ಕಾರಟಗಿ : ದೇಶದಾದ್ಯಂತ ಸಂಭ್ರಮದ ಮಾತಾಗಿರುವ ಅಯೋಧ್ಯಯಲ್ಲಿ ಜರುಗಲಿರುವ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಿಮಿತ್ಯ ಸೋಮವಾರ ಕಾರಟಗಿ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕ್ಯಾಂಪುಗಳಲ್ಲಿ ಶ್ರೀರಾಮನ ದೇವಸ್ಥಾನಗಳಲ್ಲಿ ಹಾಗೂ ಆಂಜನೇಯ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಅಗ್ನಿಹೋತ್ರ ಹೋಮ ಹಾಗೂ ಶ್ರೀರಾಮನಿಗೆ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳಿಂದ ಸಂಭ್ರಮ ಸಡಗರದಿಂದ ಜರುಗಿದವವು
ತಾಲೂಕಿನಾದ್ಯಂತ ಜೈ ಶ್ರೀರಾಮ್… ಜೈ ಶ್ರೀರಾಮ್… ಎಂಬ ಪ್ರಭು ಶ್ರೀರಾಮನ ನಾಮಸ್ಮರಣೆ ಮೊಳಗಿತ್ತು. ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿದ್ದರಿಂದ ಪ್ರತಿಯೊಬ್ಬರೂ ಜಾತಿಭೇದಗಳನ್ನು ಮರೆತು ಸೌಹಾರ್ದಿತವಾಗಿ ಪ್ರತಿಯೊಬ್ಬರೂ ರಾಮನ ಸ್ಮರಣೆಯಲ್ಲಿ ತಲ್ಲಿನ ರಾಗಿದ್ದರು.
ಇನ್ನು ಅಯ್ಯೋದ್ಯೆಯಲ್ಲಿ ನಡೆದ ಶ್ರೀರಾಮಲಲ್ಲನ ಪ್ರಾಣ ಪ್ರತಿಷ್ಠಾಪನಾ ಉದ್ಘಾಟನಾ ಕಾರ್ಯಕ್ರಮವನ್ನು ತಾಲೂಕಿನ ಶ್ರೀ ವಾಸವಿ ದೇವಸ್ಥಾನದಲ್ಲಿ ಎಲ್ ಇ ಡಿ ಪರದೆಯ ಮೇಲೆ ನೇರಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಿದ್ದರು . ಭಕ್ತರು ಇಲ್ಲಿಂದಲೇ ಪ್ರಭು ಶ್ರೀರಾಮನ ಕಾರ್ಯಕ್ರಮ ವೀಕ್ಷಣೆ ಮಾಡಿದರು.ಈ ಕಾರ್ಯಕ್ರಮ ಮುಂಚೆ ಬೆಳಿಗ್ಗೆಯಿಂದಲೇ ವಾಸವಿ ದೇವಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ಸಲ್ಲಿಸಿದ ನೂರಾರು ಮಹಿಳೆಯರು ದೀಪ ಬೆಳಗಿಸುವ ಮೂಲಕ ಶ್ರೀರಾಮನ ನಾಮಸ್ಮರಣೆ ಮಾಡಿದರು. ಇನ್ನು ಹೋಮ -ಹವನ ಭಜನೆ ಸೇರಿದಂತೆ ಮತ್ತು ಶ್ರೀರಾಮನ ಪಲ್ಲಕ್ಕಿ ಉತ್ಸವವನ್ನು ದೇವಸ್ಥಾನ ಸಮಿತಿಯ ಮುಖಂಡರು ಹಿ ರಿಯರು ಮತ್ತು ಭಕ್ತಾದಿಗಳು ಶ್ರೀ ರಾಮನ ನಾಮಸ್ಮರಣೆ ಯೊಂದಿಗೆ ಉತ್ಸವ ನಡೆಸಿದರು . ಇನ್ನು ರಾತ್ರಿ ವೇಳೆ ಶ್ರೀ ರಾಮನ ಭಾವಚಿತ್ರಕ್ಕೆ ಸಾವಿರಾರು ದೀಪಗಳನ್ನು ಹಚ್ಚುವ ಮೂಲಕ ದೀಪಾಲಂಕಾರ ಮಾಡಿದರು.
ಇನ್ನು ಭಕ್ತಾಧಿಗಳಿಗೆ ಪಾನಕದ ಜತೆಗೆ ಮಂತ್ರಾಕ್ಷತೆ ಮತ್ತು ತೀರ್ಥ ವಿತರಿಸಿದರು ನಂತರ ನೂರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಯನ್ನು ಏರ್ಪಡಿಸಲಾಗಿತ್ತು.