ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ: ಕೇವಲ ಆತ್ಮವಿಶ್ವಾಸ ಮತ್ತು ದೃಢವಾದ ನಿಲುವಿನಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸಬಹುದು. ಹೆಚ್ಚಿನ ಪ್ರಯತ್ನದಿಂದ ಮಾತ್ರ ಜಮೀನು ಅಥವಾ ಮನೆಯನ್ನು ಕೊಳ್ಳಬಹುದು. ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಕಾಂಟ್ರಾಕ್ಟ್ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇಷ್ಟವಿಲ್ಲದಿದ್ದರೂ ಬೇರೆಯವರ ಸಲುವಾಗಿ ಹಣವನ್ನು ಸಾಲವಾಗಿ ಪಡೆಯಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ ಬಾರದು. ಹಣದ ಮೇಲಿನ ಆಸೆಯಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ.

ವೃಷಭ:  ಪ್ರತಿ ವಿಚಾರದಲ್ಲಿಯೂ ಬುದ್ದಿವಂತಿಕೆಯೇ ಮೂಲ ಬಂಡವಾಳವಾಗುತ್ತದೆ. ಹಣದ ತೊಂದರೆಯಿಲ್ಲ, ಆದರೆ ಅನಾವಶ್ಯಕವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ತವರಿನಿಂದ ಉಡುಗೊರೆಯಾಗಿ ಭೂಮಿ ಅಥವಾ ಮನೆ ದೊರೆಯುತ್ತದೆ. ಆತ್ಮೀಯರೊಂದಿಗೆ ಮಾಡುತ್ತಿದ್ದ ಪಾಲುಗಾರಿಕೆಯ ವ್ಯಾಪಾರವನ್ನು ಅರ್ಧಕ್ಕೆ ನಿಲ್ಲಿಸುವಿರಿ. ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ವಿರೋಧಿಗಳನ್ನು ಸ್ನೇಹಿತರಂತೆ ಕಾಣುವುದು ಒಳ್ಳೆಯದು. ಕರುಣೆಯಿಂದ ಎಲ್ಲರ ಮನಸ್ಸನ್ನು ಗೆಲ್ಲಿರಿ

ಮಿಥುನ: ಆತ್ಮೀಯರ ಸಹಾಯದಿಂದ ಅನಿರೀಕ್ಷಿತ ಧನಲಾಭ ದೊರೆತು ಹಣದ ಮುಗ್ಗಟ್ಟಿನಿಂದ ಪಾರಾಗುವಿರಿ. ಯಶಸ್ಸನ್ನು ಗಳಿಸಲು ಧೈರ್ಯ ಮತ್ತು ಸ್ಥಿರವಾದ ಮನಸ್ಸಿನ ಅಗತ್ಯವಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಬೇಸರದಿಂದ ಉದ್ಯೋಗವನ್ನು ತೊರೆದು ಸ್ವಂತ ಉದ್ಯಮವನ್ನು ಆರಂಭಿಸುವ ನಿಶ್ಚಯಕ್ಕೆ ಬರುವಿರಿ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ವಾಚನಾಲಯ ಮತ್ತು ಬೋಧನಾ ಕೇಂದ್ರಗಳನ್ನು ಆರಂಭಿಸುವ ಸಾಧ್ಯತೆಗಳಿವೆ. ಜನಸೇವೆಯಲ್ಲಿ ಮನಸಾಗಿ ರಾಜಕೀಯ ಪ್ರವೇಶಿಸುವ ಸಾಧ್ಯತೆ ಇದೆ. ಲೇಖಕರು ಮತ್ತು ಕವಿಗಳಿಗೆ ವಿಶೇಷ ಸ್ಥಾನ ಲಭಿಸುತ್ತದೆ.

