ಮೇಷ ರಾಶಿ :ವೃತ್ತಿ ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ವಿವಾದಗಳಿಂದ ದೂರವಿರುವುದು ಉತ್ತಮ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ. ಮತ್ತು ನಿರುದ್ಯೋಗಿಗಳು ಪಟ್ಟ ಶ್ರಮ ವ್ಯರ್ಥವಾಗುತ್ತದೆ. ಹಣಕಾಸಿನ ಫಲಿತಾಂಶಗಳು ನಿರೀಕ್ಷಿಸಿದ ರೀತಿಯಲ್ಲಿ ಇರುವುದಿಲ್ಲ.
ಅದೃಷ್ಟದ ದಿಕ್ಕು: ಪೂರ್ವ, ಅದೃಷ್ಟದ ಸಂಖ್ಯೆ:3, ಅದೃಷ್ಟದ ಬಣ್ಣ:ನೀಲಿ
ವೃಷಭ ರಾಶಿ : ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಬಾಲ್ಯದ ಗೆಳೆಯರ ಆಗಮನದಿಂದ ಸಂತಸ ಮೂಡುತ್ತದೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಸಂಬಳದ ವಿಷಯದಲ್ಲಿ ಒಳ್ಳೆಯ ಸುದ್ದಿ ದೊರೆಯುತ್ತದೆ. ಜೀವನ ಸಂಗತಿಯೊಂದಿಗೆ ದೈವಿಕ ದರ್ಶನ ಪಡೆಯುತ್ತೀರಿ.
ಅದೃಷ್ಟದ ದಿಕ್ಕು: ಈಶಾನ್ಯ, ಅದೃಷ್ಟದ ಸಂಖ್ಯೆ:1, ಅದೃಷ್ಟದ ಬಣ್ಣ:ಕೆಂಪು
ಮಿಥುನ ರಾಶಿ : ಸ್ನೇಹಿತರ ನೆರವಿನಿಂದ ಸಾಲದ ಬಾಧೆಗಳಿಂದ ಮುಕ್ತಿ ಹೊಂದುತ್ತೀರಿ. ಉದ್ಯೋಗದಲ್ಲಿ ನಿಮ್ಮ ಕಾರ್ಯವೈಖರಿಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವೃತ್ತಿ ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.
ಅದೃಷ್ಟದ ದಿಕ್ಕು:ಉತ್ತರ, ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ಹಸಿರು
ಕರ್ಕಾಟಕ ರಾಶಿ : ಕೌಟುಂಬಿಕ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ವೃತ್ತಿಪರ ವ್ಯವಹಾರಗಳು ಮತ್ತಷ್ಟು ನಿರಾಶೆಯನ್ನುಂಟುಮಾಡುತ್ತವೆ. ಕೈಗೊಂಡ ಕಾರ್ಯಕ್ರಮಗಳು ನಿಧಾನಗತಿಯಲ್ಲಿ ಸಾಗುತ್ತವೆ. ಕೆಲಸದ ವಾತಾವರಣ ಅನುಕೂಲಕರ ವಾಗಿರುವುದಿಲ್ಲ ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
ಅದೃಷ್ಟದ ದಿಕ್ಕು:ಪೂರ್ವ, ಅದೃಷ್ಟದ ಸಂಖ್ಯೆ:4, ಅದೃಷ್ಟದ ಬಣ್ಣ: ಕಂದು
ಸಿಂಹ ರಾಶಿ : ಬಂಧುಮಿತ್ರರೊಡನೆ ಭಿನ್ನಭಿಪ್ರಾಯಗಳು ಇರುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಮರುಪರಿಶೀಲನೆ ಮಾಡುವುದು ಒಳ್ಳೆಯದು. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಕುಟುಂಬ ಸದಸ್ಯರ ವರ್ತನೆ ಕಿರಿ ಕಿರಿಯನ್ನುಂಟು ಮಾಡುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುತ್ತಿರುವ ಜವಾಬ್ದಾರಿಗಳಿಂದಾಗಿ, ಸಾಕಷ್ಟು ವಿಶ್ರಾಂತಿ ದೊರೆಯುವುದಿಲ್ಲ. ದೈವಿಕ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೀರಿ.
ಅದೃಷ್ಟದ ದಿಕ್ಕು: ಈಶಾನ್ಯ, ಅದೃಷ್ಟದ ಸಂಖ್ಯೆ :3, ಅದೃಷ್ಟದ ಬಣ್ಣ :ಗುಲಾಬಿ
ಕನ್ಯಾ ರಾಶಿ : ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಯೋಜಿತ ಕಾರ್ಯಗಳನ್ನು ನಿರೀಕ್ಷಿತ ರೀತಿಯಲ್ಲಿ ಪೂರ್ಣಗೊಳಿಸುತ್ತೀರಿ .ಆಕಸ್ಮಿಕ ಆರ್ಥಿಕ ಲಾಭ ದೊರೆಯುತ್ತದೆ. ವ್ಯಾಪಾರಕ್ಕಾಗಿ ಹೊಸ ಹೂಡಿಕೆಗಳು ದೊರೆಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡ ನಿವಾರಣೆಯಾಗುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.
