ಪ್ರಾಥಮಿಕ ಆರೋಗ್ಯ ಕೇಂದ್ರ ಮೀರಾಸಾಬಿ ಹಳ್ಳಿಯಲ್ಲಿ ವಿಶ್ವ ಸೊಳ್ಳೆ  ದಿನಾಚರಣೆ

1897ರ ಆಗಸ್ಟ್ 20ರಂದು ಬ್ರಿಟಿಷ್ ಸೇನೆಯ ಸರ್ಜನ್ ಸರ್ ರೊನಾಲ್ಡ್ ರೋಲ್ಸ್ ಎನ್ನುವ ಜೀವವಿಜ್ಞಾನಿಯು ಜನರಿಗೆ ಮೃತ್ಯುಕೂಪವೆನ್ನಿಸುವ ಮಲೇರಿಯಾ ರೋಗವು ಪ್ಯಾರಸೈಟ್ ಮೂಲಕ ಹರಡಲು ಅನಾಫೆಲಿಸ್ ಎನ್ನುವ ಹೆಣ್ಣು ಸೊಳ್ಳೆಯು ಕಾರಣವೆಂದು ಜಗತ್ತಿಗೆ ವಿವರಿಸಿದ ದಿನವಾಗಿದೆ. ಈ ಸೊಳ್ಳೆಯು ಇಷ್ಟೊಂದು ಭೀಕರ, ಆಘಾತಕಾರಿ ವ್ಯಾಧಿಯನ್ನು ಹರಡುತ್ತದೆ ಎಂಬ ಕಲ್ಪನೆಯು ಜನರಿಗೆ ಅದುವರೆಗೂ ಇರಲಿಲ್ಲ. ಹೀಗೆ ಅರಿವನ್ನು ಮೂಡಿಸಿದ ಆ ವಿಜ್ಞಾನಿಯ ನೆನಪಿಗಾಗಿ ಆಗಸ್ಟ್ 20 ವಿಶ್ವ ಸೊಳ್ಳೆಗಳ ದಿವಸವೆಂದು ಆಚರಿಸಲಾಗುತ್ತದೆ.

      ಸೊಳ್ಳೆಗಳು ಜಗತ್ತಿನಾದ್ಯಂತ ಯಾವುದೇ ಪ್ರಾಣಿ ಅಥವಾ ಜೀವ ಜಂತುಗಳಿಗಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತವೆ. ಈ ಸೊಳ್ಳೆಗಳ ಜೀವನ ಚಕ್ರವು ಬಲು ವಿಶಿಷ್ಟವಾದುದಾಗಿದೆ. ಇವು ನಾಲ್ಕು ಹಂತಗಳನ್ನು ಒಳಗೊಂಡಿವೆ. ಮೊಟ್ಟೆ, ಲಾರ್ವ, ಪ್ಯೂಪ ಮತ್ತು ಪ್ರೌಢ ಸೊಳ್ಳೆಗಳು ಎನ್ನುವ ಹಂತಗಳನ್ನು ಹೊಂದಿರುವ ಸೊಳ್ಳೆಗಳು ನಿಂತ ನೀರಿನಲ್ಲಿ ಮಾತ್ರ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಕೇವಲ 48 ಗಂಟೆಗಳಲ್ಲಿ ಲಾರ್ವ ರೂಪವನ್ನು ಪಡೆದು ಸುಮಾರು ಎರಡು ವಾರ ನೀರಿನಲ್ಲಿ ತಲೆಕೆಳಗಾಗಿ ನೇತಾಡುತ್ತವೆ.ಅನಂತರ ಇವು ಪ್ಯೂಪಾ ಹಂತವನ್ನು ಪಡೆದು ಯಾವುದೇ ಆಹಾರವನ್ನು ಸೇವಿಸದೆ ನಿಷ್ಕ್ರಿಯವಾಗಿರುತ್ತವೆ. ಆನಂತರ ಇವು ಸಾಕಷ್ಟು ಬೆಳೆದು ಪ್ರೌಢಹಂತವನ್ನು ಪಡೆದು  ರಕ್ತ ಪಿ ಪಾಸುಗಳಾಗಿ ಇತರ ಜೀವಿಗಳನ್ನು ಕಚ್ಚುತ್ತವೆ.

