ಸಹಕಾರ ಸಂಘದ ಉನ್ನತೀಕರಣಕ್ಕೆ ರೈತರ ಸಹಕಾರ ಇದೆ

ದೇವನಹಳ್ಳಿ,ಡಿ,26 : ಸಹಕಾರ ಸಂಘದ ಉನ್ನತೀಕರಣಕ್ಕೆ ರೈತರ ಸಹಕಾರ ಹೆಚ್ಚು ಇದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ರಮೇಶ್ ತಿಳಿಸಿದರು.
ಪಟ್ಟಣದ ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ರೈತರು ಸಹಕಾರ ಸಂಘಗಳ ಜೀವನಾಡಿಗಳಾಗಿದ್ದಾರೆ. ಖಾಸಗಿ ಬ್ಯಾಂಕ್‌ಗಳಲ್ಲಿ ಠೇವಣೆ ಇಡುವ ಬದಲಿಗೆ ಸಂಘದಲ್ಲಿಯೇ ವ್ಯವಹಾರ ನಡೆಸಿದರೆ ಸಂಘವು ಅಭಿವೃದ್ಧಿಗೊಳ್ಳುತ್ತದೆ ಎಂದು ಹೇಳಿದರು. ದೇವನಹಳ್ಳಿ ತಾಲ್ಲೂಕಿನಲ್ಲಿ ರೈತರಿಗೆ ಕೃಷಿಗೆ ಅತಿ ಹೆಚ್ಚು ಸಾಲ ನೀಡಿರುವ ಸಂಘಗಳಲ್ಲಿ 2 ನೇ ಸ್ಥಾನದಲ್ಲಿದ್ದು ಈ ಸಂಘ ಇತರೆ ಸಂಘಗಳಿಗೆ ಮಾದರಿಯಾಗಿದೆ. ಕಳೆದ ಸಾಲಿನಲ್ಲಿ 4 ಕೋಟೆ 12 ಲಕ್ಷ ರೂ ರೈತರಿಗೆ ಸಾಲನೀಡಿದ್ದಾರೆ ಆಡಳಿತ ಮಂಡಳಿಯ ಶ್ರಮದಿಂದ ಇಷ್ಟು ಸಾಲ ನೀಡಲು ಸಾಧ್ಯ, ರೈತರು ಕೃಷಿ, ಹಸು, ಕುರಿ, ಹಂದಿ ಸಾಕಾಣಿಕೆಗೆ ಕಡಿಮೆ ಬಡ್ಡಿ ಧರದಲ್ಲಿ ಸಾಲ ದೊರೆಯುತ್ತಿದ್ದು ರೈತರು ಸದ್ಬಳಕೆಮಾಡಿಕೊಳ್ಳಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ರಿಂದ 10 ಕೋಟಿವರೆ ರೈತರಿಗೆ ಸಾಲ ನೀಡುವ ಗುರಿ ಇಟ್ಟುಕೊಳ್ಳಿ. ತಾಲ್ಲೂಕಿನ ಎಲ್ಲಾ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯರ್ನಿವಹಿಸುತ್ತಿವೆ. ಈ ಸಂಸ್ಥೆಗೆ ಕಚೇರಿಗೆ ಜಾಗದ ಕೊರತೆಯಿದ್ದು ನಬಾರ್ಡ್‌ನಿಂದ ದೊರೆಯುವ ಸಾಲಸೌಲಭ್ಯವನ್ನು ಬಳಸಿಕೊಂಡು ಜಾಗ ಖರೀದಿಸಿ ನೂತನ ಕಟ್ಟಡ ನಿರ್ಮಿಸಿ, ಜನತಾ ಬಜಾರ್ ಮಳಿಗೆ ತೆರೆದು ಸಾರ್ವಜನಿಕರಿಗೆ ಅನುಕೂಲ ಹಾಗು ಸಂಘಕ್ಕೂ ಸಹ ಲಾಭಾಂಶ ಸಿಗಲಿದೆ ರಾಮನಗರ, ಕನಕಪುರಗಳಲ್ಲಿ ರೈತರು ಅತಿ ಹೆಚ್ಚು ಸಾಲ ಪಡೆದಿದ್ದಾರೆ ತಾಲೂಕಿನಲ್ಲಿ ರೈತರು ಸಾಲ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅತಿ ಕಡಿಮೆ ದಾಖಲೆಗಳನ್ನು ನೀಡಿ ಬಡ್ಡಿ ರಹಿತ ಸಾಲ ಪಡೆಯಬಹುದಾಗಿದೆ ಎಂದರು.


ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್ ಮಾತನಾಡಿ, ನಮ್ಮ ಸಹಕಾರ ಸಂಘದಲ್ಲಿ ಯಾವುದೇ ಪಕ್ಷಭೇದವಿಲ್ಲದೆ ಎಲ್ಲರಿಗೂ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಹಾಗು ಸಂಘಕ್ಕೆ 1 ಲಕ್ಷ 17 ಸಾವಿರ ನಿವ್ವಳ ಲಾಭಬಂದಿದೆ. ಅನೇಕ ಕುಟುಂಬಗಳು ಒಟ್ಟಿಗೆ ಇರುವುದು ಹಾಗು ಪಹಣಿಗಳ ಬದಲಾವಣೆಯಾಗದ ಕಾರಣ ಅನೇಕ ರೈತರು ಸಾಲ ಪಡೆದಿಲ್ಲ. ಕನಕಪುರ ಹಾಗು ರಾಮನಗರ ಪೋಡಿಮುಕ್ತ ಗ್ರಾಮಗಳಾಗಿದ್ದು ಅಲ್ಲಿ ಅತಿ ಹೆಚ್ಚು ರೈತರು ಸಾಲಪಡೆದಿದ್ದಾರೆ ದೇವನಹಳ್ಳಿ ತಾಲೂಕನ್ನ ಪೋಡಿಮುಕ್ತವಾಗಿ ಮಾಡಿದರೆ ಮತ್ತಷ್ಟು ರೈತರು ಸಾಲಪಡೆಯಲಿದ್ದಾರೆ. ಸಂಘದ ನೂತನ ಕಟ್ಟಡ ನಿರ್ಮಿಸಲು ಖಾಲಿನಿವೇಶನಕ್ಕಾಗಿ ಪುರಸಭೆಗೆ ಮನವಿ ಸಲ್ಲಿಸಲಾಗಿದೆ ಆದಷ್ಟುಬೇಗ ಜಾಗ ನೀಡಿದರೆ ಉತ್ತಮ ವಾಣಿಜ್ಯ ಮಳಿಗೆ ನಿರ್ಮಿಸಿ ಸಂಘದ ವಹಿವಾಟನ್ನು ಮತ್ತಷ್ಟು ಅಭಿವೃದ್ಧಿ ಪಡೆಸಲಾಗುವುದು. ಮುಂದಿನ ವಾರ್ಷಿಕ ಮಹಾಸಭೆ ವೇಳೆಗೆ ಸಂಘದ ನೂತನ ಕಟ್ಟಡವನ್ನು ನಿರ್ಮಿಸಲಾಗುವುದು ಎಂದರು. ಇದೆ ವೇಳೆ ದೇವನಹಳ್ಳಿ ಕಸಬಾ ವಿಎಸ್‌ಎಸ್‌ಎನ್‌ನ ಉಪಾಧ್ಯಕ್ಷರಾದ ಸಿ.ಮಂಜುನಾಥ್, ನಿರ್ದೇಶಕರಾದ ಜಿ.ಸಿ.ಮಂಜುನಾಥ್ ಎಸ್.ಗೋಪಾಲ್, ವಿ.ದಾಸಪ್ಪ, ನರಸಿಂಹಮೂರ್ತಿ, ಸೊಸೈಟಿ ರಾಜಣ್ಣ, ಬಿ.ಎ.ಕುಮಾರ್, ಪಿ.ಎ.ಗಾಯಿತ್ರಿ, ಮಂಜುಳಾ, ಕೆ.ಅಶ್ವಥ್‌ನಾರಾಯಣ್, ಜೆ.ಎನ್.ನಾಗರಾಜ್, ಎನ್.ವೆಂಕಟೇಶ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎನ್.ವೆಂಕಟೇಶ್, ಲೆಕ್ಕಿಗ ವಿ.ರಾಜೇಶ್, ಮರಾಟ ಗುಮಾಸ್ತ ಜಿ.ಸುಮತಿ, ಸಹಾಯಕ ಸತೀಶ್ ಮುಂತಾದವರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top