ಬಳ್ಳಾರಿ: ದೇಶದ ಆಳುವ ಸರ್ಕಾರ ಗಳು ದುಡಿಯುವ ನೌಕರ ವರ್ಗಗಳ ಕಡೆ ಗಮನ ಹರಿಸದೆ ಖಾಸಗೀಕರಣದ ಉಮೇದಿಯಲ್ಲಿ ತೇಲಾಡುತ್ತಿವೆ ಎಂದು ಕರ್ನಾಟಕ ವಲಯ ಕಾರ್ಯದರ್ಶಿ ಗಳಾದ ಜಾನಕಿರಾಮ್ ತಿಳಿಸಿದರು. ನಗರದ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಳ್ಳಾರಿ ವಿಭಾಗ ಹಾಗೂ ಹೊಸಪೇಟೆ ವಿಭಾಗದ ಜಂಟಿ ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರ ಕೂಗಿಗೆ ತಕ್ಕ ಬೆಲೆ ಆಯಾ ವಿಭಾಗದ ಸಂಘಟನೆಗಳ ಮೂಲಕವೇ ದೊರಕ ಬಹುದೇ ವಿನಃ ಆಳುವ ವರ್ಗದಿಂದ ಅಲ್ಲ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲಾ ಅಂಚೆ ಅಧೀಕ್ಷಕ ರಾದ ಪಿ.ಚಿದಾನಂದ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿ, ಇಲಾಖೆ ಕೊಡುವ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನಮ್ಮ ನೌಕರರು ಮಾಡುತ್ತಿದ್ದಾರೆ ಹಾಗೂ ಅದೇ ರೀತಿ ನಮ್ಮ ನೌಕರರ ಹಿತಾಸಕ್ತಿಗಳನ್ನು ಹಾಗೂ ಅವರ ಬೇಡಿಕೆಗಳನ್ನು ಶಕ್ತಾನುಸಾರ ಅಧಿಕಾರಿ ವರ್ಗದಿಂದ ಪೂರೈಕೆ ಮಾಡಲಾಗುತ್ತದೆ ಎಂದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮಹಾನಗರ ಪಾಲಿಕೆ ಸದಸ್ಯರಾದ ಜಾನಕಿ ನಾಗರಾಜ್ ಮಾತನಾಡಿ, ಅಂಚೆ ಇಲಾಖೆ ಸರಿ ಸುಮಾರು ಒಂದು ನೂರ ಎಪ್ಪತ್ತು ವರ್ಷಗಳ ಹಿಂದಿನಿಂದ ಈಗಿನವರೆಗೂ ತುಂಬಾ ಪ್ರಾಮಾಣಿಕವಾಗಿ ಜನರಿಗೆ ಸೇವೆಯನ್ನು ಕೊಡುತ್ತಾ ಬಂದಿದೆ.
ನಾನು ಸಣ್ಣವಳಿದ್ದಾಗಿನಿಂದಲೂ ಇಲಾಖೆಯ ಬಗ್ಗೆ ತುಂಬಾ ಅಭಿಮಾನ ವಿದೆ ಇಲಾಖೆಯು ಬರೀ ಪತ್ರ ಬಟವಾಡೆ ಮಾಡುವುದು ಅಷ್ಟೇ ಎಂದು ತಿಳಿದುಕೊಂಡಿದ್ದೆ ಆದರೆ ಈಗ ಪ್ರತಿಯೊಬ್ಬ ನಾಗರಿಕನಿಗೂ ಅಂಚೆ ಇಲಾಖೆ ತುಂಬಾ ಅವಶ್ಯಕತೆ ಇದೆ ಎಂದರು. ಎಐಯುಟಿಯುಸಿ ರಾಜ್ಯಾಧ್ಯಕ್ಷ ಕಾಮ್ರೆಡ್.