media

ಶಾಲೆ – ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ

ಬೆಂಗಳೂರು,5 : ಕೇಂದ್ರ ಸರಕಾರದ ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು. ನಗರದಲ್ಲಿ ಇಂದು ತಮ್ಮನ್ನು ಭೇಟಿಯಾದ ಮಾಧ್ಯಮಗಳ ಜತೆ ಮಾತನಾಡಿದ ಅವರು; ” ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಕೇಂದ್ರ ಸರಕಾರ ಭೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೆ ತಂದಿದೆ. ಆದರೆ ಈಗ ರಾಜ್ಯ ಸರಕಾರವು ಅನಗತ್ಯವಾಗಿ ಹಿಜಾಬ್ ವಿಷಯವನ್ನು ವಿವಾದ ಮಾಡುವ ಮೂಲಕ ಭೇಟಿ ಹಠಾವೋ ಮಾಡಲು ಹೊರಟಿದೆ …

ಶಾಲೆ – ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ Read More »

ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು

ಬೆಂಗಳೂರು, ಜನವರಿ 22- ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದಾರೂ ತೀವ್ರತೆ ಕಡಿಮೆಯಿದೆ. ಅದಕ್ಕೆ ಅಗತ್ಯವಿರುವ ಔಷಧೋಪಚಾರಗಳ ಲಭ್ಯವಿದ್ದು, ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳು ಸಂದರ್ಭವನ್ನು ನಿಭಾಯಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಹಾಗೂ ಸಾಮಾನ್ಯ ಜನರಿಗೆ, ದುಡಿಯುವ ಜನರಿಗೆ ತೊಂದರೆ ಆಗುತ್ತಿರುವುದನ್ನು ಪರಿಗಣಿಸಲಾಗಿದೆ. ನಮ್ಮ ಆರೋಗ್ಯ ನಿರ್ವಹಣೆಯನ್ನು ಇನ್ನಷ್ಟು ಸಧೃಢಗೊಳಿಸಿ ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು ಎನ್ನುವ ತೀರ್ಮಾನ ಕೈಗೊಂಡಿದೆ ಎಂದರು. ಮಾಜಿ ಪ್ರಧಾನಿ ದೇವೇಗೌಡರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ …

ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು Read More »

ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನ

ಬೆಂಗಳೂರು, ಜನವರಿ 22: ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಸಮಸ್ಯೆಗಳು ಹಾಗೂ ನ್ಯಾಯಾಲಯದ ವಿಚಾರಗಳಿಗೆ ಸಂಬಂಧಿಸಿದ ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದು, ರಾಜ್ಯ ಸ್ಪಷ್ಟ ನಿಲುವು ತಳೆಯಲು ಸಭೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ದೆಹಲಿಯಿಂದ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ನ್ಯಾಯವಾದಿಗಳು, ಎ. ಜಿ ಹಾಗೂ ನೀರಾವರಿ ತಾಂತ್ರಿಕ ತಜ್ಞರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ನೀರಾವರಿ ವಿಚಾರದಲ್ಲಿ ಮಧ್ಯಸ್ಥರದ ರಾಜ್ಯವಾಗಿದೆ. ನಮ್ಮ ಮೇಲೆ …

ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನ Read More »

ಕಾಯಕ ರೂಪದಲ್ಲಿ ತ್ರಿವಿಧ ದಾಸೋಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜನವರಿ 21 : ಅನ್ನ, ಆಶ್ರಯ ಹಾಗೂ ಅಕ್ಷರವೆಂಬ ತ್ರಿವಿಧ ದಾಸೋಹವನ್ನು ಸರ್ಕಾರ ಕಾಯಕ ರೂಪದಲ್ಲಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತುಮಕೂರಿನ ಸಿದ್ದಗಂಗಾಮಠದಲ್ಲಿ ‘ ದಾಸೋಹ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ದಗಂಗಾ ಮಠ ದಾಸೋಹದ ಬಹಳ ದೊಡ್ಡ ಪರಂಪರೆಯನ್ನೇ ಕರ್ನಾಟಕದಲ್ಲಿ ಹುಟ್ಟುಹಾಕಿದೆ. ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನವನ್ನು ಅಕ್ಷರಶಃ ಪಾಲಿಸಿದವರು ಶ್ರೀ ಶಿವಕುಮಾರಸ್ವಾಮಿಗಳು. ದಾಸೋಹ ದಿನವನ್ನು ಸಿದ್ದಗಂಗಾ ಮಠದಲ್ಲಿ ಆಚರಣೆ ಮಾಡಬೇಕೆಂದು ಸರ್ಕಾರ ತೀರ್ಮಾನಿಸಿದೆ. …

ಕಾಯಕ ರೂಪದಲ್ಲಿ ತ್ರಿವಿಧ ದಾಸೋಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read More »

