ಸಿರುಗುಪ್ಪ: ತಾಲ್ಲೂಕಿನ ಕೆಂಚಗಾರ ಬೆಳಗಲ್ ರಸ್ತೆಯ ಬೆಂಚಿಕ್ಯಾಪ್ ಬಳಿ ದ್ವಿಚಕ್ರ ವಾಹನ ಸವಾರನೊಬ್ಬ ವಾಹನ ಚಾಲನಾ ಸಂದರ್ಭದಲ್ಲಿಆಯತಪ್ಪಿ ಬಿದ್ದುದಕ್ಕೆ ಅಪಘಾತವಾಗಿದೆ.

ಲಕ್ಷಣ ಹೆಸರಿನ ಸೀಮಾಂಧ್ರದ ಹೊಳಗುಂದ ಗ್ರಾಮದ ಅಂದಾಜು 30-35 ವಯಸ್ಸಿನ ವ್ಯಕ್ತಿಯು ಆಯತಪ್ಪಿ ಬಿದ್ದು ಸ್ವಯಂಕೃತವಾಗಿ ತೀವ್ರ ಗಾಯಗಳನ್ನುಮಾಡಿಕೊಂಡಿದ್ದಾನೆ. ಘಟನೆಯನ್ನು ಪೊಲೀಸ್ ಸೇವೆ ಇ ಆರ್ ಎಸ್.ಎಸ್ 112 ವಾಹನಕ್ಕೆ ಸಂಪರ್ಕಿಸಿದಾಗ ತಕ್ಷಣ ಕಾರ್ಯ ಪ್ರವರ್ತರಾದ ಪೊಲೀಸ್ ಆಧಿಕಾರಿ ಎ.ಎಸ್.ಐ. ಕೊಟ್ರಬಸಪ್ಪ ಮತ್ತು ಚಾಲಕ ಭೀಮೇಶ್ ರು ಇಲಾಖೆಯ ವಾಹನ ಕೆ.ಎ. 34. ಜಿ 0833 ದಲ್ಲಿ ತೆರಳಿ ಗಾಯಾಳು ಸ್ಥಳ ತಲುಪಿ ಆತನನ್ನು ಸಿರುಗುಪ್ಪ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಇಲ್ಲಿನ ಆಸ್ಪತ್ರೆಯ ವೈದ್ಯರುಗಳು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಶಿಫಾರಿಸಿ ಸೋದರ ಸಂಭಂದಿಕ ರಾಮುರೊಡನೆ ಕಳಿಸಿ ಕೊಟ್ಟಿದ್ದಾರೆ. ಅಲ್ಲಿ ಗಾಯಾಳುವು ಚೇತರಿಸಿಕೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 112 ಪೋಲೀಸರ ಕಾರ್ಯ ಎಲ್ಲೆಡೆ ಮೆಚ್ಚುಗೆಯಾಗುತ್ತಿದೆ.