ದರೋಡೆಕೋರರನ್ನು ಬಂಧಿಸಿದ ಕೊಪ್ಪಳ ಗ್ರಾಮೀಣ ಠಾಣೆ ಪೋಲಿಸರು

ಕೊಪ್ಪಳ,: ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ದರೋಡೆಕೋರರನ್ನು ಬಂಧಿಸುವಲ್ಲಿ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಗೆ ಫಿರ್ಯಾದಿರದಾರರಾದ ವೆಂಕಟೇಶ ಸಾ. ವಣಗೇರಿ ರವರು ಫೆ. 03 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಠಾಣೆಗೆ ಹಾಜರಾಗಿ ಈಗ್ಗೆ ಸುಮಾರು 20 ದಿವಸಗಳ ಹಿಂದೆ ದೂರುದಾರರ ಮೊಬೈಲ್ ನಂಬರ್ ರಮೇಶ ಚಿಕ್ಕಮಂಗಳೂರ ಎಂಬುವನು ತನ್ನ ಮೊಬೈಲ್ ನಂಬರದಿಂದ ಕರೆ ಮಾಡಿ ಪರಿಚಯ ಮಾಡಿಕೊಂಡು ಒಂದು ಮನೆಯ ಬುನಾದಿ ತಗೆಯುವ ಕಾಲಕ್ಕೆ ಭೂಮಿಯಲ್ಲಿ ಬಂಗಾರದ ಬಿಲ್ಲೆಗಳು ಸಿಕ್ಕಿರುತ್ತವೆ ಕಡಿಮೆ ಬೆಲೆಯಲ್ಲಿ ಕೊಡುತ್ತೇನೆ ಬೇಕಾದಲ್ಲಿ ನಮ್ಮ ಹರಪನಹಳ್ಳಿ ತಾಲೂಕಿನ ಕೆ. ಬಸಾಪೂರ ಗ್ರಾಮಕ್ಕೆ ಬನ್ನೀರಿ ಅಂತಾ ಹೇಳಿ ಊರಿಗೆ ಕರೆಯಿಸಿ 2 ಅಸಲಿ ಬಂಗಾರದ ಬಿಲ್ಲೆ ನೀಡಿ ನಿಮಗೆ ಬೇಕಾದಲ್ಲಿ ಇವುಗಳನ್ನು ಚೆಕ್ ಮಾಡಿಸಿ ನಂತರ ತಿಳಿಸಿರಿ ಅಂತಾ ಹೇಳಿ ಕಳುಹಿಸಿ , ನಂತರ ಆಪಾದಿತರು ಪೋನ್ ಮಾಡಿ ನಾಲ್ಕುವರಿ ಕೆ.ಜಿ. ಬಂಗಾರದ ಬಿಲ್ಲೆಗಳನ್ನು ತಗೆದುಕೊಂಡು ಬರುತ್ತೇವೆ.