ಮರಣ ಶಾಸನ ಆದೇಶವನ್ನು ಹಿಂಪಡೆದು, ಆನ್ ಲೈನ್ ಅರ್ಜಿಯನ್ನು ರದ್ದು ಪಡಿಸಿ

ಹೊಸಪೇಟೆ,ಜನವರಿ,18 : ಸರ್ಕಾರವು ಅತಿಥಿ ಉಪನ್ಯಾಸಕರನ್ನು ನವ ಗುಲಾಮರಾನ್ನಾಗಿ ಮಾಡಿ ಮಕರ ಸಂಕ್ರಾಂತಿಗೆ ಸಿಹಿ ಸುದ್ದಿಯನ್ನು ನೀಡಲಾಗುತ್ತದೆ ಎಂದು ಉಪನ್ಯಾಸಕರಿಗೆ ಮರಣ ಶಾಸನ ಆದೇಶವನ್ನು ಹೊರಡಿಸಿದೆ ಎಂದು ವಿಜಯನಗರ ಜಿಲ್ಲೆಯ ಅತಿಥಿ ಉಪನ್ಯಾಸಕರ ಗೌರವ ಅಧ್ಯಕ್ಷ ಎರಿಸ್ವಾಮಿ ಅವರು ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಆಯೋಜಿಸಿದ ಅತಿಥಿ ಉಪನ್ಯಾಸಕರ ಮರಣ ಶಾಸನದ ಆದೇಶವನ್ನು ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಅಭಿಪ್ರಾಯವನ್ನು ಹಂಚಿಕೊಂಡರು. ಉನ್ನತ ಶಿಕ್ಷಣ ಸಚಿವರು ಜನವರಿ 14 ನೇ …

ಮರಣ ಶಾಸನ ಆದೇಶವನ್ನು ಹಿಂಪಡೆದು, ಆನ್ ಲೈನ್ ಅರ್ಜಿಯನ್ನು ರದ್ದು ಪಡಿಸಿ Read More »

ಕಾಯ್ದೆ ಉಲ್ಲಂಘನೆ – ಮೊಕದ್ದಮೆ ದಾಖಲು

ಬೆಂಗಳೂರು, ಜನವರಿ 12 : ಕೊವಿಡ್ ಸೋಂಕಿನ ನಡುವೆಯೂ ಪಾದಯಾತ್ರೆ ಯನ್ನು ಕೈಗೊಳ್ಳುವುದರ ಮೂಲಕ, ಕಾಂಗ್ರೆಸ್ ನಾಯಕರು, ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಗಾರರೊಂದಿಗೆ ಇಂದು ಮಾತನಾಡಿದ ಸಚಿವರು, ಕರೋನಾ ನಿಯಂತ್ರಣ ಕಾಯಿದೆಯನ್ನು ಉಲ್ಲಂಘಸಿದವರ ವಿರುಧ್ದ, ರಾಮನಗರ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ, ಕಾಂಗ್ರೆಸ್ ನಾಯಕರ ಉದ್ದೇಶ ನೀರಿನ ಮೇಲೆ ರಾಜಕೀಯ ಮಾಡುವುದು, ಆದರೆ ನಮ್ಮ ಆತಂಕ ಇರುವುದು ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳುವುದಾಗಿದೆ, ಎಂದರು. …

ಕಾಯ್ದೆ ಉಲ್ಲಂಘನೆ – ಮೊಕದ್ದಮೆ ದಾಖಲು Read More »

ಕರ್ಫ್ಯೂ ಜಾರಿಯಲ್ಲಿದ್ದರು ಓಡಾಡುತ್ತಿರುವ ಜನ

ರಾಯಚೂರು,ಜ,8 : ರಾಯಚೂರಿನಲ್ಲಿ ವಿಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರು ಕೂಡ ಸುಖಾ ಸುಮನೆ ಜನರು ಓಡಾಡುತ್ತಿರುವುದರಿಂದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಅವರು ಸ್ವತಃ ರಸ್ತೆಗೆ ಇಳಿದು ವಾಹನ ಪರಿಶೀಲನೆ ಮುoದ್ದಾಗಿದ್ದರು. ನಗರದ ಪ್ರತಿಯೊಂದು ವೃತ್ತದಲ್ಲಿ ಪೋಲಿಸ್ ಬ್ಯಾರಿಕೇಡಗಳನ್ನು ಹಾಕಿ ರಸ್ತೆ ಬಂದ್ ಮಾಡಲಾಗಿತ್ತು. ಪೋಲಿಸರು ಅನಾವಶ್ಯಕ ವಾಗಿ ತಿರುಗಾಡುತ್ತಿರುವವರನ್ನು ಹಿಡಿದು ಅವರಿಗೆ ದಂಡ ಹಾಕುತ್ತಿರುವುದು ಕಂಡು ಬಂತು. ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಫಿಲ್ಡ್ ಗಿಳಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಬೆಕಾ ಬಿಟ್ಟಿ ಯಾಗಿ ತಿರುಗಾಡುತ್ತಿರುವ ವಾಹನವನ್ನು …

