ಸಂಗನಕಲ್ ವಸ್ತು ಸಂಗ್ರಹಾಲಯಕ್ಕೆ ಡೈರಕ್ಟರ್ ಜನರಲ್ ಭೇಟಿ

ಬಳ್ಳಾರಿ: ಭಾರತದ  ಪ್ರಾಚ್ಯಾವಸ್ತು ಸರ್ವೇಕ್ಷಣ ಇಲಾಖೆ ದೆಹಲಿಯ ಡೈರೆಕ್ಟರ್ ಜನರಲ್  ಹಾಗೂ  ರಾಷ್ಟ್ರೀಯ  ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕಿಶೋರ್ ಬಸಾ ಅವರು ಶನಿವಾರ ಸಂಜೆ ರಾಬರ್ಟ್ ಬ್ರೂಸ್ಫುಟ್ ಸಂಗನಕಲ್ ಪ್ರಾಕ್ತನ ವಸ್ತುಸಂಗ್ರಹಲಯಕ್ಕೆ ಭೇಟಿ ನೀಡಿದರು.

 

“ಭಾರತದ ಯಾವುದೇ ಜಿಲ್ಲೆಯಲ್ಲಿ ಕಾಣಸಿಗದ ವಸ್ತುಸಂಗ್ರಹಲಯ ಬಳ್ಳಾರಿ ಜಿಲ್ಲೆಯಲ್ಲಿ ಸ್ಥಾಪಿಸಿದ್ದು ಒಂದು  ಹೆಮ್ಮೆಯ ವಿಷಯ” ಎಂದು ತಿಳಿಸಿದರು.

ಬಳ್ಳಾರಿಯ  ವಸ್ತುಸಂಗ್ರಹಲಯಕ್ಕೆ ಭೇಟಿ ನೀಡಿರುವುದು ನನಗೆ ಬಹಳ  ಸಂತೋಷವಾಗಿದೆ. ಇಲ್ಲಿ ಪ್ರಾಗೈತಿಹಾಸದ ಪಿತಾಮಹ   ರಾಬರ್ಟ್ ಬ್ರೂಸ್ ಫುಟ್  ಅವರಿಗೆ ಗೌರವ ಸಲ್ಲಿಸುವುದಲ್ಲದೆ ಮಾನವನ ಉಗಮ ಮತ್ತು ಅವನ  ವಿಕಾಸನದ ಬಗ್ಗೆ ಸರಿಯಾದ ಕ್ರಮದಲ್ಲಿ ಮಾಹಿತಿಯನ್ನು ವಿವರಿಸಲಾಗಿದೆ. ಇದಲ್ಲದೆ ಮಾನವನು ವಾತಾವರಣ ಹಾಗೂ ಸಾಂಸ್ಕೃತಿಕ ಬದಲಾವಣೆಗಳಿಗೆ ಹೊಂದಿಕೊಂಡ ಬಗ್ಗೆ ವಿವರಿಸಲಾಗಿದೆ ಎಂದು  ತಿಳಿಸಿದರು.

 

ನಮ್ಮ ಪರಂಪರೆಯನ್ನು ಗೌರವಿಸಿ ಕಾಪಾಡಿಕೊಂಡು ಹೋಗಬೇಕೆಂದು ಹಿರಿಯರು  ಹಾಗೂ ಕಿರಿಯರನ್ನು ಪ್ರೋತ್ಸಾಹಿಸುವ ಈ ವಸ್ತುಸಂಗ್ರಹಲಯ ಬ್ರಹತ್ತಾಗಿ ಬೆಳೆಯಲಿ ಎಂದು ಹಾರೈಸುತ್ತ ಇದನ್ನು ಸ್ಥಾಪಿಸಲು ಮುಂದಾಳತ್ವ ವಹಿಸಿದ ಪ್ರೊ ರವಿ ಕೊರಿಶೆಟ್ಟರ್ ಹಾಗೂ ಅವರ ತಂಡಕ್ಕೆ ಮತ್ತು ಎಲ್ಲಾ ರೀತಿಯ ಸಹಕಾರ ನೀಡಿದ  ಜಿಲ್ಲಾ ಆಡಳಿತಕ್ಕೆ  ಅಭಿನಂದಿಸಿದರು.

ಹಂಪಿ  ವೃತ್ತದ ಸುಪರಿಂಟೆಂಡಿಂಗ್ ಆರಕ್ಯೋಲಜಿಸ್ಟ್ ನಿಖಿಲ್ ದಾಸ್ ಹಾಗೂ ಭುವನೇಶ್ವರದಿಂದ ಬಂದಿದ್ದ ಇನ್ನೊಬ್ಬ ಹಿರಿಯ ಅಧಿಕಾರಿ  ಸುಶಾಂತ್ ಕರ್, ವಸ್ತುಸಂಗ್ರಹಲಯದ ಸಮಿತಿ ಸದಸ್ಯರುಗಳಾದ ಸಂತೋಷ್ ಮಾರ್ಟಿನ್, ಎಂ ಅಹಿರಾಜ್ ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top