ್ಷವಾಗಿರಲಿ ಕಳೆದ ವರ್ಷ ಜನತೆ ಸಹಕರಿಸಿದಂತೆ ಈ ಬಾರಿ ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಸಲಹೆ ನೀಡಿದರು. ದೇವನಹಳ್ಳಿ ಪಟ್ಟಣದ ಪಾರ್ಕ್ ರಸ್ತೆಯಲ್ಲಿನ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಶರನ್ನವರಾತ್ರಿ ಪ್ರಯುಕ್ತ ಐದನೇ ದಿನವಾದ ಇಂದು ಹೂವಿನ ಅಲಂಕಾರದೊಂದಿಗಿನ ಅಮ್ಮನವರ ದರ್ಶನ ಪಡೆದು ನಂತರ ಮಾತನಾಡಿ, ಕೋವಿಡ್ ಮೂರನೆ ಅಲೆ ಮುನ್ನೆಚರಿಕೆಯಾಗಿ ಹೆಚ್ಚು ಜನ ಸೇರದಂತೆ ಅಂತರ ಕಾಯ್ದುಕೊಂಡು ಸರ್ಕಾರದ ಮಾರ್ಗ ಸೂಚಿಯನ್ನು ಅನುಸರಿಸಿ ಮಹೋತ್ಸವ ಆಚರಿಸಬೇಕೆಂದು ತಿಳಿಸಿದರು.

ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಮಾಡುವ ಮೂಲಕ ಆಚರಿಸುತ್ತಿದ್ದು ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ವಿಜಯ ದಶಮಿ ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್ ತಿಳಿಸಿದರು. ಇದೇ ವೇಳೆ ಶ್ರೀ ವೇಣುಗೋಪಾಲ ಸ್ವಾಮಿ ಬ್ರಹ್ಮರಥೋತ್ಸವ ಅನ್ನದಾನ ಸಮಿತಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಸೀಲ್ದಾರ್ ಅನಿಲ್ ಕುಮಾರ್, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ, ಸದಸ್ಯ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್, ಮುಖ್ಯಾಧಿಕಾರಿ ಎ.ಹೆಚ್.ನಾಗರಾಜ್, ದೇವಾಲಯ ಸಮಿತಿಯ ಸದಸ್ಯರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top