 

      ಅಂಟಾರ್ಟಿಕಾ ಪ್ರದೇಶವನ್ನು ಹೊರತುಪಡಿಸಿ ಜಗತ್ತಿನ ಎಲ್ಲ ಭಾಗಗಳಲ್ಲಿಯೂ ವಿವಿಧ ಬಗೆಯ ಸೊಳ್ಳೆಗಳು ಇರುತ್ತವೆ. ಸುಮಾರು 3500ಕ್ಕೂ ಹೆಚ್ಚು ವಿಧದ ಸೊಳ್ಳೆಗಳ ಪ್ರಭೇದಗಳಿದ್ದು ಅವು ನೂರಕ್ಕೂ ಹೆಚ್ಚು ವಿವಿಧ ಕಾಯಿಲೆಗಳನ್ನು ಹರಡುತ್ತವೆ.ಈ ರೋಗಗಳು ಪ್ರತಿವರ್ಷವೂ ಲಕ್ಷಾಂತರ ಜನರ ಜೀವವನ್ನು ಬಲಿ ಪಡೆಯುತ್ತಿದ್ದು 2020ರಲ್ಲಿ ಸುಮಾರು 6 ಲಕ್ಷ ಜೀವ ಹಾನಿಯನ್ನು ಮಾಡಿವೆ.

ಸೊಳ್ಳೆಗಳು ನಿಂತ ನೀರಿನಲ್ಲಿ ಮಾತ್ರ ಮೊಟ್ಟೆಯನ್ನು ಇಡುತ್ತವೆ. ಮಳೆಗಾಲದಲ್ಲಿ ಹರಿದು ಹೋಗುವ ನೀರಿನಲ್ಲಿ ಇವು ಮೊಟ್ಟೆಯನ್ನು ಇಡುವುದಿಲ್ಲ.ಕೊಳ್ಳಗಳಲ್ಲಿ ತುಂಬಿಕೊಳ್ಳುವ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಆದುದರಿಂದ ಸೊಳ್ಳೆಗಳ ಸಂತಾನೋತ್ಪತಿಯನ್ನು ತಡೆಯಲು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು.ತೆಂಗಿನ ಚಿಪ್ಪು,ಬಳಸಲ್ಪಟ್ಟ ಟಯರ್ ಇವನ್ನು ವಿಲೇವಾರಿಮಾಡಬೇಕು.ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆಯ ಬದಿಯಲ್ಲಿ ಎಂದೀ ಎಸೆಯಬಾರದು. ತಾರಸಿಯಲ್ಲಿ ನೀರಿನ ಕುಂಡದಲ್ಲಿ ನೀರು ನಿಲ್ಲದಂತೆ ಜಾಗೃತಿಯನ್ನು ಮಾಡಬೇಕು .ನೀರಿನ ಟ್ಯಾಂಕ್, ತೊಟ್ಟಿಗಳನ್ನು ಮುಚ್ಚಿಡಬೇಕು. ಪಾತ್ರಗಳಲ್ಲಿ ಇರುವ ನೀರನ್ನು ಪ್ರತಿ ದಿವಸವು ಬದಲಾಯಿಸಬೇಕು. ಎಲ್ಲ ಸೊಳ್ಳೆಗಳು ಕಚ್ಚುವುದಿಲ್ಲ. ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಕಚ್ಚುತ್ತವೆ‌

