ಬಹಳ ಶಾಂತಿಯುತವಾಗಿ ನೆಡೆದ ಪ್ರತಿಭಟನೆ

ಕುಷ್ಟಗಿ : ಪರಿಶಿಷ್ಟ ಪಂಗಡ ಜಾತಿ ಜನಾಂಗಕ್ಕೆ ಶೇ%೭.೫ ಹಾಗೂ ಪರಿಶಿಷ್ಟ ಜಾತಿ ಜನಾಂಗಕ್ಕೆ ೧೫ ರಿಂದ ಶೇ% ೧೭ ರಷ್ಟು ಮಿಸಲಾತಿ ಹೆಚ್ವಿಸಬೇಕು ಎಂದು ಬೆಂಗಳೂರಿನ ವಿಧಾನಸೌಧ ಮುಂಬಾಗದ ಪ್ರೀಡಂ ಪಾರ್ಕ ನಲ್ಲಿ ವಾಲ್ಮೀಕಿ ಸಮಾಜದ ದಾವಣಗೇರಿ ಜಿಲ್ಲೆ ಹರಿಹರ ತಾಲೂಕು ಪ್ರಸನ್ನಾನಂದ ಪುರಿ ಸ್ವಾಮೀಜಿ ನಿರಂತರ ಸರಕಾರದ ವಿರುದ್ಧ ಪ್ರತಿಭಟನೆ ಕುಳಿತ ಹಿನ್ನಲೆ ಸ್ವಾಮೀಜಿಗೆ ಬೆಂಬಲಿಸಿ ಕೊಪ್ಪಳ ಜಿಲ್ಲೆ ಕುಷ್ಟಗಿ ವಾಲ್ಮೀಕಿ ಸಮಾಜದ ಮುಖಂಡರು, ಪರಿಶಿಷ್ಟ ಜಾತಿ ಮುಖಂಡರು ಸೇರಿದಂತೆ ಇನ್ನಿತರ ಹಿಂದುಳಿದ ವರ್ಗದ ಜನಾಂಗದವರು ಕುಷ್ಟಗಿ ಪಟ್ಟಣದಲ್ಲಿ ಶ್ರೀ ಬುತ್ತಿಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಮಲ್ಲಯ್ಯ, ಮಾರುತಿ ವೃತ್ತ, ಕನಕದಾಸ ವೃತ್ತ, ಪುರಸಭೆ, ಬಸವೇಶ್ವರ ಸರ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿಯ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡು ಸರಕಾರ ವಿರುದ್ಧ ಘೋಷಣೆ ಕೂಗುತ್ತಾ ತಹಶಿಲ್ದಾರರ ಮುಖಾಂತರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ಆದರೆ ಇದಕ್ಕು ಮುನ್ನ ಸುದ್ಧಿ ಗೋಷ್ಟಿ ನೆಡೆಸಿ ಕುಷ್ಟಗಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುದೆಂದು ಪ್ರತಿಕಾ ಹೇಳಿಕೆಯನ್ನು ಕೊಡಲಾಗಿತ್ತು ಆದರೆ ಸತತವಾಗಿ ಎಡಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆ ಯಾವುದೇ ಕಾರಣಕ್ಕೂ ಬಂದಗೆ ಕರೆ ನೀಡದ್ದ ಬಂದ್ ಕರೆ ಯಶಸ್ವಿಯಾಗಲಿಲ್ಲ ಎಲ್ಲಾ ಅಂಗಡಿ ಮುಗ್ಗಟ್ಟನ್ನು ಎಂದಿನಂತೆ ತೆರೆದಿದ್ದವು. ಈ ವಾಲ್ಮೀಕಿ ಸಮಾಜದ ಕುಷ್ಟಗಿ ತಾಲೂಕು ಅಧ್ಯಕ್ಷ ಬಸವರಾಜ ನಾಯಕ, ದಲಿತ ಮುಖಂಡರಾದ ಸುಖರಾಜ ತಾಳಕೇರಿ, ಶಿವಪುತ್ರಪ್ಪ ಗುಮಗೇರಿ, ಪುರಸಭೆ ಸದಸ್ಯರಾದ ವಸಂತ ಮೇಲಿನಮನಿ, ಕೃಷ್ಣಮೂರ್ತಿ ಟೆಂಗಟಿ, ಶಂಕರ ಕಲಬಾವಿ, ಶ್ರೀಮತಿ ಮಾಲತಿ ನಾಯಕ, ನಜೀರ್ ಸಾಬ ಮೂಲಿಮನಿ, ಮರಿಯಪ್ಪ ಗೋತಗಿ, ಕಲ್ಲಪ್ಪ ತಳವಾರ, ಈರಪ್ಪ ನಾಯಕ ಹಾಜಾಳ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top