ದೇವನಹಳ್ಳಿ, ಡಿ,26 : ತಾಲ್ಲೂಕು ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಲೈಬ್ರರಿ ಬಾಯ್ಸ್ ವತಿಯಿಂದ ವಿಜಯಪುರ ಪ್ರೀಮಿಯರ್ ಲೀಗ್ 2021 ಎರಡು ದಿನಗಳ ಕಾಲ ನಡೆಯುವ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು. ಇಂದಿನ ಪರಿಸ್ಥಿತಿಯಲ್ಲಿ ಕೆಲವು ಯುವಕರು ಮಾದಕ, ಮದ್ಯಪಾನ, ಧೂಮಪಾನ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಪೋಷಕರ ಕನಸುಗಳಿಗೆ ತೊಂದರೆ ಮಾಡದಂತೆ ಯುವಕರು ಎಚ್ಚರವಹಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಶೆಟ್ಟಿಗೆರೆ ರಾಜಣ್ಣ ಮಾತನಾಡಿ, ಪುನಿತ್ ರಾಜಕುಮಾರ್ ಅವರ ಸ್ಮರಣಾರ್ಥ ಮಾಡುತ್ತಿರುವ ಕ್ರಿಕೆಟ್ ಪಂದ್ಯಾವಳಿ ಎಲ್ಲ ಯುವಕರಿಗೂ ಮಾದರಿಯಾಗಿರಲಿ. ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆ ಯುವಕರಲ್ಲಿ ಸ್ಪೂರ್ತಿ, ಸಧೃಡ ಆರೋಗ್ಯ, ಇತರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಬಿನಂದನಾರ್ಹ ಎಂದು ತಿಳಿಸಿದರು.

ಸ್ಥಳೀಯ ವಿಜಯಪುರದ ಯುವ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸ್ಥಳೀಯ ಆಟಗಾರರಿಗೆ ಆದ್ಯತೆ ನೀಡಿದ್ದು ಮೊದಲ ಬಹುಮಾನವಾಗಿ ಒಂದು ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ದ್ವತೀಯ ಬಹುಮಾನ ಐವತ್ತು ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡುತ್ತಿದ್ದು ಐ.ಪಿ.ಎಲ್ ಮಾದರಿಯಲ್ಲಿ ವಿಜಯಪುರ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಉಪಾಧ್ಯಕ್ಷ ಸುಧಾಕರ್,ತಾಲ್ಲೂಕು ಖಾದಿ ಬೋರ್ಡ್ ಅಧ್ಯಕ್ಷ ನಾಗೇಗೌಡ, ಭಾನುಚಂದ್ರ, ಟೂರ್ನಿಯ ಆಯೋಜಕರಾದ ಸಂದೀಪ್, ಮಹೇಶ್, ಭಾಸ್ಕರ್, ಚಂದನ್, ಇನ್ನು ಹಲವರು ಇದ್ದರು.