     ಸೊಳ್ಳೆಗಳ ಕಡಿತವನ್ನು ತಪ್ಪಿಸಿಕೊಳ್ಳಲು ಸಂಪೂರ್ಣವಾಗಿ ಮೈಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಕಿಟಕಿ ಬಾಗಿಲುಗಳಿಗೆ ಮೆಶ್ ಅಳವಡಿಸಬೇಕು. ರಾತ್ರಿ ಮಲಗುವ ಮುನ್ನ ಕೋಣೆಯಲ್ಲಿ ಸೊಳ್ಳೆ ಕಾಯ್ಲ್, ಸೊಳ್ಳೆ ಅಗರಬತ್ತಿಯನ್ನು ಉರಿಸಿ, ಸೊಳ್ಳೆಗಳು ಹೊರಗೆ ಹೋದ ಅನಂತರ ಕಿಟಕಿ ಬಾಗಿಲುಗಳನ್ನು ಹಾಕಿಕೊಳ್ಳಬೇಕು. ಸೊಳ್ಳೆಗಳು ಕಟ್ಟಡದಂತೆ ಮೈಗೆ ಸೊಳ್ಳೆ ಕಡಿತ ನಿರೋಧಕ ಎಣ್ಣೆಯನ್ನು ಹಚ್ಚಿಕೊಳ್ಳಬಹುದು. ದನದ ಕೊಟ್ಟಿಗೆಗಳಲ್ಲಿ ರಾತ್ರಿಯ ವೇಳೆಗೆ ಹೊಗೆಯನ್ನು ಹಾಕುವುದರಿಂದಲೂ ಸೊಳ್ಳೆಗಳ ಕಾಟವನ್ನು ನಿಯಂತ್ರಿಸಬಹುದು.

      ಯಾವುದೇ ಕ್ರಮವನ್ನು ಅನುಸರಿಸಿದರೂ ಸೊಳ್ಳೆಗಳನ್ನು ಜಗತ್ತಿನಿಂದ ಇಲ್ಲವಾಗಿಸಲು ಸಾಧ್ಯವೇ ಇಲ್ಲ. ಮಳೆ ಬಂದ ಅನಂತರ ಕೆರೆಕುಂಟೆಗಳಲ್ಲಿ ಸಣ್ಣ ಸಣ್ಣ ಗುಂಡಿಗಳಲ್ಲಿ ನೀರು ಶೇಖರವಾಗುವುದುಂಟು. ಈ ಸಂಗ್ರಹಿತ ನೀರನ್ನು ಸುಲಭದಲ್ಲಿ ಖಾಲಿ ಮಾಡಲು ಎಂದಿಗೂ ಸಾಧ್ಯವಾಗದು. ಆದರೆ ಸೊಳ್ಳೆಗಳ ಕಡಿತವನ್ನು ತಡೆಗಟ್ಟುವ ಮಾರ್ಗಗಳು ಹಲವಾರು ಇವೆ. ಇವನ್ನು ನಾವು ಅನುಸರಿಸಿದಾಗ ಸೊಳ್ಳೆಗಳ ಕಡಿತದಿಂದ ಮನುಕುಲಕ್ಕೆ ತಗಲಬಹುದಾದ ಕಾಯಿಲೆಯನ್ನು ಕಡಿಮೆಗೊಳಿಸಿಕೊಳ್ಳಬಹುದು ಎಂದು ವಿಸ್ತಾರವಾದ ಮಾಹಿತಿಯನ್ನು ತಿಳಿಸಿದರು, ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿಗಳು ಗುರುಪ್ರಸಾದ್ HC, ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ನವೀನ್ ಕುಮಾರ್ CN, ಪ್ರಾಥಮಿಕ ಸುರಕ್ಷತಾಧಿಕಾರಿಗಳಾದ ರೇಣುಕಮ್ಮ,, ಮಂಜುಳಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸ್ನೇಹ, ಕರಿಯಣ್ಣ ನರ್ಸಿಂಗ್ ಅಧಿಕಾರಿಗಳಾದ ಚಾಂದ್ ಬಿ ಫಾರ್ಮಸಿ ಅಧಿಕಾರಿಗಳಾದ  ಶಂಕರ್ ಎಲ್ಲಾ ಆಶಾ ಕಾರ್ಯಕರ್ತರುಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top