Arrested

ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಸೇರಿ ಐವರ ವಿರುದ್ಧ ದೂರು, ಬಂಧನಕ್ಕೆ ಆಗ್ರಹ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಶ್ಲೀಲ, ಕೀಳು ಅಭಿರುಚಿಯ ಪೋಸ್ಟರ್ ಗಳನ್ನು ಬೆಂಗಳೂರು ನಗರದ ವಿವಿಧೆಡೆ ಗೋಡೆಗಳ ಮೇಲೆ ಅಂಟಿಸಿದ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ಜೆಡಿಎಸ್ ಪಕ್ಷ ದೂರು ನೀಡಿದೆ.

ನವಿಲಿನ ಭೇಟೆ : ಮೂವರನ್ನು ಬಂಧಿಸಿದ ಅರಣ್ಯ ಇಲಾಖಾಧಿಕಾರಿಗಳು

ತುಮಕೂರು: ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ ಹಸಿಮಾಂಸವನ್ನು ಬೇಯಿಸಿ ಅಡುಗೆ ತಯಾರಿಸುತ್ತಿದ್ದ ಮೂರು ಮಂದಿಯನ್ನು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಆಸಿಡ್ ಎರಚಿ ಪರಾರಿಯಾಗಿದ ಆರೋಪಿ ಪೋಲಿಸರ ವಶ

ಬೆಂಗಳೂರು: ಯುವತಿಯ ಮೇಲೆ ಆಸಿಡ್ ಎರಚಿ ಅಮಾನುಷ ಕೃತ್ಯ ಎಸಗಿ ಪರಾರಿಯಾಗಿ ತಮಿಳುನಾಡಿನಲ್ಲಿ ಅಡಗಿಕೊಂಡಿದ್ದ ಆರೋಪಿ ನಾಗೇಶ್‌ನನ್ನು ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇಶದಲ್ಲಿಯೇ, ಕರ್ನಾಟಕ ಪೊಲೀಸ್ ಅತ್ಯಂತ ದಕ್ಷ ಹಾಗೂ ವೃತ್ತಿಪರ ಪಡೆಯೆಂದು, ಸಾಬೀತುಪಡಿಸಿದ್ದು, ಇದಕ್ಕಾಗಿ ತಾವು ಪೊಲೀಸರನ್ನು ಅಭಿನಂದಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಹೀನಕೃತ್ಯ ನಡೆಸಿದ ಅಪರಾಧಿಯನ್ನು ಬಂಧಿಸುವ ಕಾರ್ಯದಲ್ಲಿ ತಮಿಳುನಾಡು ಪೊಲೀಸರೂ, ನಮ್ಮ ಪೊಲೀಸರಿಗೆ ನೆರವಾಗಿದ್ದಾರೆ, ಅವರಿಗೂ ಅಭಿನಂದನೆಗಳು ಎಂದರು. ಅಪರಾಧಿಗೆ ಕಠಿಣ ಶಿಕ್ಷೆಯಾಗುವಂತೆ, ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯದಲ್ಲಿ ಆತನ ವಿಚಾರಣೆ …

ಆಸಿಡ್ ಎರಚಿ ಪರಾರಿಯಾಗಿದ ಆರೋಪಿ ಪೋಲಿಸರ ವಶ Read More »

ಚಿಂತಕ, ಬರಹಗಾರ, ಮೈಸೂರು ಜಿಲ್ಲೆಯ ರವೀಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ

ಮೈಸೂರು: ದಲಿತ ಹೋರಾಟಗಾರ, ಚಿಂತಕ, ಬರಹಗಾರ ಮೈಸೂರು ಜಿಲ್ಲೆಯ ಹಾರೋಹಳ್ಳಿ ರವೀಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ವರುಣದಲ್ಲಿ ರವೀಂದ್ರ ಅವರನ್ನು ಬಂಧಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಠಾಣೆ ಪೊಲೀಸರು ಅರೆಸ್ಟ್‌ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆಂದು ತಿಳಿದುಬಂದಿದೆ. ಹಳೆಯ ಪೋಸ್ಟ್‌‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 2017ರಲ್ಲಿ ಮಾಡಲಾದ ಪೇಸ್‌ಬುಕ್‌ ಪೋಸ್ಟ್‌ ಒಂದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ರವೀಂದ್ರ ಅವರು 2019ರಿಂದಲೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಂಧಿಸುವಂತೆ ಕೋರ್ಟ್ ಆದೇಶಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು …

ಚಿಂತಕ, ಬರಹಗಾರ, ಮೈಸೂರು ಜಿಲ್ಲೆಯ ರವೀಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ Read More »

ದರೋಡೆಕೋರರನ್ನು ಬಂಧಿಸಿದ ಕೊಪ್ಪಳ ಗ್ರಾಮೀಣ ಠಾಣೆ ಪೋಲಿಸರು

ಕೊಪ್ಪಳ,: ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ದರೋಡೆಕೋರರನ್ನು ಬಂಧಿಸುವಲ್ಲಿ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಗೆ ಫಿರ್ಯಾದಿರದಾರರಾದ ವೆಂಕಟೇಶ ಸಾ. ವಣಗೇರಿ ರವರು ಫೆ. 03 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಠಾಣೆಗೆ ಹಾಜರಾಗಿ ಈಗ್ಗೆ ಸುಮಾರು 20 ದಿವಸಗಳ ಹಿಂದೆ ದೂರುದಾರರ ಮೊಬೈಲ್ ನಂಬರ್ ರಮೇಶ ಚಿಕ್ಕಮಂಗಳೂರ ಎಂಬುವನು ತನ್ನ ಮೊಬೈಲ್ ನಂಬರದಿಂದ ಕರೆ ಮಾಡಿ ಪರಿಚಯ ಮಾಡಿಕೊಂಡು ಒಂದು ಮನೆಯ ಬುನಾದಿ ತಗೆಯುವ ಕಾಲಕ್ಕೆ ಭೂಮಿಯಲ್ಲಿ ಬಂಗಾರದ ಬಿಲ್ಲೆಗಳು ಸಿಕ್ಕಿರುತ್ತವೆ ಕಡಿಮೆ …

ದರೋಡೆಕೋರರನ್ನು ಬಂಧಿಸಿದ ಕೊಪ್ಪಳ ಗ್ರಾಮೀಣ ಠಾಣೆ ಪೋಲಿಸರು Read More »

ಧರ್ಮ ದ್ರೋಹಿಗಳನ್ನು ಕೂಡಲೇ ಬಂಧಿಸಬೇಕು

ದೇವನಹಳ್ಳಿ:ಸಹಬಾಳ್ವೆ ಇಂದ ಜೀವನ ನಡೆಸಲು ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕನ್ನು ನೀಡಿದ್ದಾರೆ. ಅದನ್ನು ದುರುಪಯೋಗ ಪಡಿಸಿಕೊಂಡು ಹಿಂದು ಧರ್ಮದ ದೇವಾಲಯದಲ್ಲಿ ರಾತ್ರೋ ರಾತ್ರಿ ಅಮೇಧ್ಯ ವನ್ನು ತಂದು ದೇವರ ಮುಂದೆ ಬಿಸಾಡಿದ್ದು ಧರ್ಮಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಮುಂದೆ ಇದು ತೀವ್ರತರ ಹೋರಾಟಕ್ಕೆ ಮುನ್ನುಡಿ ಬರೆದಂತಾಗುತ್ತದೆ ಎಂದು ಬಿಜೆಪಿ ಟೌನ್ ಅಧ್ಯಕ್ಷ ಆರ್. ಸಿ. ಮಂಜುನಾಥ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಮೇಲೂರು ಮುಖ್ಯ ರಸ್ತೆ ನಾಗರಬಾವಿ ಬಳಿ ಇರುವ ವಿಜಯ ಮಾರುತಿ ಭಕ್ತ ಮಂಡಳಿ …

ಧರ್ಮ ದ್ರೋಹಿಗಳನ್ನು ಕೂಡಲೇ ಬಂಧಿಸಬೇಕು Read More »

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ

ದೇವನಹಳ್ಳಿ: ಉತ್ತರಪ್ರದೇಶದಲ್ಲಿ ರೈತರ ಸಾವು , ಹಾಗು ಅವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಪಂಜಿನ ಮೆರವಣಿಗೆ ಮಾಡುತ್ತಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ನಾಗೇಶ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಹೊಸಬಸ್ ನಿಲ್ದಾಣದಲ್ಲಿ ಜಿಲ್ಲಾ ಹಾಗೂ ಟೌನ್ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಂತರ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು …

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ Read More »

Translate »
Scroll to Top