Daily updates

ತಜ್ಞ ಮಾರ್ಗದರ್ಶನದ ಮೂಲಕ ಭವಿಷ್ಯದ ಚಾಂಪಿಯನ್‌ಗಳನ್ನು ಬೆಳೆಸುವ ಗುರಿ

ಬೆಂಗಳೂರು: ಡ್ಯುರೊಫ್ಲೆಕ್ಸ್, ಜೆಎಸ್ ಡಬ್ಲ್ಯು ಗ್ರೂಪ್ ಉಪಕ್ರಮವಾದ ಇನ್ಸ್ಪೈರ್ ಇನ್ ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ನೊಂದಿಗೆ ತಮ್ಮ ಪಾಲುದಾರಿಕೆಯನ್ನು ಘೋಷಿಸಿದೆ.

ಪಾನ್ – ಆಧಾರ್ ಲಿಂಕ್ ಮಾಡಲು ಕೇವಲ 4 ದಿನವಷ್ಟೇ ಬಾಕಿ..!

ಬೆಂಗಳೂರು: ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಜೂ.30ರ ಗಡುವು ನಿಗದಿಯಾಗಿದ್ದು, ಜೋಡಣೆಗೆ 5 ದಿನಗಳಷ್ಟೇ ಉಳಿದಿವೆ. ಆದರೆ, ಅನೇಕರಿಗೆ ನಾನಾ ತಾಂತ್ರಿಕ ಕಾರಣಗಳಿಂದ ಲಿಂಕ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಗಡುವು ವಿಸ್ತರಣೆಗೆ ಒತ್ತಾಯಗಳು ಕೇಳಿ ಬಂದಿವೆ. ಮತ್ತೆ ಅವಧಿ ವಿಸ್ತರಣೆಯ ಸಾಧ್ಯತೆಗಳು ಇಲ್ಲ ಎಂದು ಮೂಲಗಳು ತಿಳಿಸಿವೆ.

ಮಾದಕ ವಸ್ತು ಮಾರಾಟ ಮಾಡುವವರ ಮೇಲೆ ನಿರ್ಧಾಕ್ಷಣ್ಯ ಕ್ರಮ: ಬಿ.ನಾಗೇಂದ್ರ

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ವಿಶ್ವ ಮಾದಕವಸ್ತು ವಿರೋಧಿ ದಿನ ದ ಅಂಗವಾಗಿ ಬೃಹತ್ ಕಾಲ್ನಡಿಗೆ ಜಾಗೃತಿ ಜಾಥಾ ಕಾರ್ಯಕ್ರಮನ್ನ ಅಯೋಜಿಸಲಾಗಿತ್ತು.

ಕಲ್ಯಾಣ‌ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಬದ್ಧ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ತಾವು ಬದ್ಧರಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು.

ಸೋಮವಾರ ಗುಲಬರ್ಗಾ ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ತಾವು ಸಚಿವರಾದ ನಂತರ ಪ್ರಥಮ ಬಾರಿಗೆ ವಿ.ವಿ.ಘಟಿಕೋತ್ಸವದಲ್ಲಿ ಭಾಗವಹಿಸುವುತ್ತಿರುವುದು ತಮಗೆ ಹೆಮ್ಮೆ ಎನಿಸುತ್ತಿದೆ. ಈ ಭಾಗದ ಶಿಕ್ಷಣ ಪ್ರಗತಿಗೆ 371ಜೆ ಮೀಸಲಾತಿ ಪೂರಕವಾಗಿದೆ ಎಂದರು.

ಬಾಯಿಗೆ ಬಟ್ಟೆ ತುರುಕಿ ನೀರಾವರಿ ಇಲಾಖೆ ಇಂಜಿನಿಯರ್ ಪತ್ನಿಯ ಕೊಲೆ

ಶಿವಮೊಗ್ಗ: ನೀರಾವರಿ‌ ಇಲಾಖೆಯ ಇಂಜಿನಿಯರ್ ಪತ್ನಿಯನ್ನು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ವಿಜಯನಗರದಲ್ಲಿ ಬೆಳಕಿಗೆ ಬಂದಿದೆ. ವಿಜಯನಗರದ ಕಮಲಮ್ಮ(57) ಕೊಲೆಯಾದ ಮಹಿಳೆ. ಪತಿ ಮಲ್ಲಿಕಾರ್ಜುನ ಗೋವಾಕ್ಕೆ ತೆರಳಿದ್ದರು.  ಕಮಲಮ್ಮ ಮನೆಯಲ್ಲಿ ಒಬ್ಬರೆ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.   ಕಮಲಮ್ಮ ಅವರ ಪತಿ ಚಿತ್ರದುರ್ಗದಲ್ಲಿ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದು, ಪುತ್ರ ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಕಮ್ಮಲಮ್ಮ ಒಬ್ಬರೇ ಮನೆಯಲ್ಲಿ ಇದ್ದರು. ರಾತ್ರಿ ಪತಿ ಮತ್ತು ಪುತ್ರ ಇಬ್ಬರೂ …

ಬಾಯಿಗೆ ಬಟ್ಟೆ ತುರುಕಿ ನೀರಾವರಿ ಇಲಾಖೆ ಇಂಜಿನಿಯರ್ ಪತ್ನಿಯ ಕೊಲೆ Read More »

ಗೃಹ ಜ್ಯೋತಿ ಯೋಜನೆ ನೊಂದಣಿಯ ಮೊದಲ ದಿನ 55000 ಗ್ರಾಹಕರಿಂದ ಅರ್ಜಿ

ಬೆಂಗಳೂರು: ಭಾನುವಾರ ಗೃಹಜೋತಿ ಸೌಲಭ್ಯದ ನೋಂದಣಿ ಪ್ರಕ್ರಿಯೆಯು ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆರಂಭವಾಗಿದ್ದು ಮೊದಲ ದಿನ 55,000 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

Translate »
Scroll to Top