ಗೃಹ ಜ್ಯೋತಿ ಯೋಜನೆ ನೊಂದಣಿಯ ಮೊದಲ ದಿನ 55000 ಗ್ರಾಹಕರಿಂದ ಅರ್ಜಿ

ಬೆಂಗಳೂರು: ಭಾನುವಾರ ಗೃಹಜೋತಿ ಸೌಲಭ್ಯದ ನೋಂದಣಿ ಪ್ರಕ್ರಿಯೆಯು ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆರಂಭವಾಗಿದ್ದು ಮೊದಲ ದಿನ 55,000 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

 

ಅತಿ ಹೆಚ್ಚು ಅರ್ಜಿಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ಬಂದಿದ್ದು ನೋಂದಣಿ ಪ್ರಕ್ರಿಯೆ ಶುರುವಾದಾಗ ಕೆಲ ಕಾಲ ಸೆರ್ವರ್ ಸಮಸ್ಯೆ ಎದುರಾಗಿದ್ದು ತಾಂತ್ರಿಕ ಸಿಬ್ಬಂದಿಗಳು ಇದನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು.

ಗ್ರಾಹಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ನಲ್ಲಿ ಸೇವಾ ಸಿಂಧು ಪೋರ್ಟಲ್ https://sevasindhugs. Karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ ವಿದ್ಯುತ್ ಬಿಲ್ ನಲ್ಲಿರುವ ಖಾತೆ ಸಂಖ್ಯೆ, ತಮ್ಮ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಬಹುದು.

Facebook
Twitter
LinkedIn
Pinterest
WhatsApp
Telegram

Leave a Comment

Your email address will not be published. Required fields are marked *

Translate »
Scroll to Top