ಮುಂಡರಗಿ ನಾಗರಾಜ್ ಗೆ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಜೆ.ಎಸ್.ಆಂಜನೇಯುಲು ಅವರಿಗೆ ಬುಡಾ ಅಧ್ಯಕ್ಷ ಸ್ಥಾನ
ಬಳ್ಳಾರಿ / ಬೆಂಗಳೂರು : ಸಿಎಂ ಸಿದ್ದರಾಮಯ್ಯನವರು ವಿವಿಧ ನಿಗಮಗಳು, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಅನುಮೋದನೆ ನೀಡಲಾಗಿದೆ. ಈ ಸಂಬಂಧ ನೇಮಕ ಮಾಡಲಾದ ಪಟ್ಟಿಯನ್ನು ಆಡಳಿತ ಇಲಾಖೆಗಳ ಮೂಲಕ ಅಧ್ಯಕ್ಷರಿಗೆ ಆದೇಶ ಹೊರಡಿಸಬೇಕು ಎಂದು ಸರ್ಕಾರದ ಕಾರ್ಯದರ್ಶಿ ತಿಳಿಸಿರುತ್ತಾರೆ.
ಈ ಪಟ್ಟಿಯಲ್ಲಿ 44 ಮಂದಿಯನ್ನು ಏಯ್ಕೆ ಮಾಡಲಾಗಿದ್ದು, ಹಲವರಿಗೆ ನಿಗಮಗಳಿಗೆ ಅಧ್ಯಕ್ಷ ಸ್ಥಾನ ದೊರೆತರೆ, ಇನ್ನೂ ಕೆಲವರಿಗೆ ಅಭಿವೃದ್ಧಿ ಪ್ರಾಧಿಕಾರಗಳಿಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಇನ್ನೂ ಕೆಲವರಿಗೆ ಮಂಡಳಿಗಳ ಅಧ್ಯಕ್ಷ ಸ್ಥಾನ ದೊರೆತಿದ್ದು, ಈಗ ನೇಮಕಗೊಂಡ 44 ಮಂದಿ ನೇಮಕಗೊಂಡ ದಿನಾಂಕದಿಂದ ಮುಂದಿನ 2 ವರ್ಷಗಳ ವರೆಗೆ ಕಾರ್ಯನಿರ್ವಹಿಸುವಂತೆ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕಾತಿ ಆದೇಶಗಳನ್ನು ಹೊರಡಿಸಲು ಸೂಚನೆ ನೀಡಲಾಗಿದೆ.
ಇದರಲ್ಲಿ ಬಳ್ಳಾರಿಯಿಂದ ಬುಡಾ ಅಧ್ಯಕ್ಷರಾಗಿ ಜೆ,ಎಸ್,ಆಂಜನೇಯುಲು ಅವರನ್ನು ನೇಮಕ ಮಾಡಿದರೆ, ಮುಂಡರಗಿ ನಾಗರಾಜ್ ಅವರಿಗೆ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಈ ಹಿಂದೆ ಬಳ್ಳಾರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಶತಾಯಗತಾಯ ಪ್ರಯತ್ನ ಮಾಡಿದ್ದ ಜೆ.ಎಸ್.ಆಂಜನೇಯುಲು ಅವರು ಹೈಕಮಾಂಡ್ ಒತ್ತಡಕ್ಕೆ ಮಣಿದು, ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದ್ದರು. ಅಂತೆಯೇ ಈಗ ಬುಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಹಿಂದೆಯೂ ಕೂಡ ಬುಡಾ ಅಧ್ಯಕ್ಷರಾಗಿ ಜೆ.ಎಸ್.ಆಂಜನೇಯುಲು ಅವರು ಸೇವೆ ಸಲ್ಲಿಸಿದ್ದರು.
ಇನ್ನೂ ಮುಂಡರಗಿ ನಾಗರಾಜ್ ಅವರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದ ಆಸೆ, ಆಕಾಂಕ್ಷೆಯನ್ನು ಹೊಂದಿದ್ದರು. ಅವರಿಗೆ ಸರ್ಕಾರದಿಂದ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜವಾಬ್ದಾರಿಯನ್ನು ವಹಿಸಲಾಗಿದೆ.
ಅದರಂತೆಯೇ ಕರ್ನಾಟಕ ಚಲನ ಚಿತ್ರ ಮಂಡಳಿಗೆ ಅಧ್ಯಕ್ಷರನ್ನಾಗಿ ಸಾಧು ಕೋಕಿಲ ಅವರನ್ನು ನೇಮಕ ಮಾಡಲಾಗಿದೆ.ಇನ್ನುಳಿದಂತೆ ಯಾರ್ಯಾರಿಗೆ ಯಾವ್ಯಾವ ನಿಗಮ, ಮಂಡಳಿ ಹಾಗೂ ಪ್ರಾಧಿಕಾರ ಅಧ್ಯಕ್ಷ ಸ್ಥಾನ ದೊರೆತಿದೆ ಎಂಬ ಪಟ್ಟಿ ಈ ಕೆಳಗೆ ನೀಡಲಾಗಿದೆ.