ಎಲ್. ಹೆಚ್ ನಲ್ಲಿ ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ – ಯು.ಟಿ. ಖಾದರ್ ಉದ್ಘಾಟಿಸಿದರು
ರಾಜ್ಯವನ್ನು ಪ್ರತಿನಿಧಿಸುವ ಶಾಸಕ ಮಾಜಿ ಶಾಸಕರಿಗೆ,ಸುತ್ತಮುತ್ತಲಿನ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ,ಸಿಬ್ಬಂದಿಗಳಿಗೆ, ಪತ್ರಕರ್ತರುಗಳಿಗೆ ಮತ್ತು ಸಾರ್ವಜನಿಕರಿಗೆ ಕೆಮಿಕಲ್ ರಹಿತವಾದ ಮಸಾಲೆಗಳನ್ನು ಉಪಯೋಗಿಸಿ ಸಿದ್ಧಪಡಿಸಲಾಗುವ ಗುಣಮಟ್ಟದ ಮಾಂಸಹಾರಿ ಊಟ,ತಿಂಡಿಗಳನ್ನು ಒದಗಿಸಬೇಕೆಂಬ ಏಕೈಕ ಉದ್ದೇಶದಿಂದ ಶಾಸಕರ ಭವನದ ಶಾಸಕರ ಭವನದ ಕಟ್ಟಡ-2ರ ನೆಲಮಾಳಿಗೆಯಲ್ಲಿಂದು ನಮ್ಮೂರ ದೊನ್ನೆ ಬಿರಿಯಾನಿ ಹೆಸರಿನಲ್ಲಿ ಹೊಟೇಲ್ ಶಾಖೆಯನ್ನು ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಿದರು.