ನಾಡು – ನುಡಿಗಾಗಿ ಸೇವೆ ಸಲ್ಲಿಸಿದ ಗಣ್ಯರಿಗೆ “ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಸನ್ಮಾನ”

ಬೆಂಗಳೂರು : ರಾಜ್ಯೋತ್ಸವದ ಅಂಗವಾಗಿ “ಇದು ನಿಮ್ಮ ವಾಹಿನಿ ಕಲಾವೇದಿಕೆಯಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಡಿನ ಕಲೆ, ಸಂಸ್ಕೃತಿ, ನೆಲ, ಜಲ ರಕ್ಷಣೆಗಾಗಿ ಹೋರಾಡುತ್ತಿರುವ ಕನ್ನಡ ಸೇನಾನಿಗಳನ್ನು ಸನ್ಮಾನಿಸಲಾಯಿತು.

ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮನಸ್ಸುಗಳನ್ನು ಗೌರವಿಸಲಾಯಿತು. 

 

ಅಬಕಾರಿ ಇಲಾಖೆಯ ಉಪ ಆಯುಕ್ತಾರಾದ ಡಾ ಬಿ.ಆರ್. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡುನುಡಿಗಾಗಿ ಸೇವೆ ಸಲ್ಲಿಸಿದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ವೇದಿಕೆಯ ಅಧ್ಯಕ್ಷ ಕೆ.ಎಸ್. ಕಿಶೋರ್ ಕುಮಾರ್ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಸೇವೆ ಮಾಡುವುದು ತಮಗೆ ದೊರೆತ ಸೌಭಾಗ್ಯ, ಇದು ಉದಾತ್ತ ಸೇವೆ. ಕನ್ನಡದ ಕಹಳೆ ಸದಾ ಮೊಳಗುತ್ತಿರಲಿ ಎಂದರು.

ಅವಧೂತ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷರಾದ ಡಾಕ್ಟರ್ ಮಹೇಂದ್ರ ನಾಥ್ ಶರ್ಮಾ,  ರಾಜ್ ಬಹುದ್ದೂರ್, ಡಾಕ್ಟರ್ ವೈ ವಿ ಪದ್ಮ ನಾಗರಾಜ್, ವಿ ನಾಗೇಂದ್ರ ಪ್ರಸಾದ್, ಡಾ. ಆರ್ ವಿ ಪ್ರಸಾದ್, ರೂಪೇಶ್ ರಾಜಣ್ಣ, ಜಹೀರ್ ಅಹಮದ್, ಡಾ. ಬಿ ವೈ ಇಮಾನ್ಯೂಯಲ್ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top