ನೀವು ಹಣ ತಗೆದುಕೊಂಡು ಹಲಗೇರಿ ಗ್ರಾಮದ ಹತ್ತಿರ ಬನ್ನಿ ಅಂತಾ ಹೇಳಿದಾಗ ನಾವು ಅಲ್ಲಿಗೆ ಹಣ ತೆಗೆದುಕೊಂಡು ಬಂದಾಗ ನಕಲಿ ಬಂಗಾರದ ಬಿಲ್ಲೆ ನೀಡಿ ಹಣ ತಗೆದುಕೊಂಡು ಹೋಗುವಲ್ಲಿ ನಮಗೆ ಬಂಗಾರದ ಬಿಲ್ಲೆಗಳು ನಕಲಿ ಅಂತಾ ಗೋತ್ತಾಗಿದ್ದರಿಂದ ಹಣ ವಾಪಸ್ಸ ಪಡೆದುಕೊಂಡಾಗ ಆಪಾದಿತರು ಫಿರ್ಯಾದಿ ಹಾಗೂ ಇತರೆ ಇಬ್ಬರಿಗೆ ದಬ್ಬಾಡಿ, ನೂಕಿ ಕೈಯಿಂದ ಹೊಡೆ ಬಡಿ ಮಾಡಿ 5 ಲಕ್ಷ ನಗದು ಹಣ ಕಸಿದುಕೊಂಡು ತಮ್ಮ-ತಮ್ಮ ಮೋಟಾರ ಸೈಕಲ್ ದೊಂದಿಗೆ ಹೋಗುತ್ತಿದ್ದಾಗ ಸಾರ್ವಜನಿಕರ ಸಹಕಾರದೊಂದಿಗೆ ಒಂದು ಮೋಟಾರ್ ಸೈಕಲ್ ಮೇಲಿದ್ದ 2 ಜನ ಆಪಾದಿತರಿಗೆ ಹಿಡಿದುಕೊಂಡು ಬಂದಿದ್ದರ ಮೇಲಿಂದ ಠಾಣೆ ಗುನ್ನ ನಂಬರ 25/2022 ಕಲಂ 397 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಸರ ಸಿಕ್ಕ ಇಬ್ಬರೂ ಆಪಾದಿತರಿಗೆ ವಿಚಾರಣೆ ಮಾಡಿ ಇಬ್ಬರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ನಂತರ ಪ್ರಕರಣದಲ್ಲಿ ತಲೆ ಮರಸಿಕೊಂಡ ಇನ್ನು 4 ಜನ ಆಪಾದಿತರು ಮತ್ತು ಅವರಿಂದ ನಗದು ಹಣ 2 ಮೋಟಾರ ಸೈಕಲ್ ಪತ್ತೆ ಕುರಿತು ಮೇಲಾಧಿಕಾರಿಗಳಾದ ಕೊಪ್ಪಳ ಜಿಲ್ಲಾ ಪೊಲೀಸ ಅಧೀಕ್ಷಕರಾದ ಅರುಣಾಂಗಶು ಗಿರಿ ಹಾಗೂ ಪೊಲೀಸ್ ಉಪಾಧೀಕ್ಷಕರು, ಕೊಪ್ಪಳ ಉಪ – ವಿಭಾಗ ಶ್ರೀಮತಿ ಗೀತಾ ಬೇನಾಳ ರವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಐಪಿ ವಿಶ್ವನಾಥ ಹಿರೇಗೌಡರ್ ಅವರು ಎರಡು ಪ್ರತ್ಯೇಕ ತಂಡ ಮಾಡಿ, ಆ ತಂಡದ ಸಿಬ್ಬಂದಿಗಳಾದ ಎ.ಎಸ್.ಐ. ಶಶಿಕಾಂತ, ಹೆಚ್.ಸಿ. ಮಾರುತಿ, ಪಿ.ಸಿ. ವೀರಬಸಪ್ಪ ,

ಗದ್ದೆಪ್ಪ ರವರಿಗೆ ಸೂಕ್ತ ತಿಳುವಳಿಕೆ ನೀಡಿ ಕಳುಹಿಸಿಕೊಟ್ಟಿದ್ದು ದಿ. 04 ರಂದು ಆಪಾದಿತರು ಅಳವಂಡಿ ಕಡೆಯಿಂದ ಮುಂಡರಗಿ ಕಡೆಗೆ ಮೋಟಾರ ಸೈಕಲ್ ಮೇಲೆ ಹೊರಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಪಿಐ ರವರು ವಿಶೇಷ ತಂಡದೊಂದಿಗೆ ಸಂಜೆ 4.30 ಗಂಟೆಗೆ ಬೆಳಗಟ್ಟಿ ಸೀಮಾದಲ್ಲಿ ಮುಂಡರಗಿ ರಸ್ತೆಯಲ್ಲಿ ಎರಡು ಮೋಟಾರ ಸೈಕಲ್ ಮೇಲೆ ಪರಾರಿಯಾಗುತ್ತಿರುವಾಗ ಪೊಲೀಸ್ ಜೀಪ್ ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನತ್ತಿ ಒಂದು ಮೋಟಾರ ಸೈಕಲ್ ಮೇಲೆ ಹೋಗುತ್ತಿದ್ದ ಇಬ್ಬರಿಗೆ ವಶಕ್ಕೆ ತಗೆದುಕೊಂಡು ಸದರಿಯವರಿಂದ ಕೃತ್ಯಕ್ಕೆ ಉಪಯೋಗಿಸಿದ ಒಂದು ಮೋಟಾರ ಸೈಕಲ್ ಹಾಗೂ 5 ಲಕ್ಷ ರೂಪಾಯಿ ನಗದು ಹಣ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಇನ್ನು ಇಬ್ಬರೂ ಆಪಾಧಿತರ ಪತ್ತೆ ಕುರಿತು ಪ್ರಕರಣವು ತನಿಖೆ ಹಂತದಲ್ಲಿರುತ್ತದೆ. ಸದರಿ ಪ್ರಕರಣವನ್ನು ಭೇದಿಸುವಲ್ಲಿ ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅರುಣಾಂಗಶು ಗಿರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top