ಕಟಕ: ಎಲ್ಲಾ ಅನುಕೂಲತೆಗಳು ಒದಗಿಬಂದರೂ ಮನಸ್ಸಿಗೆ ನೆಮ್ಮದಿ ಇರದು. ಸಮಾಜದಲ್ಲಿ ವಿಶೇಷ ಗೌರವ ಲಭಿಸುತ್ತದೆ. ವಂಶಕ್ಕೆ ಸಂಬಂಧಪಟ್ಟ ಆಸ್ತಿ ವಿಚಾರದಲ್ಲಿನ ವಿವಾದದಲ್ಲಿ ಯಶಸ್ಸನ್ನು ಗಳಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ವಿದೇಶ ಪ್ರಯಾಣ ಯೋಗವಿದೆ. ಉದ್ಯೋಗದಲ್ಲಿ ಆಂತರಿಕ ಶತ್ರುಗಳಿರುತ್ತವೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಲಾಭ ಇರುತ್ತದೆ. ಉಸಿರಿಗೆ ಸಂಬಂಧಿಸಿದ ದೋಷವಿದ್ದಲ್ಲಿ ಎಚ್ಚರಿಕೆಯಿಂದ ಇರಿ. ಬಳಕೆ ಮಾಡುತ್ತಿದ್ದ ವಾಹನಗಳನ್ನು ದುರಸ್ತಿಗೊಳಿಸಿ ಮರು ಮಾರಾಟ ಮಾಡಿದರೆ ಮಾಡುವ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ

ಸಿಂಹ: ಲಾಭ ನಷ್ಟ ಎರಡನ್ನು ಕ್ರೀಡಾ ಮನೋಭಾವನೆಯಿಂದ ಒಂದೇ ರೀತಿ ಸ್ವೀಕರಿಸುವಿರಿ. ಕುಟುಂಬದಲ್ಲಿನ ಒಗ್ಗಟ್ಟು ನಿಮ್ಮ ಮನಸ್ಸಿನ ನೋವು ದುಗುಡವನ್ನು ದೂರ ಮಾಡುತ್ತದೆ. ಪ್ರಯೋಜನವಿಲ್ಲದ ಓಡಾಟ ಇರುತ್ತದೆ. ಕುಟುಂಬದ ಒಂದು ದೊಡ್ಡ ವಿವಾದ ವಿದ್ಯಾರ್ಥಿಗಳ ಏಕಾಗ್ರತೆಗೆ ದಕ್ಕೆ ಉಂಟುಮಾಡುತ್ತದೆ. ಸರ್ಕಾರಿ ಹುದ್ದೆಯಲ್ಲಿ ಇರುವವರಿಗೆ ಬಡ್ತಿ ದೊರೆಯಬಹುದು. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ತೀರ್ಮಾನವಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

ಕನ್ಯಾ: ಸ್ವಂತ ಬಳಕೆಗಾಗಿ ವಾಹನವನ್ನು ಕೊಳ್ಳುವಿರಿ. ಆಕಸ್ಮಿಕವಾಗಿ ವಿವಾಹ ನಿಶ್ಚಯವಾಗುತ್ತದೆ. ವಿದ್ಯಾರ್ಥಿಗಳು ಸದಾಕಾಲ ಓದಿನಲ್ಲಿ ಕಾಲ ಕಳೆಯುತ್ತಾರೆ. ಸುಲಭವಾಗಿ ಕೆಲಸ ಕಾರ್ಯಗಳನ್ನು ಪರಿಪೂರ್ಣಗೊಳಿಸಲಾಗದೆ ಒತ್ತಡಕ್ಕೆ ಒಳಗಾಗುವಿರಿ. ಪಾಲಕರ ತಪ್ಪುನಿರ್ಧಾರದಿಂದಾಗಿ ನಡೆಯಬೇಕಿದ್ದ ಮಂಗಳ ಕಾರ್ಯವೊಂದು ಮುಂದೆ ಹೋಗಲಿದೆ. ಕಿವಿ ನೋವು ಅಥವಾ ಕಿವಿಯಲ್ಲಿ ನೀರು ಸೋರುವಿಕೆಯ ತೊಂದರೆ ನಿಮ್ಮನ್ನು ಕಾಡುತ್ತದೆ. ಆಹಾರ ತಯಾರಿಕೆ ಅಥವಾ ಸರಬರಾಜು ಮಾಡುವವರಿಗೆ ವಿಶೇಷ ಲಾಭವು ದೊರೆಯಲಿದೆ. ವಾರಾಂತ್ಯದಲ್ಲಿ ದೂರದ ಊರಿಗೆ ಪ್ರವಾಸ ಹೋಗುವಿರಿ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಸಂಭಾಳಿಸಿ

