ಕೃಷ್ಣ ನಗರದಲ್ಲಿ ವಾಲಿಬಾಲ್ ಪಂದ್ಯಾವಳಿ

ಸಂಡೂರು: ಕೃಷ್ಣಾನಗರ ಗ್ರಾಮ ಪಂಚಾಯತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಶುಕ್ರವಾರ ಪಿಎಸ್ಐ ಬಸವರಾಜ್ ಅಡವಿಬಾವಿ ಅವರು  ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಆಟೋಟಗಳು ಯುವಕರಲ್ಲಿ ಸಂತೋಷವನ್ನು ಉಂಟು ಮಾಡುವದರ ಜೊತೆಗೆ ಆರೋಗ್ಯವನ್ನು ತಂದುಕೊಡುತ್ತವೆ ಎಲ್ಲರೂ ಕ್ರೀಡೆಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಹುಲುಗಪ್ಪ  ಕುಮಾರಸ್ವಾಮಿ ಮತ್ತು ಸಂಡೂರು ತಾಲೂಕು ಗ್ರಾಮ ಪಂಚಾಯತಿ ಸದಸ್ಸರ ಒಕ್ಕೂಟದ ಅಧ್ಯಕ್ಷರಾದ ರೆಡ್ಡಿ ಬಾಬು ಮತ್ತು   ಗ್ರಾಮ ಪಂಚಾಯತಿ ಸದಸ್ಸರು ಗಳಾದ   ವಿರೂಪಾಕ್ಷಪ್ಪ, ನಾಗರಾಜ್, ಪರಸಪ್ಪ, ಮದನ್, ಚಂದ್ರಪ್ಪ, ಮುಜ್ಜು, ಇರ್ಷಾದ್,   ಹುಲುಗಪ್ಪ ಬಡಿಗೇರ್ ಬಿಲ್ ಕಲೆಕ್ಟರ್ ಉಪಸ್ಥಿತರಿದ್ದರು.

ಮುಖಂಡರುಗಳಾದ ಮದೀನಾಬಾಬು, ನಾಣಿಕೇರಿಬಾಬು,  Df ಬಾಬು,  ತಾ. ಪಂ. ಸದಸ್ಯ ಸುಭಾನ್ ಸಾಬ್  ಮತ್ತು ಗ್ರಾಮ ಪಂಚಾಯತಿ ಸಹಾಯ ಹಸ್ತದಿಂದ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಸ್ಥಾನವನ್ನು ಇಂಡಿಯನ್ ರಾಯಲ್ ತಂಡ ದ್ವಿತೀಯ ಸ್ಥಾನವನ್ನು ಎಚ್ ಕೆ ಕೆ ತಂಡ ಪಡೆದುಕೊಂಡವು.

Leave a Comment

Your email address will not be published. Required fields are marked *

Translate »
Scroll to Top