ರಾಯಚೂರು,ಜ,8 : ರಾಯಚೂರಿನಲ್ಲಿ ವಿಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರು ಕೂಡ ಸುಖಾ ಸುಮನೆ ಜನರು ಓಡಾಡುತ್ತಿರುವುದರಿಂದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಅವರು ಸ್ವತಃ ರಸ್ತೆಗೆ ಇಳಿದು ವಾಹನ ಪರಿಶೀಲನೆ ಮುoದ್ದಾಗಿದ್ದರು. ನಗರದ ಪ್ರತಿಯೊಂದು ವೃತ್ತದಲ್ಲಿ ಪೋಲಿಸ್ ಬ್ಯಾರಿಕೇಡಗಳನ್ನು ಹಾಕಿ ರಸ್ತೆ ಬಂದ್ ಮಾಡಲಾಗಿತ್ತು. ಪೋಲಿಸರು ಅನಾವಶ್ಯಕ ವಾಗಿ ತಿರುಗಾಡುತ್ತಿರುವವರನ್ನು ಹಿಡಿದು ಅವರಿಗೆ ದಂಡ ಹಾಕುತ್ತಿರುವುದು ಕಂಡು ಬಂತು.

ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಫಿಲ್ಡ್ ಗಿಳಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಬೆಕಾ ಬಿಟ್ಟಿ ಯಾಗಿ ತಿರುಗಾಡುತ್ತಿರುವ ವಾಹನವನ್ನು ಸೀಜ್ ಮಾಡಿ ಎಂದು ತಮ್ಮ ಸಿಂಬದ್ದಿಗಳಿಗೆ ಸೂಚಿಸಿದರು. ನಂತರ ಮಾಧ್ಯಮ ರವರೊಂದಿಗೆ ಮಾತನಾಡಿ, ಸರಕಾರದ ಆದೇಶದಂತೆ ತರಕಾರಿ, ದಿನಸಿ ಅಂಗಡಿಗಳಿಗೆ ಓಪನ್ ಮಾಡಲು ಪರಿಮೀಷನ್ ನೀಡಲಾಗಿದ್ದು ಜನರು ಬೇಕಾ ಬಿಟ್ಟಿ ಯಾಗಿ ತಿರುಗಾಡುತ್ತಿದ್ದಾರೆ. ಅಂತವರ ವಾಹನಗಳನ್ನು ಸೀಜ್ ಮಾಡಲಾಗಿದೆ. ನಗರದ ಸಾರ್ವಜನಿಕರು ಲಾಕ್ ಡೌನಗೆ ಸ್ಪಂದಿಸುತ್ತುದ್ದು, ಇನ್ನು ಕೇಲವರು ಆಸ್ಪತ್ರೆಗೆ ತೆರಳುವವರು ಚೀಟಿಗಳನ್ನು ತೋರಿಸಿ ಹೋಗಲು ಅನುಮತಿ ನೀಡಲಾಗಿದೆ. ಆಂದ್ರ ಮತ್ತು ತೆಲಂಗಾಣದಿಂದ ಜನರು ನಗರಕ್ಕೆ ಯಾವುದೇ ಮಾಸ್ಕ ಇಲ್ಲದೇ ನಗರಕ್ಕೆ ಆಗಮಿಸುತ್ತಿದ್ದು, ಜಿಲ್ಲೆಯ್ಯಾದಂತ ೨೦ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುತ್ತದೆ ಎಂದರು.