ತುಲಾ: ಹಣದ ತೊಂದರೆ ಕಡಿಮೆಯಾಗುತ್ತದೆ. ದಂಪತಿಗಳ ನಡುವೆ ಅನಾವಶ್ಯಕ ವಾದ ವಿವಾದ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭವರ್ತಮಾನ ಬರಲಿದೆ. ಹಣದ ಸಹಾಯ ದೊರೆತರೂ ಉತ್ತಮ ಆದಾಯವಿದ್ದರೂ ಬಂದ ಹಣವೆಲ್ಲ ಖರ್ಚಾಗುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಉದ್ಯೋಗ ಮಾಡುತ್ತಿರುವ ಸಂಸ್ಥೆಯ ಮುಖಾಂತರ ವಿದೇಶಕ್ಕೆ ತೆರಳುವಿರಿ. ಹತ್ತಿಯ ಬಟ್ಟೆಗಳು ದೇವರ ಪೂಜಾ ಸಾಮಗ್ರಿಗಳ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಆತ್ಮೀಯರೊಂದಿಗೆ ಹಣದ ವಿವಾದವು ಉಂಟಾಗುತ್ತದೆ

ವೃಶ್ಚಿಕ: ಇರುವ ಗೌರವವಿದ್ದ ಸ್ಥಾನಮಾನವನ್ನು ಉಳಿಸಿಕೊಳ್ಳಲು ಪ್ರಾಯಶಪಡಬೇಕಾಗಿತ್ತು. ನಿಮ್ಮದಲ್ಲದ ಹಣಕಾಸಿನ ವಿವಾದವೊಂದಕ್ಕೆ ಸಿಲುಕಿವಿರಿ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರಿಸುವುದರಿಂದ ಕಲಿಕೆಯಲ್ಲಿ ಹಿಂದುಳಿಯಬಹುದು. ವಿವಾಹ ಯೋಗವಿದೆ. ದಂಪತಿಗಳ ನಡುವೆ ಉತ್ತಮ ಅನ್ಯೋನ್ಯತೆ ಬೆಳೆದು ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ. ಆಹಾರ ಧಾನ್ಯಗಳ ಮಾರಾಟ ಅಥವಾ ಮನೆಗೆ ಮನೆ ಮನೆಗೆ ಪೂರೈಸುವ ಕೆಲಸದಿಂದ ಉತ್ತಮ ಆದಾಯ ಗಳಿಸುವಿರಿ. ಕೆಲಸದ ನಡುವೆ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು

ಧನಸ್ಸು: ಜೀವನದಲ್ಲಿ ಸದಾಕಾಲ ಒಂದಲ್ಲ ಒಂದು ಬದಲಾವಣೆಗಳನ್ನು ಇಷ್ಟಪಡಬೇಡಿ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಅನಪೇಕ್ಷಿತ ವಿಚಾರಗಳಿಗೆ ಹಣವನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಸಮಾಜ ಸೇವೆ ಮಾಡುವ ಅವಕಾಶ ಒದಗಿ ಬರುತ್ತದೆ. ಸಂಗೀತ ನಾಟ್ಯದಂತಹ ವಿಶೇಷ ಪ್ರತಿಭೆ ಉಳ್ಳವರು ಉತ್ತಮ ಅವಕಾಶಕ್ಕೆ ಪಾತ್ರರಾಗುತ್ತಾರೆ. ವಾರಾಂತ್ಯದಲ್ಲಿ ಹುಟ್ಟೂರಿಗೆ ಎಲ್ಲರೊಂದಿಗೆ ತೆರಳುವಿರಿ. ವಿಶೇಷವಾದ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಹೇರಳ ಹಣ ಬೇಕಾಗುತ್ತದೆ