ಕೆ ಸೋಮಶೇಖರ್ ಕಾರ್ಯಕ್ರಮವನ್ನುದ್ದೇಶಿಸಿ, ಸ್ವತಂತ್ರದ ಪೂರ್ವದಲ್ಲಿ ಮತ್ತು ಸ್ವತಂತ್ರ ಬಂದ ಎರಡು ದಶಕಗಳವರೆಗೂ ರಾಷ್ಟ್ರೀಕರಣ ತುಂಬಾ ಇತ್ತು. ಆಗ ಹಲವಾರು ಖಾಸಗಿ ಕಂಪನಿಗಳು ಒಡಂಬಡಿಕೆ ಮೇರೆಗೆ ರಾಷ್ಟ್ರೀಕರಣ ಆದವು, ಆದರೆ ಇಂದು ರಾಷ್ಟ್ರೀಕರಣವು ಖಾಸಗೀಕರಣಗೊಂಡಿದ್ದು, ಸೇವಾ ಮನೋಭಾವ ಹೋಗಿ ಲಾಭ-ನಷ್ಟದ ಪ್ರಶ್ನೆ ಎದ್ದಿದೆ ಎಂದರು. ಅಖಿಲ ಭಾರತ ಅಂಚೆ ನೌಕರರ ಸಂಘ ಗಳ ಕರ್ನಾಟಕ ವಲಯದ ಮಹಿಳಾ ಸಂಚಾಲಕಿ ಚೈತ್ರ ಮಹಿಳೆಯರಿಗೆ ಆಗುವ ಶೋಷಣೆ ಮತ್ತು ಮಹಿಳೆಯರ ಅಗತ್ಯಗಳನ್ನು ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎಸ್‌ಸಿ/ಎಸ್‌ಟಿ ಸಂಘದ ವಲಯ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ ಮತ್ತು ಉತ್ತರ ಕರ್ನಾಟಕ ವಲಯದ ಪ್ರಾದೇಶಿಕ ಪ್ರತಿನಿಧಿ ಬೆಳಗಾವಿಯ ಧರ್ಮೇಂದ್ರ, ಹಾಗೂ ಉಪ ಅಂಚೆ ಅಧೀಕ್ಷಕರಾದ ಕೆ ಶ್ರೀನಿಧಿ, ಎಐಪಿಇಯು ಮಾಜಿ ಅಧ್ಯಕ್ಷ ಅನೀಶ್ ಅಹಮದ್, ಹೊಸಪೇಟೆ ಪೋಸ್ಟ್ ಮಾಸ್ಟರ್ ರಶೀದ್ ಸಾಹೇಬ್, ಕಾಮ್ರೇಡ್ ವಿ ತಿಂದಪ್ಪ, ಸಹಕಾರ ಸಂಘದ ಕಾರ್ಯದರ್ಶಿ ಹೇಮಣ್ಣ ಉಪಸ್ಥಿತರಿದ್ದರು.
ಅಖಿಲ ಭಾರತ ಅಂಚೆ ನೌಕರರ ಸಂಘದ ಬಳ್ಳಾರಿ ವಿಭಾಗದ ಅಧ್ಯಕ್ಷ ಅಂಚೆ ತಿಮ್ಮಪ್ಪ, ಹಾಗೂ ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ಅಧ್ಯಕ್ಷ ಕಾಮ್ರೇಡ್ ಬಿ.ಚೆನ್ನಬಸಪ್ಪ ಮತ್ತು ಗ್ರಾಮೀಣ ಅಂಚೆ ನೌಕರರ ಅಧ್ಯಕ್ಷ ತಿರುಮಲ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಕೂಡ್ಲಿಗಿ ಪೋಸ್ಟ್ ಮಾಸ್ಟರ್ ಕೊಟ್ರೇಶ್ ಇವರು ಸಂಘಟನೆ ಏಕೆ ಬೇಕು..? ಸಂಘಟನೆಯ ಶಕ್ತಿ ಸಂಘಟನೆಯ ಸ್ವರೂಪ ಹಾಗೂ ಸಂಘಟನೆಯಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿದರು. ಬಳ್ಳಾರಿ ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ನಾಗರಾಜು ಬಹುಮಾನ ವಿತರಣೆ ಮಾಡಿದರು. ಅಖಿಲ ಭಾರತ ಅಂಚೆ ನೌಕರರ ಸಂಘಟನೆಯ ಕಾರ್ಯದರ್ಶಿಅಲ್ಲ ಸಾಬ್ ರವರು ದ್ವೈವಾರ್ಷಿಕ ಅಧಿವೇಶನದ ವಾರ್ಷಿಕ ವರದಿಯನ್ನು ಓದಿದರು. ಹೊಸಪೇಟೆಯ ಕೃಷ್ಣ ಸ್ವಾಗತಿಸಿದರು. ನಿರಂಜನ್, ನಾಜಿಯಾ ನಿರೂಪಿಸಿದರು.