ಬಳ್ಳಾರಿ : ಅಖಿಲ ಕರ್ನಾಟಕ ಚಿರಂಜೀವಿ ಯುವತ ಸಂಘದ ವತಿಯಿಂದ ಇಂದು ಬಳ್ಳಾರಿ ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಭಾರತ ಚಿರಂಜೀವಿ ಯುವತ ರಾಷ್ಟ್ರಧ್ಯಕ್ಷರಾದ ಸತ್ಯನಾರಾಯಣ ಮಹೇಶ್‌ನವರ ಆದೇಶದ ಮೇರೆಗೆ ಅಖಿಲ ಕರ್ನಾಟಕ ಚಿರಂಜೀವಿ ಯುವತ ಬಳ್ಳಾರಿ ಘಟಕದ ಅಧ್ಯಕ್ಷ ರಾಜು (ನಾಗರಾಜು) ರವರ ನಿರ್ದೇಶನದಂತೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡು, ನಗರದ ಕೇಂದ್ರ ಗ್ರಂಥಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಆಚಾರ್ಯ ದೇವೋಭವ ಚಿತ್ರದ ಹೆಸರಿನಲ್ಲಿ ಪ್ರತೀ ವಾರ ಒಂದೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಎಲ್ಲಾ ಚಿರಂಜೀವಿ ಅಭಿಮಾನಿಗಳು ಸಭೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನ ಮಾಡಿದ್ದು, ಈ ನಿಟ್ಟಿನಲ್ಲಿ ಮೊದಲನೇ ವಾರವಾಗಿ ಇಂದು ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಕೇಂದ್ರ ಗ್ರಂಥಾಲಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಅಖಿಲ ಕರ್ನಾಟಕ ಚಿರಂಜೀವಿ ಯುವತ ಬಳ್ಳಾರಿ ಘಟಕದ ಅಧ್ಯಕ್ಷ ರಾಜು ತಿಳಿಸಿದರು
ಈ ಅಭಿಯಾನದಲ್ಲಿ ವೆಂಕಟೇಶ್, ರಾಜೇಶ್, ಯುವರಾಜ್, ನಾಗರಾಜ್, ಶ್ರೀರಾಮ್, ಲಕ್ಷ್ಮಣ, ಉಮೇಶ್ ಸೇರಿದಂತೆ ಚಿರಂಜೀವಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.