ಬಾಣಂತಿ ಮಹಿಳಿಗೆ ಕೊರೋನಾ ಸೋಂಕು ದೃಢ

ಸಿರುಗುಪ್ಪ:  ತಾಲ್ಲೂಕಿನ ಬಲಕುಂದಿ ಗ್ರಾಮದ 28 ವರ್ಶದ ಬಾಣಂತಿ ಮಹಿಳೆಗೆ ಸೋಂಕು ಧೃಢ ಪಟ್ಟಿದೆ. ಮಹಿಳೆಯು ಇದೇ ದಿನಾಂಕ 6ರಂದು ಸಿರಗುಪ್ಪ ಸರ್ಕಾರಿ ಸಾರ್ವಜನಿಕ ನೂರು ಹಾಸಿಗೆಗಳ ಆಸ್ಪತ್ರೆಗೆ ಪ್ರಸವ ವೇದನೆಯಿಂದ ಹೆರಿಗೆಗೆಂದು ದಾಖಲಾಗಿರುತ್ತಾರೆ. ಮರುದಿನ ಏಳನೇ ತಾರೀಕಿನಂದು ಬೆಳಿಗ್ಗೆ ಆಕೆಗೆ ಹೆಣ್ಣು ಮಗು ಜನನವಾಗುತ್ತದೆ. ನಂತರ ದಿನಾಂಕ 8 ರಂದು ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದುತ್ತಾಳೆ. ಪರೀಕ್ಷೆಯ ಆರ್ ಟಿಪಿಸಿಆರ್ ವರದಿ ಬಂದು ಆಕೆಗೆ ಕೊರೋನ ಸೋಂಕು ದೃಢ ಎಂದಿದೆ. ಆದರೆ ಇದಕ್ಕೂ ಮೊದಲು ದಿ. 2ರಂದು ತೆಕ್ಕಲಕೋಟೆಯಲ್ಲಿ ಪರೀಕ್ಷಿಸಿದಾಗ ಸಹ ನೆಗೆಟಿವ್ ಇತ್ತು.

ಅಲ್ಲದೆ ಸಿರುಗುಪ್ಪ ಆಸ್ಪತ್ರೆಗೆ ದಾಖಲುಗೊಂಡ ಸಹ ಆರ್ ಟಿಪಿ ಫಲಿತಾಂಶವು ನೆಗೆಟಿವ್ ಬಂದಿತ್ತು ಆದರೆ ಇದೀಗ ಮಹಿಳೆಯ ಆರ್ ಟಿಪಿಸಿಆರ್ ನಲ್ಲಿ ಮಹಿಳೆಗೆ ಸೋಂಕು ದೃಢಪಟ್ಟಿದೆಇದರಿಂದಾಗಿ ಮಹಿಳೆಯರ ಊರಾದ  ತಾಲ್ಲೂಕಿನ ಬಲ್ಕುಂದಿಗೆ ವೈದ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸೋಂಕು ಹರಡದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಇಲಾಖೆ ಅಧಿಕಾರಿಗಳು ಮುಂದಾಗುತ್ತಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top