ಮೀಟರ್ ಬಾಕ್ಸ್ ನಲ್ಲಿ ಸೇರಿಕೊಂಡಿದ್ದ ಹಾವು ರಕ್ಷಣೆ

ತುಮಕೂರು,ಜನವರಿ,20 : ತುಮಕೂರಿನ ಶ್ರೀನಗರದ ನಾಗರಾಜು ಅವರ ಮನೆಯಲ್ಲಿ ನೀರಿನ ಮೀಟರ್ ಬಾಕ್ಸ್ ನಲ್ಲಿ ಸೇರಿಕೊಂಡಿದ್ದ ಗೆರೆ ಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ. ಸುಮಾರು 4.5 ಅಡಿ ಉದ್ದದ ಗೆರೆ ಹಾವು ಮೀಟರ್ ಬಾಕ್ಸ್ ನ ಒಳಗಿದ್ದ ಕಪ್ಪೆಯನ್ನು ತಿನ್ನಲು ಬಾಕ್ಸ್ ನ ಒಳಗೆ ಸೇರಿಕೊಂಡಿದ್ದ ಹಾವನ್ನು ಕಂಡ ಮನೆಯವರು ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದರು.


ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ, ಸಚಿನ್ ಗೌಡ ರವರು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಮನೆಯೊಳಗೆ ಬಂದರೆ ಹೊಡೆದು ಸಾಯಿಸುವ ಪ್ರಯತ್ನವನ್ನು ಮಾಡಬಾರದೆಂದು ಉರಗ ತಜ್ಞ ಮನು ಮನವಿ ಮಾಡಿದರು. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆಗೆ  ಮಾಡಲು ವಾರ್ಕೊ ಸಂಸ್ಥೆಗೆ 9964519576 ಕರೆಮಾಡಬಹುದು.

Leave a Comment

Your email address will not be published. Required fields are marked *

Translate »
Scroll to Top