ಬೆಂಗಳೂರು : ಪ್ರಪ್ರಥಮ ಭಾರಿಗೆ ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 14 ನೇ ಅವೃತ್ತಿಯ ಸ್ಯಾಫ್ ಚಾಂಪಿಯನ್ ಶಿಫ್ 2023, ಪುಟ್ಬಾಲ್ ಟೂರ್ನಿಯ ರ ಮೊದಲ ದಿನದ ಭಾರತ & ಪಾಕಿಸ್ತಾನದ ಮಧ್ಯೆ ನಡೆದ ಐತಿಹಾಸಿಕ ಪುಟ್ಬಾಲ್ ಟೂರ್ನಿ ಪಂದ್ಯವನ್ನು ಪರಿಶಿಷ್ಟ ಪಂಗಡ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮತ್ತು ಶಾಂತಿನಗರದ ಶಾಸಕರು & ಪುಟ್ಬಾಲ್ ಅಸೋಶೇಷನ್ ಅಧ್ಯಕ್ಷ ಎನ್.ಎ ಹ್ಯಾರೀಸ್ ಅವರೊಂದಿಗೆ ಎರಡು ತಂಡಗಳ ಕ್ರೀಡಾಪಟುಗಳಿಗೆ ಶುಭಕೋರುವ ಮೂಲಕ ರೋಚಕ ಪಂದ್ಯಕ್ಕೆ ಚಾಲನೆ ನೀಡಿದರು.

ಇನ್ನು ಪುಟ್ಬಾಲ್ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಉತ್ತೇಜನ ನೀಡಲು ಸಚಿವರು ತಮ್ಮ ಕುಟುಂಬ ಸದಸ್ಯರನ್ನು ಕೂಡ ಕರೆತರುವ ಮೂಲಕ ಮಾದರಿಯಾಗಿದ್ದರು. ಸುಮಾರು 2 ಗಂಟೆಗಳ ಕಾಲ ಕ್ರೀಡಾಂಗಣದಲ್ಲಿ ಆಸಿನರಾಗಿ ಪಂದ್ಯ ವೀಕ್ಷಿಸಿ ಕೊನೆಗೆ ಪಾಕಿಸ್ತಾನ ವಿರುದ್ಧ ಭಾರತದ ಕ್ರೀಡಾಪಟುಗಳ ಮೊದಲ ಪಂದ್ಯದಲ್ಲಿ IND-4= PK-0 ರೋಚಕ ಗೆಲುವು ಸಾಧಿಸಿದರು..

ಪಂದ್ಯವನ್ನು ಗೆದ್ದ ಭಾರತೀಯ ಫುಟ್ಬಾಲ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿ, ಮಾತನಾಡಿದ ಮಾನ್ಯ ಸಚಿವ ಬಿ.ನಾಗೇಂದ್ರ ಅವರು ನಮ್ಮ ಭಾರತೀಯ ಫುಟ್ಬಾಲ್ ತಂಡವು 4-0 ಅಂಕಗಳೊಂದಿಗೆ ಮೈದಾನದಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನೋಡುವುದು ರೋಮಾಂಚನಕಾರಿಯಾಗಿತ್ತು. ಜುಲೈ 4 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕೂಡ ತಾವೆಲ್ಲರೂ ವಿಜೇತರಾಗಿ ನಮ್ಮ ಭಾರತ ದೇಶದ ತ್ರಿವರ್ಣ ಧ್ವಜದ ಕೀರ್ತಿಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಮಾಡಬೇಕು, ನೀವು ಯಾವುದೇ ಅಂತರ್ರಾಷ್ಟ್ರೀಯ ಮಟ್ಟದ ಪುಟ್ಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಂಡರು ಸಹ ನನ್ನ ವೈಯಕ್ತಿಕ ಮತ್ತು ಇಲಾಖೆಯ ಸಹಕಾರ ಇರುತ್ತೆ ಎಂದು ತಿಳಿಸಿದರು.
