ತೊನ್ನು ರೋಗಕ್ಕೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವಿದೆ : ಡಾ.ಥಾಮಸ್ ಪ್ರಸನ್ನ ರಾಜ್

ಬೆಂಗಳೂರು: ತೊನ್ನು ಸಮಸ್ಯೆಯನ್ನು ಅತ್ಯಾಧುನಿಕ ಚಿಕಿತ್ಸೆ ಮೂಲಕ ಗುಣಪಡಿಸುವ ಸೌಲಭ್ಯವಿದೆ. ಯಾರು ತೊನ್ನು ರೋಗದಿಂದ ಮಾನಸಿಕವಾಗಿ ವಿಚಲಿತರಾಗುವ ಅವಶ್ಯಕತೆ ಇಲ್ಲ ಎಂದು ಕಾರ್ಯಕ್ರಮದಲ್ಲಿ ಇ.ಎಸ್.ಐ ಮಾದರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ   ಡಾ.ಥಾಮಸ್ ಪ್ರಸನ್ನ ರಾಜ್ ಹೇಳಿದ್ದಾರೆ.

 

ರಾಜಾಜಿನಗರದ ಇ.ಎಸ್.ಐ ಆಸ್ಪತ್ರೆಯಲ್ಲಿ ಭಾರತೀಯ ಚರ್ಮ, ಕುಷ್ಠ ಮತ್ತು ಲೈಂಗಿಕ ರೋಗ  ತಜ್ಞ ವೈದ್ಯರ ಸಂಘ ಕರ್ನಾಟಕ ಘಟಕದಿಂದ ವಿಶ್ವ ತೊನ್ನು ರೋಗ ದಿನಾಚರಣೆ ಆಚರಿಸಲಾಯಿತು. ತೊನ್ನು ರೋಗಕ್ಕೆ ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ ಎಂದರು. 

ಇ.ಎಸ್.ಐ  ಆಸ್ಪತ್ರೆಯ ಆವರಣದಲ್ಲಿ ವೈದ್ಯಕೀಯ ಸಿಬ್ಬಂದಿ ತೊನ್ನು  ರೋಗ ಮಾರಕ ರೋಗವಲ್ಲ ಮಾರಣಾಂತಿಕ ಕಾಯಿಲೆ ಅಲ್ಲವೇ ಅಲ್ಲ ಇದನ್ನು ಸಹಜವಾಗಿ ಸ್ವೀಕರಿಸಿ ಎಂಬ ಜಾಗೃತಿ ಮೂಡಿಸುವ ನಾಟಕ ಪ್ರದರ್ಶಿಸಿದರು.

 

ತೊನ್ನು ರೋಗ ಜಾಗೃತಿ ಚರ್ಮ ರೋಗ ವಿಭಾಗದ ತಜ್ಞರು ಹಾಗೂ ಮುಖ್ಯಸ್ಥರಾದ ಡಾಕ್ಟರ್ ಗಿರೀಶ್ ಎಂ.ಎಸ್, ಡಾ.ಚೇತನ್, ಡಾ.ಬಿಂದುಶ್ರೀ, ಡಾ.ಭಾವನ ,ಡಾ.ಚರಣ್ ಎಸ್.ಆರ್, ಡಾ.ಸಂಹಿತ ಮತ್ತಿತರರು ಭಾಗವಹಿಸಿದ್ದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top