ಗಂಗಾಮತಸ್ಥ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಅರ್ಜಿ ಸಲ್ಲಿಸಲು ನವೆಂಬರ್ 15 ಕಡೆಯ ದಿನ

ನ. 26 ರಂದು ಬಾಗಲಕೋಟೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬೆಂಗಳೂರು:  ಎಸ್.ಎಸ್.ಎಲ್.ಸಿ, ಪಿಯುಸಿ, ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್‌ ಮತ್ತಿತರೆ ಕೋರ್ಸ್‌ ಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಗಂಗಾಮತಸ್ಥ ಸಮುದಾಯದ ಪ್ರತಿಭಾವಂತರಿಗೆ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿ ವೇತನ ನೀಡಲು ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಅರ್ಜಿ ಆಹ್ವಾನಿಸಿದೆ. ನವೆಂಬರ್‌ 26 ರಂದು ಬಾಗಲಕೋಟಿಯ ನವನಗರದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಎ. ಹಾಲೇಶಪ್ಪ, ಕಾರ್ಯಾಧ್ಯಕ್ಷ ಡಾ. ಭೀಮರಾಯ ಅರಕೇರಿ ಮಾತನಾಡಿ, ಎಸ್.ಎಸ್.ಎಲ್.ಸಿಯಲ್ಲಿ ಶೇ ೯೦ ಕ್ಕೂ ಅಧಿಕ ಅಂಕ ಪಡೆದವರಿಗೆ ವಿದ್ಯಾರ್ಥಿ ವೇತನ ದೊರೆಯಲಿದೆ. ಎಂ.ಬಿ.ಬಿ.ಎಸ್, ಡೆಂಟಲ್‌, ಬಿ.ಎ.ಎಂ.ಎಸ್, ಬಿಇ, ಬಿ.ಎಸ್.ಸಿ ಅಗ್ರಿ, ಐಎಎಸ್‌, ಕೆ.ಎ.ಎಸ್‌ ತರಬೇತಿ ಪಡೆಯುತ್ತಿರುವ ಹಾಗೂ ಆರ್ಥಿಕವಾಗಿ ನೆರವಿನ ಅವಶ್ಯಕತೆ ಇರುವ ಪ್ರತಿಯೊಂದು ಜಿಲ್ಲೆಯಿಂದ ಗಂಗಾಮತ, ಕೋಲಿ, ಕಬ್ಬಲಿಗೆ, ಸುಣಗಾರ, ಅಂಬಿಗ ಕಣ್ಣೀರ, ದೆಸ್ತರು, ಮೊಗವೀರ ಮತ್ತಿತರ ಗಂಗಾಮತ ಪರ್ಯಾಯ ಉಪ ಪಂಗಡಗಳಿಗೆ ಸೇರಿದ ಒರ್ವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್‌ ೧೫ ಕಡೆಯ ದಿನವಾಗಿದೆ ಎಂದರು.

ಬಾಗಲಕೋಟೆ ನವನಗರದ ಕಲಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಮಶೆಟ್ಟಿ ಗಲ್ಲಿ, ಓ.ಟಿ.ಸಿ. ರಸ್ತೆ, ನಗರ್ತ ಪೇಟೆ, ಬೆಂಗಳೂರು-560002 ವಾರ್ಡನ್: ರೇವಣ ಸಿದ್ದಪ್ಪ ಮೊ1 6363811852

 

ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘ, ಬಾಪೂಜಿನಗರ ಮುಖ್ಯ ರಸ್ತೆ ಶಿವಮೊಗ್ಗ ವಾರ್ಡನ್: ಹನುಮೇಶ್ ಮೊ1 9844784986 ಅವರನ್ನು ಸಂಪರ್ಕಿಸಹುದಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top