ಬೆಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಅರಣ್ಯ ಸಚಿವರಾಗಿರುವ ಈಶ್ವರ್ ಖಂಡ್ರೆ ಅವರ ಮಗ ಸಾಗರ್ ಖಂಡ್ರೆಯನ್ನು ಕಾಂಗ್ರೆಸ್ ಪಕ್ಷವು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಳೆಹುಲಿ ಮತ್ತು ಪಳಗಿದ ರಾಜಕಾರಣಿ ಭಗವಂತ ಖೂಬಾ ವಿರುದ್ಧ ಕಣಕ್ಕಿಳಿಸಿದಾಗ ಕಾಂಗ್ರೆಸ್ ನಡೆಯಿಂದ ಜನ ಆಶ್ರ‍್ಯಚಕಿತರಾಗಿದ್ದರು.
ಆದರೆ ರಾಜಕೀಯದಲ್ಲಿ ಎಳಸಾಗಿರುವ ೨೬-ರ‍್ಷ ವಯಸ್ಸಿನ ಸಾಗರ್ ಇತಿಹಾಸ ನರ‍್ಮಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸುತ್ತಿರುವ ಯುವ ಪೀಳಿಗೆಯ ನಾಯಕರಲ್ಲಿ ಸಾಗರ್ ಕೂಡ ಒಬ್ಬರು. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯುವ ನೇತಾರ, ತನ್ನ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಆಯ್ಕೆ ಮಾಡಿರುವ ಬೀದರ್ ಮಹಾಜನತೆಗೆ ಕೃತಜ್ಞತೆ ಸಲ್ಲಿಸಿದರು. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದಾಗಿ ಹೇಳಿದ ಸಾಗರ್, ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸದನಾಗಿ ಅಯ್ಕೆಯಾಗಿರುವೆ, ಶ್ರಮವಹಿಸಿ ಜನರ ಸೇವೆ ಮಾಡು, ಓದುವ ಹವ್ಯಾಸ ಬೆಳಸಿಕೊಂಡು ದಿನಕ್ಕೆ ಕನಿಷ್ಟ ಎರಡು ತಾಸು ಬೇರೆ ಬೇರೆ ವಿಷಯಗಳ ಪಠಣ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಸಲಹೆ ನೀಡಿದ್ದಾರೆ ಎಂದು ಹೇಳಿದರು