kannadandu

ದೇವರಾಜೇಗೌಡ ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು ಎಂದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ತಿದ್ದಂತೆ, ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಶದಲ್ಲಿರುವ ಬಿಜೆಪಿ ಮುಂಖಡ, ವಕೀಲ ದೇವರಾಜೇಗೌಡ (ಆevಚಿಡಿಚಿರಿegoತಿಜಚಿ) ನಿನ್ನೆ ಇದೆರೆಲ್ಲದರ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (ಆಏ Shivಚಿಞumಚಿಡಿ), ದೇವರಾಜೇಗೌಡ ಏನು ಬೇಕಾದರೂ ಮಾತನಾಡಿಕೊಳ್ಳಲಿ. ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮಠ, ಮಂದಿರಗಳಿಗೆ ರಕ್ಷಾ ರಾಮಯ್ಯ ಭೇಟಿ

ನೆಲಮಂಗಲ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಂದು ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಮಠ ಮಂದಿಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ವೈಭವದ ಕನಕಗಿರಿ ಉತ್ಸವ: ಮೆರವಣಿಗೆಯಲ್ಲಿ ಮೈನವಿರೇಳಿಸಿದ ಕಲಾತಂಡದ ಪ್ರದರ್ಶನ

ಕನಕಗಿರಿ : ರಾಜಬೀದಿಯಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ಸಾರೋಟು, ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಯನ್ನು ಹೊತ್ತುತಂದ ಗಜರಾಜನ ರಾಜಗಾಂಭೀರ್ಯ, ಕಳಸ ಹೊತ್ತ ಮಹಿಳೆಯರು, ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಇತಿಹಾಸ ಸಾರುವ ಸಾರೋಟ, ಪಲ್ಲಕ್ಕಿ, ಉಡಚ್ಚಪ್ಪನಾಯಕ ವೇಷಧಾರಿಗಳು. ಮತ್ತೊಂದೆಡೆ ಕಿವಿಗಡಚಿಕ್ಕುವ ತಮಟೆಯ ಸದ್ದು, ಮತ್ತೊಂದೆಡೆ ವಾಲಗ, ನೆರೆದಿದ್ದ ಜನಸ್ತೋಮದಿಂದ ಜೈಕಾರದ ಘೋಷಣೆ, ಮೈನವಿರೇಳಿಸಿದ ಜಾನಪದ ಕಲಾ ತಂಡಗಳ ಮನಮೋಹಕ ಪ್ರದರ್ಶನ…!

ಬಳ್ಳಾರಿಯ ಇಬ್ಬರಿಗೆ ಒಲಿದ ನಿಗಮ ಹಾಗೂ ಪ್ರಾಧಿಕಾರದ ಅಧ್ಯಕ್ಷ ಸ್ಥಾನ

ಬಳ್ಳಾರಿ / ಬೆಂಗಳೂರು : ಸಿಎಂ ಸಿದ್ದರಾಮಯ್ಯನವರು ವಿವಿಧ ನಿಗಮಗಳು, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಅನುಮೋದನೆ ನೀಡಲಾಗಿದೆ. ಈ ಸಂಬಂಧ ನೇಮಕ ಮಾಡಲಾದ ಪಟ್ಟಿಯನ್ನು ಆಡಳಿತ ಇಲಾಖೆಗಳ ಮೂಲಕ ಅಧ್ಯಕ್ಷರಿಗೆ ಆದೇಶ ಹೊರಡಿಸಬೇಕು ಎಂದು ಸರ್ಕಾರದ ಕಾರ್ಯದರ್ಶಿ ತಿಳಿಸಿರುತ್ತಾರೆ.

ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ

ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ಇಂದು, ದೇಶದಲ್ಲಿ ಬಂಡಾಯ, ಭಯೋತ್ಪಾದನೆ ಮತ್ತು ನಕ್ಸಲಿಸಂ ಕೊನೆಯ ಉಸಿರನ್ನು ಎಣಿಸುತ್ತಿದೆ. ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣ ಮುಕ್ತವಾಗಲಿದೆ” ಎಂದರು.

