ಧರ್ಮ ದ್ರೋಹಿಗಳನ್ನು ಕೂಡಲೇ ಬಂಧಿಸಬೇಕು

ದೇವನಹಳ್ಳಿ:ಸಹಬಾಳ್ವೆ ಇಂದ ಜೀವನ ನಡೆಸಲು ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕನ್ನು ನೀಡಿದ್ದಾರೆ. ಅದನ್ನು ದುರುಪಯೋಗ ಪಡಿಸಿಕೊಂಡು ಹಿಂದು ಧರ್ಮದ ದೇವಾಲಯದಲ್ಲಿ ರಾತ್ರೋ ರಾತ್ರಿ ಅಮೇಧ್ಯ ವನ್ನು ತಂದು ದೇವರ ಮುಂದೆ ಬಿಸಾಡಿದ್ದು ಧರ್ಮಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಮುಂದೆ ಇದು ತೀವ್ರತರ ಹೋರಾಟಕ್ಕೆ ಮುನ್ನುಡಿ ಬರೆದಂತಾಗುತ್ತದೆ ಎಂದು ಬಿಜೆಪಿ ಟೌನ್ ಅಧ್ಯಕ್ಷ ಆರ್. ಸಿ. ಮಂಜುನಾಥ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಮೇಲೂರು ಮುಖ್ಯ ರಸ್ತೆ ನಾಗರಬಾವಿ ಬಳಿ ಇರುವ ವಿಜಯ ಮಾರುತಿ ಭಕ್ತ ಮಂಡಳಿ ದೇವಾಸ್ಥಾನದಲ್ಲಿ ಕಿಡಿ ಗೇಡಿಗಳು ದೇವಾಲಯದ ಗರ್ಭ ಗುಡಿಯಲ್ಲಿ ಮಲಮೂತ್ರಗಳನ್ನು ಗರ್ಭಗುಡಿಯ ತುಂಬಾ ಎಸೆದು ಹೋಗಿರುವ ವಿಚಾರ ಖಂಡಿಸಿ ಮಾತನಾಡಿ, ಯಾವುದೇ ಧರ್ಮದ ಆಚರಣೆಗೆ ಯಾರೂ ಧಕ್ಕೆ ತರುವಂತಿಲ್ಲ. ರಾತ್ರೋ ರಾತ್ರಿ ಮಾಡಿರುವ ಕಿಡಿಗೇಡಿತನ ಹೇಡಿಗಳು ಮಾಡಿರುವಂತಹ ಕೆಲಸ. ಇವತ್ತಿನ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಿದ್ದು, ಹಿಂದೆ ನಡೆದಂತಹ ಇಂತಹ ಕೃತ್ಯಗಳು ಮತ್ತು ಇಂದಿನ ಘಟನೆಗೆ ಕಾರಣರಾದವರನ್ನು ಕೂಡಲೇ ಕಂಡುಹಿಡಿದು ಬಂಧಿಸಿ, ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯ ಎರಡೂ ಸಲ್ಲದು. ಸಾರ್ವಜನಿಕರು ಈ ವಿಚಾರದಲ್ಲಿ ಸಹಕಾರ ನೀಡಿ ತಾಳ್ಮೆ ಇಂದ ವಿಷಯವನ್ನು ಪರಿಹರಿಸೋಣ ಎಂದು ತಿಳಿಸಿದರು.

ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀಂದ್ರ ಮಾತನಾಡಿ, ಹಿಂದುಗಳ ಭಾವನೆಗೆ ಧಕ್ಕೆ ತರುವ ಇಂತಹ ಕೆಲಸಗಳು ನಡೆದಾಗ ಅಧಿಕಾರಿ ವರ್ಗ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು. ನೆಲಮಂಗಲದ ಆಂಜನೇಯ ದೇವಾಲಯದಲ್ಲೂ ಇದೇ ರೀತಿ ಅಮೇಧ್ಯವನ್ನು ಎಸೆಯಲಾಗಿತ್ತು. ಡಿವೈಎಸ್ ಪಿ ಹಾಗೂ ಜಿಲ್ಲೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದೂ, ದೂರು ನೀಡಿದ್ದೇವೆ. ಇಂದಿನಿಂದ ಎರಡು ದಿನಗಳ ಕಾಲಾವಧಿ ಒಳಗೆ ತಪ್ಪಿತಸ್ಥರನ್ನು ಬಂಧಿಸಬೇಕು. ಯಾರೇ ಆಗಿರಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಧರಣಿ ಹೋರಾಟಕ್ಕೂ ನಾವು ಸಿದ್ಧ ಎಂದು ತಿಳಿಸಿದರು. ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ವಿಜಯಮಾರುತಿ ಭಕ್ತ ಮಂಡಳಿ ಹಾಗೂ ಹಿಂದೂ ಜನಾಂಗದವರು ಹಿಂದು ದೇವಾಯಲದಲ್ಲಿ ಆದ ಘಟನೆಯನ್ನು ಖಂಡಿಸಿ ಇದಕ್ಕೆ ಕಾರಣರಾದವರ ವಿರುದ್ಧ ಧಿಕ್ಕಾರ ಕೂಗಿ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಪಟ್ಟಣದ ಬಹುತೇಕ ಹಿಂದೂಗಳು ಸ್ಥಳಕ್ಕೆ ಆಗಮಿಸಿ ದೇವಾಲದಲ್ಲಿ ಆಗಿರುವ ಹೇಸಿಗೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿ ದೇವಾಲಯವನ್ನು ಶುಚಿಗೊಳಿಸಲು ಗೋಮಾತೆಯ ಗಂಜಲವನ್ನು ಪ್ರೋಕ್ಷಣೆ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ವಿಜಯಪುರ ಪಿ.ಎಸ್.ಐ ನಂದೀಶ್ ಆಗಮಿಸಿ ಸ್ಥಳ ಪರಿಶೀಲಿಸಿದರು

ಕೋಟ್ : ” ಹಿಂದೂ ಸಮಾಜದವರು ಶಾಂತಿ ಪ್ರಿಯರು, ದುಶ್ಕೃತ್ಯಗಳು ನಡೆದಾಗ ಹೆಚ್ಚು ಸಂಘಟಿತರಾಗುವುದಿಲ್ಲ ಎಂದು ಆರಕ್ಷಕ ನಿರೀಕ್ಷಕರು ನಿರ್ಲಕ್ಷ್ಯ ಮಾಡಬೇಡಿ. ಕಡಿಮೆ ಸಂಖ್ಯೆಯಲ್ಲಿ ಬಂದು ವಿಚಾರಣೆ ಮಾಡಿಕೊಂಡು ಹೋಗಿದ್ದೀರ. ಇದೇ ರೀತಿ ಅಮೇಧ್ಯವನ್ನು ಚರ್ಚ್ ಅಥವಾ ಮಸೀದಿ ಯಲ್ಲಿ ಎಸೆದಿದ್ದರೆ, ಪೊಲೀಸ್ ರಕ್ಷಣೆ ನೀಡುತ್ತಿದ್ದರು, ಮಾಧ್ಯಮಗಳು ಹೆಚ್ಚು ಒತ್ತು ನೀಡಿ ಘಟನೆಯನ್ನು ಬಿತ್ತರಿಸುತ್ತಿದ್ದರು. ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳಲ್ಲಿ ಇಂತಹ ಘಟನೆ ನಾಲ್ಕು ನಡೆದಿದ್ದರೂ ಇದನ್ನು ಸಾಮಾನ್ಯ ಎನ್ನುವಂತೆ ಪರಿಗಣಿಸಿದರೆ ಹಿಂದುಗಳು ಇದನ್ನು ಸಹಿಸುವುದಿಲ್ಲ.

  • ಆರ್.ಸಿ. ಮಂಜುನಾಥ್, ಬಿಜೆಪಿ ಟೌನ್ ಅಧ್ಯಕ್ಷ, ವಿಜಯಪುರ

Leave a Comment

Your email address will not be published. Required fields are marked *

Translate »
Scroll to Top