ಮಕರ: ಶಾಂತಿ ಮತ್ತು ಸಹನೆಯ ಗುಣ ಎಲ್ಲಾ ಸಮಸ್ಯೆಗಳಿಂದಲೂ ಪಾರು ಮಾಡುತ್ತದೆ. ಚಿಕ್ಕ ಸ್ಥಿರಾಸ್ತಿ ಒಂದನ್ನು ಮಾರಾಟ ಮಾಡಿ ದೊಡ್ಡ ಮನೆಯನ್ನು ಕೊಲ್ಲುವಿರಿ. ಉದ್ಯೋಗದಲ್ಲಿ ತೊಂದರೆ ಇರದು. ಹೆಚ್ಚಿನ ಆದಾಯ ಗಳಿಸುವ ಉದ್ದೇಶದಿಂದ ಕುಟುಂಬದವರ ಸಹಾಯದಿಂದ ಸ್ವಂತ ಉದ್ದಿಮೆಯನ್ನು ಸ್ಥಾಪಿಸುವಿರಿ. ಮಕ್ಕಳಿಗೆ ಉದ್ಯೋಗ ಲಭಿಸುತ್ತದೆ. ಆಹಾರ ಸಂಸ್ಕರಣೆಯ ವ್ಯಾಪಾರದಲ್ಲಿ ಹೇರಳ ಲಾಭವಿದೆ. ಆರೋಗ್ಯವನ್ನು ಸ್ಥಿರವಾಗಿರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮದಲ್ಲದ ಹಣದ ವಿವಾದದಲ್ಲಿ ಸಿಲುಕಿ ಕೊಳ್ಳುವಿರಿ

ಕುಂಭ: ಆಪತ್ತಿನ ಸಮಯ ಬಂದಾಗ ಭಯಪಡದೆ ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಂಡು ಪಾರಾಗುವಿರಿ. ಕಾದು ನೋಡುವ ತಂತ್ರವನ್ನು ಅನುಸರಿಸುವ ಕಾರಣ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ನಡೆಯುತ್ತವೆ. ಮನದಲ್ಲಿ ಇರುವ ವಿಚಾರವನ್ನು ಅರ್ಥ ಮಾಡಿಕೊಳ್ಳಲು ಸಂಗಾತಿಯಿಂದಲೂ ಸಾಧ್ಯವಿಲ್ಲ. ರಹಸ್ಯವನ್ನು ಕಾಪಾಡಿಕೊಳ್ಳುತ್ತ ಜೀವನದಲ್ಲಿ ಮುಂದೆ ಬರುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರದು. ಸುಲಭವಾಗಿ ಯಾರ ಮಾತನ್ನು ಕೇಳದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಸೋದರೊಂದಿಗೆ ಜಗಳವಿರುತ್ತದೆ ಅಥವಾ ಭೂ ವಿವಾದ ಎದುರಾಗುತ್ತದೆ

ಮೀನ: ಹಣಕಾಸಿನ ಕೊರತೆ ಇರದು. ಮಾತಿನ ಮೇಲೆ ಹತೋಟಿ ಇದ್ದರೆ ಜನರ ಪ್ರೀತಿ ವಿಶ್ವಾಸ ದೊರೆಯುತ್ತದೆ. ಪರಸ್ಠಳದಲ್ಲಿ ಉದ್ಯೋಗ ಲಭಿಸುತ್ತದೆ. ಗೃಹ ಬಳಕೆಯ ಪದಾರ್ಥಗಳ ದುರಸ್ತಿಯಲ್ಲಿ ಉತ್ತಮ ಲಾಭ ಗಳಿಸುವುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಪಾಲುಗಾರಿಕೆ ವ್ಯವಹಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಮಾತನ್ನು ಕಡಿಮೆ ಮಾಡಿ ಕೆಲಸವನ್ನು ಜಾಸ್ತಿ ಮಾಡಬೇಕು. ಅತಿಯಾದ ನಂಬಿಕೆ ಕಷ್ಟಕ್ಕೆ ದಾರಿಯಾದೀತು. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ಸಮಯಕ್ಕೆ ತಕ್ಕಂತೆ ತೀರ್ಮಾನಗಳು ತೆಗೆದುಕೊಳ್ಳಲು ವಿಫಲರಾಗುವಿರಿ.

Facebook
Twitter
LinkedIn
Telegram
WhatsApp

Leave a Comment

Your email address will not be published. Required fields are marked *

Translate »
Scroll to Top