ಕರ್ಫ್ಯೂ ಜಾರಿಯಲ್ಲಿದ್ದರು ಓಡಾಡುತ್ತಿರುವ ಜನ Read More »

ಪ್ರತಿಭೆಯ ವಿಕಾಸಕ್ಕೆ ಆಧುನಿಕ ಮಾಧ್ಯಮಗಳು ಪೂರಕವಾಗಬೇಕು

ಬೆಂಗಳೂರು ,ಜನವರಿ 7 : ಜಾಗತೀಕರಣದ ಈ ಸಂದರ್ಭದಲ್ಲಿ ನಮಗೆ ಲಭ್ಯವಿರುವ ಇಂದಿನ ಆಧುನಿಕ ಮಾಧ್ಯಮ ಗಳನ್ನು ಯುವ ಲೇಖಕರು ತಮ್ಮ ಪ್ರತಿಭೆಯ ವಿಕಾಸಕ್ಕೆ ಬಳಸಿಕೊಳ್ಳಬೇಕು ಎಂದು ಕನ್ನಡದ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಹೇಳಿದ್ದಾರೆ. ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ 55 ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮತ್ತು ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಹಿಂದೆ ಇಂತಹ ಅನುಕೂಲಗಳು ಇರಲಿಲ್ಲ …

ಪ್ರತಿಭೆಯ ವಿಕಾಸಕ್ಕೆ ಆಧುನಿಕ ಮಾಧ್ಯಮಗಳು ಪೂರಕವಾಗಬೇಕು Read More »

ತಮ್ಮ ನಿವಾಸಿದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ

ಬೆಂಗಳೂರು, ಡಿ,27 : ಬಲವಂತದ, ಆಸೆ ಆಮಿಷ ಒಡ್ಡಿ ಮೋಸದಿಂದ ಮತಾಂತರ ಮಾಡುವುದಕ್ಕೆ ನಮ್ಮ ಪಕ್ಷದ ವಿರೋಧವೂ ಇದೆ. ಸೆಕ್ಷನ್ 295 ರಡಿ ಕಾನೂನು ಕ್ರಮ ಜರುಗಿಸಲು ಸಂವಿಧಾನದಲ್ಲಿ ಅವಕಾಶವಿದೆ. ಮದುವೆಯ ಕಾರಣಕ್ಕೆ ಮತಾಂತರವಾದರೆ ಹತ್ತು ವರ್ಷಗಳ ವರೆಗೆ ಶಿಕ್ಷೆ ಕೊಡಬಹುದು ಎಂಬ ನಿಯಮ ಮತಾಂತರ ನಿಷೇಧ ಕಾಯ್ದೆಯಲ್ಲಿ ಇದೆ. ಒಬ್ಬ ಪುರುಷ ಅಥವಾ ಮಹಿಳೆ ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗೋದು ಮತಾಂತರವಾಗುತ್ತಾ? ಇದನ್ನು ನಿರ್ಬಂಧಿಸೋದು ಸಂವಿಧಾನ ಬಾಹಿರವಾಗುತ್ತದೆ. ಮತ ಕ್ರೋಢೀಕರಣವೇ ಮತಾಂತರ ನಿಷೇಧ ಕಾನೂನಿನ ಉದ್ದೇಶ. …

ತಮ್ಮ ನಿವಾಸಿದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ Read More »

ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ನೀಡಿದ ಮಾಧ್ಯಮ ಪ್ರತಿಕ್ರಿಯೆ

ಬೆಳಗಾವಿಯ :ನಾವು ಮೊದಲಿನಿಂದಲೂ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಈ ಮಸೂದೆ ಮಂಡನೆಯನ್ನು ನಾವು ಆಕ್ಷೇಪಿಸುತ್ತೇವೆ. ಈ ಮಸೂದೆ ಸಂವಿಧಾನ ವಿರುದ್ಧವಾಗಿದ್ದು, ನಾವು ಅದನ್ನು ವಿರೋಧಿಸಲೇಬೇಕಿದೆ. ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸಲು, ರಾಜಕೀಯ ಉದ್ದೇಶಕ್ಕಾಗಿ ವಿಷಯಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ. ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಎಂಬ ಕಾನೂನು ಈಗಾಗಲೇ ಇದ್ದರೂ ಧಾರ್ಮಿಕ ಸ್ವಾತಂತ್ರ್ಯ, ಬದುಕಿನ ಹಾಗೂ ವಿಚಾರದ ಹಕ್ಕನ್ನು ಯಾರು ಕಸಿಯಲು ಆಗುವುದಿಲ್ಲ. ಇದು ಎಲ್ಲ ಧರ್ಮಕ್ಕೂ ಸೇರಿದ ವಿಚಾರ. ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ …

ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ನೀಡಿದ ಮಾಧ್ಯಮ ಪ್ರತಿಕ್ರಿಯೆ Read More »

Translate »
Scroll to Top