ಅದೃಷ್ಟದ ದಿಕ್ಕು:ಪಶ್ಚಿಮ, ಅದೃಷ್ಟದ ಸಂಖ್ಯೆ:5, ಅದೃಷ್ಟದ ಬಣ್ಣ:ನೀಲಿ
ತುಲಾ ರಾಶಿ : ಇತರರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ಮನೆಯಲ್ಲಿ ಕೆಲವರ ವರ್ತನೆಯಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ಕಣ್ಣಿನ ಕಾಯಿಲೆಗಳು ನೋವುಂಟು ಮಾಡುತ್ತವೆ. ವೃತ್ತಿ ವ್ಯವಹಾರದಲ್ಲಿ ಲಾಭ ಪಡೆಯಲು ಮತ್ತಷ್ಟು ಶ್ರಮಪಡಬೇಕಾಗುತ್ತದೆ. ಉದ್ಯೋಗ ವಿಚಾರಗಳಲ್ಲಿ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು.
ಅದೃಷ್ಟದ ದಿಕ್ಕು:ಪೂರ್ವ, ಅದೃಷ್ಟದ ಸಂಖ್ಯೆ:1, ಅದೃಷ್ಟದ ಬಣ್ಣ:ಗುಲಾಬಿ
ವೃಶ್ಚಿಕ ರಾಶಿ : ಕುಟುಂಬದ ಸದಸ್ಯರ ಸಹಕಾರದಿಂದ ಮಹತ್ವದ ಯೋಜನೆಗಳನ್ನು ಪೂರ್ಣಗೊಳಿಸುತ್ತೀರಿ. ಆದಾಯದ ಮಾರ್ಗಗಳು ತೃಪ್ತಿಕರವಾಗಿರುತ್ತವೆ. ಮನೆಯ ಹೊರಗೆ ಅನುಕೂಲಕರ ವಾತವಾರಣವಿರುತ್ತದೆ. ವೃತ್ತಿಪರ ವ್ಯವಹಾರಗಳಿಗೆ ಹೊಸ ಹೂಡಿಕೆಗಳು ದೊರೆಯುತ್ತವೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿದ್ದರೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತೀರಿ.
ಅದೃಷ್ಟದ ದಿಕ್ಕು:ಈಶಾನ್ಯ , ಅದೃಷ್ಟದ ಸಂಖ್ಯೆ:6, ಅದೃಷ್ಟದ ಬಣ್ಣ:ನೀಲಿ
ಧನು ರಾಶಿ : ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಹೋದರರೊಂದಿಗಿನ ಹಣಕಾಸಿನ ವಿವಾದಗಳು ಕಿರಿಕಿರಿಯುಂಟುಮಾಡುತ್ತವೆ. ವೃತ್ತಿಪರ ವ್ಯವಹಾರಗಳು ಖಿನ್ನತೆಯ ವಾತಾವರಣವನ್ನು ಹೊಂದಿರುತ್ತವೆ. ಆಧ್ಯಾತ್ಮಿಕ ಸೇವೆಗಳತ್ತ ಗಮನ ಹರಿಸುತ್ತೀರಿ. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಅದೃಷ್ಟದ ದಿಕ್ಕು: ನೈಋತ್ಯ, ಅದೃಷ್ಟದ ಸಂಖ್ಯೆ: 5, ಅದೃಷ್ಟದ ಬಣ್ಣ: ಕೆಂಪು
ಮಕರ ರಾಶಿ : ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ಪ್ರಮುಖ ಕಾರ್ಯಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ದಿ ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳು ಉನ್ನತ ಮಟ್ಟದಲ್ಲಿ ಸಾಗುತ್ತವೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಅಧಿಕಾರಿಗಳ ಅನುಗ್ರಹದಿಂದ ಅನುಕೂಲಕರ ಬದಲಾವಣೆಗಳನ್ನು ಮಾಡಿಕೊಳ್ಳುತ್ತೀರಿ.
ಅದೃಷ್ಟದ ದಿಕ್ಕು: ಉತ್ತರ, ಅದೃಷ್ಟದ ಸಂಖ್ಯೆ: 6, ಅದೃಷ್ಟದ ಬಣ್ಣ: ಕಿತ್ತಳೆ
ಕುಂಭ ರಾಶಿ : ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಗಳಿಗೆ ಆಹ್ವಾನ ದೊರೆಯುತ್ತದೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಭೂಮಿ ಮಾರಾಟವು ಅನುಕೂಲಕರವಾಗಿರುತ್ತದೆ ಮತ್ತು ವ್ಯಾಪಾರಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭವನ್ನು ಪಡೆಯುತ್ತೀರಿ. ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ.
ಅದೃಷ್ಟದ ದಿಕ್ಕು: ಪಶ್ಚಿಮ, ಅದೃಷ್ಟದ ಸಂಖ್ಯೆ:8, ಅದೃಷ್ಟದ ಬಣ್ಣ:ನೀಲಿ
ಮೀನ ರಾಶಿ : ಬಂಧು ಮಿತ್ರರೊಂದಿಗೆ ವಿನಾಕಾರಣ ವಾದ ವಿವಾದಗಳು ಉಂಟಾಗುತ್ತವೆ. ಪ್ರಮುಖ ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಪುನರಾಲೋಚನೆ ಮಾಡುವುದು ಉತ್ತಮ. ಉದ್ಯೋಗಿಗಳಿಗೆ ಸಹೋದ್ಯೋಗಿಗಳೊಂದಿಗೆ ವಿವಾದಗಳು ಉಂಟಾಗುತ್ತವೆ, ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.
ಅದೃಷ್ಟದ ದಿಕ್ಕು: ಪೂರ್ವ, ಅದೃಷ್ಟದ ಸಂಖ್ಯೆ: 9 , ಅದೃಷ್ಟದ ಬಣ್ಣ: ಕೆಂಪು