ಕುಷ್ಟಗಿ ; ಸತತವಾಗಿ ವಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕುಷ್ಟಗಿಯ ಹಳೇ ಪ್ರವಾಸಿ ಮಂದಿರವು ಕೆಸರು ಗದ್ದೆಯಂತೆ ಆಗಿದ್ದು ಕುಷ್ಟಗಿ ಲೋಖೋಪಯೋಗಿ ಇಲಾಖೆ ಸ್ವಚ್ಛತೆ ಗಳಿಸಿ ಮಳೆ ನೀರನ್ನು ಒಂದು ಕಡೆ ಹೋಗುವಂತೆ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಪ್ರವಾಸಿ ಮಂದಿರಕ್ಕೆ ಶ್ರೀ ಬಸವೇಶ್ವರ ಸರ್ಕಲ್ ನಿಂದ ಮಳೆ ನೀರು ನೇರವಾಗಿ ಬಂದು ಹಳೇ ಪ್ರವಾಸಿ ಮಂದಿರಕ್ಕೆ ಸೇರುತ್ತಿದ್ದು ನೇರವಾಗಿ ಪ್ರವಾಸಿ ಮಂದಿರದೊಳಗೆ ನುಗ್ಗುತ್ತಿದೆ ನುಗ್ಗಿದ ನೀರು ಬೇರೆಗಡೆ ಹೋಗದ ಕಾರಣ ಶೇಖರಣೆಗೊಂಡ ನೀರು ಮಲಗಟ್ಟಿ ಕೆಸರುಗದ್ದೆ ಯಂತಾಗಿದೆ ಇದನ್ನು ತಡೆಗಟ್ಟಿಲು ಬೇರೆ ಕಡೆ ಕಳಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