ಮನುಷ್ಯನ ಬಾಹ್ಯ ಸೌಂದರ್ಯ ವೃದ್ಧಿಗೆ  ಸವಿತಾ ಸಮಾಜದ ಕೊಡುಗೆ ಮಹತ್ವದ್ದು – ಎಂ.ಎಸ್. ರಕ್ಷಾ ರಾಮಯ್ಯ

ಗೌರಿ ಬಿದನೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸವಿತಾ ಸಮಾಜದ ಶಕ್ತಿ ಮತ್ತು ಕುಲದೈವವಾದ ಭಗವಾನ್ “ಸವಿತಾ ಮಹರ್ಷಿ’ಯ ದೇವಸ್ಥಾನಕ್ಕೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಶಿಲಾನ್ಯಾಸ ನೆರವೇರಿಸಿದರು.

ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಯಾರೇ ಹೋದರೂ ಪಕ್ಷಕ್ಕೆ ನಷ್ಟವಾಗದು: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : “ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ನೂರಾರು ನಾಯಕರು ಬರುತ್ತಾರೆ, ಹೋಗುತ್ತಾರೆ. ಯಾರೇ ಬರಲಿ, ಯಾರೇ ಹೋಗಲಿ ಪಕ್ಷಕ್ಕೆ ಅದರಿಂದ ನಷ್ಟವಾಗುವುದಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸಂಭ್ರಮದಿಂದ ಜರುಗಿದ  ಶ್ರೀರಾಮನ ಪಲ್ಲಕ್ಕಿ ಉತ್ಸವ

ಕಾರಟಗಿ : ದೇಶದಾದ್ಯಂತ ಸಂಭ್ರಮದ ಮಾತಾಗಿರುವ ಅಯೋಧ್ಯಯಲ್ಲಿ ಜರುಗಲಿರುವ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಿಮಿತ್ಯ ಸೋಮವಾರ ಕಾರಟಗಿ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕ್ಯಾಂಪುಗಳಲ್ಲಿ ಶ್ರೀರಾಮನ ದೇವಸ್ಥಾನಗಳಲ್ಲಿ ಹಾಗೂ ಆಂಜನೇಯ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಅಗ್ನಿಹೋತ್ರ ಹೋಮ ಹಾಗೂ ಶ್ರೀರಾಮನಿಗೆ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳಿಂದ ಸಂಭ್ರಮ ಸಡಗರದಿಂದ ಜರುಗಿದವವು

ಸಂವಿಧಾನವೇ ನಮ್ಮ ಧರ್ಮ. ರಾಜಕೀಯ ಧರ್ಮ ಅನುಸರಿಸುವುದೇ ಸಂವಿಧಾನಕ್ಕೆ ಕೊಡುವ ಗೌರವ: ಸಿ.ಎಂ.ಸಿದ್ದರಾಮಯ್ಯ ಅಭಿಮತ

ಬೆಂಗಳೂರು : ಸಂವಿಧಾನವೇ ನಮ್ಮ ಧರ್ಮ. ರಾಜಕೀಯ ಧರ್ಮ ಅನುಸರಿಸುವುದೇ ಸಂವಿಧಾನಕ್ಕೆ ಕೊಡುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ಪಟ್ಟರು.

ಐದು ರಾಜ್ಯಗಳ ಚುನಾವಣೆ: ನಾಲ್ಕರಲ್ಲಿ ಗೆಲ್ಲುವ ವಿಶ್ವಾಸವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ಪಂಚ ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣ, ಛತ್ತಿಸ್ಗಡ, ಮಧ್ಯಪ್ರದೇಶ ಹಾಗೂ ರಾಜಾಸ್ಥಾನದಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

Translate »
Scroll to Top