ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಾನುವಾರ ಯಾತ್ರರ‍್ಥಿಗಳಿದ್ದ ಬಸ್ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಎಲ್ಇಟಿ ಭಯೋತ್ಪಾದಕ ಗುಂಪಿನ ಕೈವಾಡವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಿಯಾಸಿಯಲ್ಲಿ ಬಸ್ ಮೇಲೆ ಉಗ್ರರು ೩೦-೪೦ ಸುತ್ತಿನ ಗುಂಡಿನ ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ಒಂದು ಗುಂಡು ಬಸ್ ಚಾಲಕನಿಗೆ ತಗುಲಿದ ಕಾರಣ ಚಾಲಕ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಬಿದ್ದಿತ್ತು ಪರಿಣಾಮ ೧೦ ಮಂದಿ ಮೃತಪಟ್ಟಿದ್ದಾರೆ.
ಬಸ್ನಲ್ಲಿ ೩೦-೪೦ ಮಂದಿ ಇದ್ದ ಕುರಿತು ಮಾಹಿತಿ ಲಭ್ಯವಾಗಿದೆ.ಸುಮಾರು ೧೨ ಮಂದಿ ಉಗ್ರರು ಎರಡು ಅಥವಾ ಮೂರು ಗುಂಪುಗಳಾಗಿ ಜಮ್ಮು ಮತ್ತು ಕಾಶ್ಮೀರದ ಅರಣ್ಯ ಪ್ರದೇಶದೊಳಗೆ ಚಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ,. ಹಾಗಾಗಿ ಡ್ರೋನ್ ವ್ಯವಸ್ಥೆ ಮಾಡಲಾಗಿದ್ದು, ಕಾಡಿನ ಮೇಲೆ ತೀವ್ರ ನಿಗಾವಹಿಸಲಾಗಿದೆ.
ಕಳೆದ ಐದು ರ‍್ಷಗಳಲ್ಲಿ ಪೂಂಚ್ ಹಾಗೂ ರಜೌರಿಯಲ್ಲಿ ಈ ರೀತಿಯ ಹಲವು ಗುಂಡಿನ ದಾಳಿಗಳು ನಡೆದಿವೆ. ಜೂನ್ ೨೯ರಿಂದ ಅಮರನಾಥ ಯಾತ್ರೆ ಆರಂಭವಾಗುತ್ತಿದ್ದು, ಈ ಕುರಿತು ಗೃಹ ಸಚಿವ ಅಮಿತ್ ಶಾ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಭಾರತವು ರಿಯಾಸಿ ಮೇಲೆ ನಡೆದ ಉಗ್ರರ ದಾಳಿಗೆ ಸೂಕ್ತ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಈ ಪಾಕಿಸ್ತಾನಿ ಗುಂಪನ್ನು ತಟಸ್ಥಗೊಳಿಸಲು ಜಮ್ಮು ಮತ್ತು ಕಾಶ್ಮೀರ ಪೋಲೀಸ್, ಅರೆ-ಮಿಲಿಟರಿ ಪಡೆಗಳು ಮತ್ತು ಭಾರತೀಯ ಸೇನೆಯು ಕ್ರಿಯಾಶೀಲವಾಗಿ ಕೆಲಸ ಮಾಡುತ್ತವೆ.
ಬಸ್ಸಿನ ಸುತ್ತಲಿನ ಚಿತ್ರಗಳು ಆತಂಕವನ್ನು ಸೃಷ್ಟಿಸುತ್ತದೆ. ಎಲ್ಲೆಂದರಲ್ಲಿ ಹಲವರ ಶವಗಳು ಬಿದ್ದಿರುವುದು ಕಂಡು ಬಂದಿದೆ. ಮೃತದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಅವರಲ್ಲಿ ಕೆಲವು ಮಕ್ಕಳ ಶವಗಳಿದ್ದವು. ಪೌನಿ ಮತ್ತು ರಾನ್ಸು ನಡುವಿನ ಚಂಡಿ ಮೋಡ್‌ನಲ್ಲಿರುವ ರ‍್ಗಾ ಬಳಿ ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರರ‍್ಥಿಗಳು ಉತ್ತರ ಪ್ರದೇಶ, ದೆಹಲಿ ಮತ್ತು ರಾಜಸ್ಥಾನದಿಂದ ಬಂದವರು. ಗಾಯಗೊಂಡ ಪ್ರಯಾಣಿಕರನ್ನು ಜಿಲ್ಲಾ ಆಸ್ಪತ್ರೆ ರಿಯಾಸಿ, ನಾರಾಯಣ ಆಸ್ಪತ್ರೆ, ಕತ್ರಾ ಮತ್ತು ರ‍್ಕಾರಿ ವೈದ್ಯಕೀಯ ಕಾಲೇಜು, ಜಮ್ಮುವಿಗೆ ರವಾನಿಸಲಾಗಿದೆ.