ಪಾನ್ – ಆಧಾರ್ ಲಿಂಕ್ ಮಾಡಲು ಕೇವಲ 4 ದಿನವಷ್ಟೇ ಬಾಕಿ..!

ಬೆಂಗಳೂರು: ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಜೂ.30ರ ಗಡುವು ನಿಗದಿಯಾಗಿದ್ದು, ಜೋಡಣೆಗೆ 5 ದಿನಗಳಷ್ಟೇ ಉಳಿದಿವೆ. ಆದರೆ, ಅನೇಕರಿಗೆ ನಾನಾ ತಾಂತ್ರಿಕ ಕಾರಣಗಳಿಂದ ಲಿಂಕ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಗಡುವು ವಿಸ್ತರಣೆಗೆ ಒತ್ತಾಯಗಳು ಕೇಳಿ ಬಂದಿವೆ. ಮತ್ತೆ ಅವಧಿ ವಿಸ್ತರಣೆಯ ಸಾಧ್ಯತೆಗಳು ಇಲ್ಲ ಎಂದು ಮೂಲಗಳು ತಿಳಿಸಿವೆ.

 

ಏತನ್ಮಧ್ಯೆ, ಪ್ಯಾನ್ ಮತ್ತು ಆಧಾರ್ ಲಿಂಕ್ಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು ಆದಾಯ ತೆರಿಗೆ ಇಲಾಖೆ ಟ್ವಿಟರ್ನಲ್ಲಿ ಪ್ರಯತ್ನಿಸಿದೆ. ಬಯೋಮೆಟ್ರಿಕ್ ಆಧರಿಸಿ ಲಿಂಕ್ ಮಾಡುವ ಅವಕಾಶವನ್ನು ಇಲಾಖೆ ಕಲ್ಪಿಸಿದೆ.

ವ್ಯಕ್ತಿಯ ಹೆಸರು, ಜನ್ಮದಿನಾಂಕ ಅಥವಾ ಲಿಂಗವು ಪ್ಯಾನ್ ಮತ್ತು ಆಧಾರ್ನಲ್ಲಿ ಹೊಂದಾಣಿಕೆಯಾಗದೇ ಹೋದರೆ, ಪ್ಯಾನ್-ಆಧಾರ್ ಲಿಂಕ್ ಮಾಡುವುದು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಮೊದಲಿಗೆ ಪ್ಯಾನ್ನಲ್ಲಿ ವಿವರಗಳನ್ನು ಆಧಾರ್ನಲ್ಲಿರುವಂತೆ ಅಪ್ಡೇಟ್ ಮಾಡಿಕೊಳ್ಳಬೇಕು. ವಿವರಗಳು ಅಪ್ಡೇಟ್ ಆದ ಬಳಿಕ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಬಹುದು.

ಪ್ಯಾನ್ ಸೇವಾ ಕೇಂದ್ರಗಳಲ್ಲಿ ಅವಕಾಶ:

 

ನೀವು ಈಗಾಗಲೇ ಪ್ಯಾನ್ ಮತ್ತು ಆಧಾರ್ನ ತಪ್ಪುಗಳನ್ನು ಸರಿಪಡಿಸಿದ್ದು, ಆ ನಂತರವೂ ಲಿಂಕ್ ಮಾಡಲು ಸಾಧ್ಯವಾಗದಿದ್ದರೆ, ಆದಾಯ ತೆರಿಗೆ ಇಲಾಖೆ ಇದಕ್ಕೂ ಪರಿಹಾರವನ್ನು ನೀಡಿದೆ. ಅಂತಹ ಸಂದರ್ಭಗಳಲ್ಲಿನೀವು ಪ್ಯಾನ್ ಸೇವೆ ಒದಗಿಸುವ ಕೇಂದ್ರಗಳಿಗೆ ಭೇಟಿ ನೀಡಬಹುದು. ಅಲ್ಲಿನೀವು ನಿಗದಿತ ಶುಲ್ಕ 50 ರೂಪಾಯಿಯನ್ನು ಪಾವತಿಸುವ ಮೂಲಕ ಬಯೋಮೆಟ್ರಿಕ್ ಆಧಾರಿತ ದೃಢೀಕರಣ ಸೌಲಭ್ಯವನ್ನು ಪಡೆಯಬಹುದು.

Facebook
Twitter
LinkedIn
Telegram
WhatsApp
Email

Leave a Comment

Your email address will not be published. Required fields are marked *

Translate »
Scroll to Top